Asianet Suvarna News Asianet Suvarna News

ಮದ್ವೆಗೆ ಗೌಡರ ಹುಡುಗನೇ ಬೇಕೆಂದ ರಚಿತಾ ರಾಮ್!

ಸ್ಯಾಂಡಲ್‌ವುಡ್ ಡಿಂಪಲ್‌ ಕ್ವೀನ್ ರಚಿತಾ ರಾಮ್ ಮದುವೆ ಆಗುವ ಮನಸ್ಸು ಮಾಡಿದ್ದಾರಾ? 'ಸೀತಾರಾಮ ಕಲ್ಯಾಣ' ಚಿತ್ರ ಬಿಡುಗಡೆಗೆ ಸಂಬಂಧಿಸಿದ ಪ್ರೆಸ್‌ ಮೀಟ್‌ನಲ್ಲಿ ಈ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ ರಚಿತಾ.

Actress Rachita Ram Life Partner searching secret Revealed
Author
Bengaluru, First Published Jan 25, 2019, 12:28 PM IST
  • Facebook
  • Twitter
  • Whatsapp

'ಸೀತಾರಾಮ ಕಲ್ಯಾಣ' ಬಿಡುಗಡೆ ಸಂಭ್ರಮದಲ್ಲಿದ್ದಾರೆ ಸ್ಯಾಂಡಲ್‌ವುಡ್‌ನ ಡಿಂಪಲ್ ಚೆಲುವೆ ರಚಿತಾ ರಾಮ್. ಕನ್ನಡ ಚಿತ್ರರಂಗದಲ್ಲಿಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಕೆಲವೇ ಕೆಲವು ನಟಿಯರಲ್ಲಿ ಇವರೂ ಒಬ್ಬರಾಗಿದ್ದು, ಆಗಾಗ ಇವರ ಬಗ್ಗೆ ಗಾಳಿ ಸುದ್ದಿಗಳು ಹರಿದಾಡೋದು ಸಹಜ. ಅದೂ ಅಲ್ಲದೇ ಬರೀ ಸ್ಟಾರ್ ನಟರೊಂದಿಗೆ ಮಾತ್ರ ಸಿನಿಮಾ ಮಾಡುತ್ತಾರೆಂಬ ಆರೋಪವೂ ಈ ಮುದ್ದು ಮುಖದ ನಟಿ ಮೇಲಿದೆ.

ಆದರೆ, ಫುಲ್ ಡಿಮ್ಯಾಂಡ್‌ನಲ್ಲಿರೋ ಈ ನಟಿ 'ಸೀತಾರಾಮ ಕಲ್ಯಾಣ' ಚಿತ್ರದ ಪ್ರೆಸ್ ಮೀಟ್‌ನಲ್ಲಿ ಮದುವೆ ಬಗ್ಗೆ ಒಂದು ಸುದ್ದಿ ಬಿಚ್ಚಿಟ್ಟಿದ್ದು, ಎಲ್ಲರ ಕುತೂಹವನ್ನು ಹೆಚ್ಚಿಸಿದ್ದಾರೆ.

ಸಹಜವಾಗಿ ಪತ್ರಕರ್ತರಿಂದ ಬಂದ ಮದ್ವೆ ಪ್ರಶ್ನೆಗೆ, 'ಲವ್ ಮ್ಯಾರೇಜ್ ಆದರೂ ಓಕೆ, ಅರೆಂಜ್ಡ್ ಆದರೂ ಓಕೆ. ಆದರೆ, ನಾವು ಗೌಡರಾಗಿರೋದ್ರಿಂದ ಗೌಡರ ಹುಡಗನೇ ಬೇಕು....' ಎಂದು ಹೇಳಿ, ಮುಗುಳ್ನಗೆ ಬೀರಿದ್ದಾರೆ. ಅವರು ಹೇಳಿದ ಮಾತಿಗೂ, ಅವರ ನಗುವಿಗೂ ಎನೋ ಲಿಂಕ್ ಇರಬಹುದಾ ಎಂಬುವುದು ಇದೀಗ ಗಾಂಧಿನಗರದಲ್ಲಿ ಹರಿದಾಡುತ್ತಿರೋ ಹೊಸ ಗಾಸಿಪ್.

ನಿಖಿಲ್ ಕುಮಾರಸ್ವಾಮಿಯನ್ನು ರಚಿತಾ ರಾಮ್ ಈ ಪರಿ ಹೊಗಳಿದ್ಯಾಕೆ?

ರಚಿತಾ ಅವರು ಹೀಗೆ ಹೇಳಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಲ್ಲಿ ನೋಡಿದರೂ ಈ ವೀಡಿಯೋ ಹರಿದಾಡುತ್ತಿದೆ. 'ಸೀತಾರಾಮ ಕಲ್ಯಾಣ'ದೊಂದಿಗೆ 'ರುಸ್ತುಂ' ಚಿತ್ರದಲ್ಲಿಯೂ ರಚಿತಾ ತೆರೆ ಮೇಲೆ ಕಾಣಿಸಲಿದ್ದಾರೆ.

 

 
 
 
 
 
 
 
 
 
 
 
 
 

😂😂 #hudgur_adda #by2bengaluru . . Follow for more @hudgur_adda

A post shared by HUDGUR ADDA (@hudgur_adda) on Jan 24, 2019 at 4:48am PST

ದೊಡ್ಡ ಗೌಡರ ಕುಟುಂಬದ ಕುಡಿ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿಯೊಂದಿಗೆ ರಚಿತಾ 'ಸೀತರಾಮ ಕಲ್ಯಾಣ'ದಲ್ಲಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಕಳೆದ ವಿಧಾನ ಸಭೆ ಚುನಾವಣೆ ವೇಳೆ ಜೆಡಿಎಸ್ ಪರವಾಗಿಯೂ ರಚಿತಾ ರಾಮ್ ಪ್ರಚಾರ ಮಾಡಿದ್ದರು. ಈ ಎಲ್ಲ ಬೆಳವಣಿಗೆಗಳಿಗೂ, ರಚಿತಾ ಸ್ಟೇಟ್‌ಮೆಂಟ್‌ಗೂ ಲಿಂಕ್ ಆಗುತ್ತಿದೆ ಎನ್ನೋ ಗುಸು ಗುಸು ಈಗ ಎಲ್ಲೆಡೆ ಕೇಳಿ ಬರುತ್ತಿದೆ.

25 ದಿನದಲ್ಲಿ 7 ಕೆಜಿ ತೂಕ ಇಳಿಸಿಕೊಂಡ ರಚಿತಾರಾಮ್

Follow Us:
Download App:
  • android
  • ios