ಕಾಮಾಕ್ಯದೇವಿ ದೇವಾಲಯಕ್ಕೆ ಭೇಟಿ ನೀಡಿ ನಟ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮೀ ಅವರು ಪೂಜೆ ಸಲ್ಲಿಸಿದ್ದಾರೆ. ಬಳಿಕ ವಿಜಯಲಕ್ಷ್ಮೀ 'ನಿಮ್ಮನ್ನು ಜನರು ಅದೆಷ್ಟೇ ಕೆಳಕ್ಕೆ ತಳ್ಳಲು ನೋಡಿದರೂ ಕೂಡ, ದೇವರು ನಿಮ್ಮನ್ನು ಮೇಲ್ಮಟ್ಟಕ್ಕೆ ಕರೆದುಕೊಂಡು ಹೋಗುತ್ತಾನೆ. ನಿಮಗೆಲ್ಲರಿಗೂ ದೇವರು ಒಳ್ಳೆಯದು ಮಾಡಲಿ…

ನಟ ದರ್ಶನ್ (Darshan Thoogudeepa) ಆರೋಪಿ ಎನ್ನಿಸಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Case) ಕೇಸ್ ವಿಚಾರಣೆ ಸದ್ಯ ಸುಪ್ರೀಂ ಕೋರ್ಟ್ ಅಂಗಳ ತಲುಪಿರುವುದು ಗೊತ್ತೇ ಇದೆ. ಹೈಕೋರ್ಟ್ ಅಂಗಳ ದಾಟಿ, ಇದೀಗ ಸುಪ್ರೀಂ ಕೋರ್ಟ್ ತಲುಪಿರುವ ರೇಣುಕಾಸ್ವಾಮಿ ಕೊಲೆ ಕೇಸ್‌, ಇದೀಗ ತೀವ್ರ ಕುತೂಹಲ ಸೃಷ್ಟಿಸಿರುವುದು ಹೊಸ ಸಂಗತಿಯೇನಲ್ಲ. ಇದರ ನಡುವೆ, ನಟ ದರ್ಶನ್ ಫ್ಯಾನ್ಸ್ ಹಾಗೂ ನಟಿ ರಮ್ಯಾ ನಡುವಿನ ಸೋಷಿಯಲ್ ಪೋಸ್ಟ್ ವಾರ ತಾರಕ್ಕೇರಿದೆ. ಜೊತೆಯಲ್ಲೇ ನಟ ಪ್ರಥಮ್ ಕೂಡ ದರ್ಶನ್ ಫ್ಯಾನ್ಸ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ಬೆಳವಣಿಗೆಗಳ ಮಧ್ಯೆ ಇನ್ನೂ ಒಂದು ಡೆವಲಪ್‌ಮೆಂಟ್ ಆಗಿದೆ.

ಅದು ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ (Vijayalakshmi Darshan Thoogudeepa) ಮತ್ತು ಪವಿತ್ರಾ ಗೌಡ (Pavithra Gaowda) ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು. ಹೌದು, ಮೊನ್ನೆ ಅಸ್ಸಾಂನ ಕಾಮಾಕ್ಯದೇವಿ ದೇವಾಲಯಕ್ಕೆ ಭೇಟಿ ನೀಡಿ ನಟ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮೀ ಅವರು ಪೂಜೆ ಸಲ್ಲಿಸಿದ್ದಾರೆ. ಆ ಬಳಿಕ ವಿಜಯಲಕ್ಷ್ಮೀ ಅವರು 'ನಿಮ್ಮನ್ನು ಜನರು ಅದೆಷ್ಟೇ ಕೆಳಕ್ಕೆ ತಳ್ಳಲು ನೋಡಿದರೂ ಕೂಡ, ದೇವರು ನಿಮ್ಮನ್ನು ಮೇಲ್ಮಟ್ಟಕ್ಕೆ ಕರೆದುಕೊಂಡು ಹೋಗುತ್ತಾನೆ. ನಿಮಗೆಲ್ಲರಿಗೂ ದೇವರು ಒಳ್ಳೆಯದು ಮಾಡಲಿ...' ಎಂದು ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಅಕೌಂಟ್‌ಮಲ್ಲಿ ಪೋಸ್ಟ್ ಮಾಡಿದ್ದಾರೆ.

ಇತ್ತ, ದರ್ಶನ್ ಪ್ರೇಯಸಿ ಎನ್ನಲಾಗಿರುವ ಪವಿತ್ರಾ ಗೌಡ ಅವರು 'ಮನುಷ್ಯರು ಬಣ್ಣ ಬದಲಾಯಿಸಿದರೇನು.. ರಾಯರು ನಮ್ಮ ಜೀವನವನ್ನೇ ಬದಲಾಯಿಸುತ್ತಾರೆ..' ಎಂದು ತಮ್ಮ ಸೋಷಿಯಲ್ ಮೀಡಿಯಾಪೇಜ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದೇ ಪೋಸ್ಟ್ ಕೆಳಗಡೆ, 'MY Silence is not weekness.. Its fairh in God's Justice...' ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಅವರಿಬ್ಬರ ಸೋಷಿಯಲ್ ಜಟಾಪಟಿ ಅದರಲ್ಲಿ ಆಸ್ಕ್ತಿ ಇರುವವರಿಗೆ ಖಂಡಿತ ಕುತೂಹಲ ಕೆರಳಿಸುತ್ತಿದೆ. ಈ ಇಬ್ಬರ ಪೋಸ್ಟ್ ಮೂಲಕ ಯಾವ ಸಂಗತಿ ಜಗತ್ತಿಗೆ ಅರ್ಥವಾಗುತ್ತಿದೆ..?

ಇವೆಲ್ಲಾ ಆಯ್ತು.. ಇದೀಗ, ನಟಿ ರಮ್ಯಾ ಹಾಗೂ ದರ್ಶನ್ ಫ್ಯಾನ್ಸ್ ಗಲಾಟೆಗೆ ಫಿಲಂ ಚೇಂಬರ್ ಕೂಡ ಎಂಟ್ರಿ ಕೊಟ್ಟಿದೆ. ಅತ್ತ ನಟ ಪ್ರಥಮ್ ದರ್ಶನ್ ಫ್ಯಾನ್ಸ್‌ಗೆ ಬುದ್ಧಿ ಕಲಿಸದೇ ಬಿಡುವುದಿಲ್ಲ' ಎಂದು ವಾರ್ನ್ ಮಾಡಿದ್ದಾರೆ. ನಟಿ ರಮ್ಯಾ ಅವರಂತೂ 'ಸೋಷಿಯಲ್ ಮೀಡಿಯಾಗಳಲ್ಲಿ ಹೆಣ್ಣುಮಕ್ಕಳ ಬಗ್ಗೆ ಕೆಟ್ಟ ಕಾಮೆಂಟ್ ಪೋಸ್ಟ್ ಮಾಡೋದು ನಿಲ್ಲುವವರೆಗೂ ನಾನು ಈ ಹೋರಾಟದಿಂದ ಯಾವತ್ತೂ ಹಿಂದೆ ಸರಿಯವುದಿಲ್ಲ; ಎಂದಿದ್ದಾರೆ. ಮುಂದೇನು ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.