ಬಾಲಿವುಡ್ ನಟಿ ನಿಖಿತಾ ರೆಡ್ ಕಾರ್ಪೆಟ್ ಮೇಲೆ ಬರುತ್ತಿದ್ದಂತೆ ಮಹಿಳಾ ಅಭಿಮಾನಿಯೊಬ್ಬರು ಸೆಲ್ಫಿ ಕ್ಲಿಕ್ಕಿಸಲು ಆಗಮಿಸಿದ್ದಾರೆ. ಸೆಲ್ಫಿ ಕ್ಲಿಕ್ ಮಾಡಿದ ಬೆನ್ನಲ್ಲೇ ಬಲವಂತವಾಗಿ ಲಿಪ್ ಕಿಸ್ ಮಾಡಿದ ಘಟನೆ ನಡೆದಿದೆ. ತಳ್ಳಿದರೂ ಬಿಡದೆ ಕಿಸ್ ಮಾಡಿದ್ದಾರೆ.
ಮುಂಬೈ (ಆ.09) ಸಿನಿಮಾ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ನಿಖಿತಾ ರಾವಲ್ ಮುಜುಗರಕ್ಕೀಡಾದ ಘಟನೆ ನಡೆದಿದೆ. ರೆಡ್ ಕಾರ್ಪೆಟ್ ಮೇಲೆ ಕ್ಯಾಮೆರಾಗೆ ಫೋಸ್ ನೀಡುತ್ತಿದ್ದಂತೆ ಮಹಿಳಾ ಅಭಿಮಾನಿಯೊಬ್ಬರು ಆಗಮಿಸಿ ಸೆಲ್ಫಿ ಕೇಳಿದ್ದಾರೆ. ಪ್ರೀತಿಯಿಂದಲೇ ಅಭಿಮಾನಿ ಜೊತೆ ಸೆಲ್ಫಿ ಫೋಸ್ ನೀಡುತ್ತದ್ದಂತೆ ಪರಿಸ್ಥಿತಿ ಬದಲಾಗಿದೆ. ನಿಖಿತಾ ರಾವಲ್‌ಗೆ ಬಲವಂತವಾಗಿ ಲಿಪ್ ಕಿಸ್ ನೀಡಿದ್ದಾರೆ. ತಳ್ಳಲು ಯತ್ನಿಸಿದರೂ ನಟಿಗೆ ಸಾಧ್ಯವಾಗದೆ ಆಘಾತಕ್ಕೊಳಗಾದ ಘಟನೆ ನಡೆದಿದೆ. ಈ ವಿಡಿಯೋ ಇದೀಗ ಭಾರಿ ಕೋಲಾಹಲ ಸೃಷ್ಟಿಸಿದೆ.
ರೆಡ್ ಕಾರ್ಪೆಟ್ ಮೇಲೆ ಬೆಚ್ಚಿ ಬಿದ್ದ ನಟಿ
ಬಾಲಿವುಡ್ ಹಾಗೂ ತೆಲುಗು ಸಿನಿಮಾಗಳಲ್ಲಿ ನಿಖಿತಾ ರಾವಲ್ ಹೆಚ್ಚು ಸಕ್ರಿಯವಾಗಿದ್ದಾರೆ. ಆಗಸ್ಟ್ 8 ರಂದು ಸಿನಿಮಾ ಕಾರ್ಯಕ್ರಮ ನಡೆದಿತ್ತು. ಸಂಜೆ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಆಹ್ವಾನಿತ ನಟಿ ನಿಖಿತಾ ರಾವಲ್ ರೆಡ್ ಕಾರ್ಪೆಟ್ ಮೇಲೆ ನಡೆದುಕೊಂಡು ಬಂದಿದ್ದಾರೆ. ಇದೇ ವೇಳೆ ಪಾಪರಾಜಿಗಳು ಫೋಟೋಗೆ ಫೋಸ್ ನೀಡಲು ಸೂಚಿಸಿದ್ದಾರೆ. ಇದರಂತೆ ಮುಗುಳು ನಗುತ್ತಾ ಫೋಸ್ ನೀಡಿದ್ದಾರೆ. ಈ ವೇಳೆ ಅಚಾನಕ್ಕಾಗಿ ಮಹಿಳಾ ಅಭಿಮಾನಿಯೊಬ್ಬರು ಸೆಲ್ಫಿ ಕ್ಲಿಕ್ಕಿಸಲು ಆಗಮಿಸಿದ್ದಾರೆ. ಬಳಿಕ ನಡೆದ ಘಟನೆಯಿಂದ ನಟಿ ನಿಖಿತಾ ರಾವಾಲ್ ಬೆಚ್ಚಿ ಬಿದ್ದಿದ್ದಾರೆ.
ಬಡಿಸಿಕೊಳ್ಳಲು ಆಗದೆ ಚಡಪಡಿಸಿದ ನಿಖಿತಾ ರಾವಲ್
ನಟಿ ನಿಖಿತಾ ರಾವಲ್‌ಗಿಂತ ಗಟ್ಟಿಮುಟ್ಟಾಗಿದ್ದ ಮಹಿಳಾ ಅಭಿಮಾನಿ ಸೆಲ್ಫಿ ಕೇಳಿದ್ದಾರೆ. ಇತ್ತ ನಿಖಿತಾ ರಾವಲ್ ಪ್ರೀತಿಯಿಂದ ಮಹಿಳಾ ಅಭಿಮಾನಿ ಜೊತೆ ಸೆಲ್ಫಿ ಕ್ಲಿಕಿಸಿದ್ದಾರೆ. ಹಲವು ಬಾರಿ ಅಭಿಮಾನಿಗಳಿಗೆ ಸೆಲೆಬ್ರೆಟಿಗಳು ಸೆಲ್ಫಿ ಬಳಿಕ ಶೇಕ್‌ಹ್ಯಾಂಡ್ ಅಥವಾ ಹಗ್ ಮಾಡುತ್ತಾರೆ. ಮಹಿಳಾ ಅಭಿಮಾನಿ ಸ್ವತಃ ಹಗ್ ಮಾಡಿದ್ದಾರೆ. ಆಗಲೂ ಸಾಮಾನ್ಯ ಎಂಬಂತೆ ನಟಿ ನಿಖಿತಾ ರಾವಲ್ ಸುಮ್ಮನಿದ್ದರು. ಬಳಿಕ ಏಕಾಏಕಿ ನಿಖಿತಾ ರಾವಲ್ ಹಿಡಿದು ಚುಂಬಿಸಿದ್ದಾರೆ. ನಿಖಿತಾ ರಾವಲ್ ಬಿಡಿಸಿಕೊಳ್ಳಲು, ತಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಸಾಧ್ಯವಾಗಲಿಲ್ಲ, ಕೆಲ ಸೆಕೆಂಡ್‌ಗಳ ಕಾಲ ಮಹಿಳಾ ಅಭಿಮಾನಿ ನಟಿಗೆ ಲಿಪ್ ಕಿಸ್ ನೀಡಿದ್ದಾರೆ.
ಗಾಬರಿಗೊಂಡ ನಟಿ ನಿಖಿತಾ
ನಟಿ ಎಲ್ಲಾ ಪ್ರಯತ್ನಗಳು ವಿಫಲಗೊಂಡಿತು. ಕೊನೆಗೆ ಮಹಿಳಾ ಅಭಿಮಾನಿಯೇ ನಟಿಯನ್ನು ಬಿಟ್ಟಿದ್ದಾರೆ. ಬಿಟ್ಟ ಬಳಿಕವೂ ಕೆನ್ನಗೆ ಕಿಸ್ ನೀಡಿ ಮಹಿಳಾ ಅಭಿಮಾನಿ ತೆರಳಿದ್ದಾರೆ. ಅಷ್ಟರಲ್ಲೇ ಸಿಬ್ಬಂದಿಗಳು ಆಗಮಿಸಿ ಮಹಿಳಾ ಅಭಿಮಾನಿಯನ್ನು ಕಾರ್ಯಕ್ರಮದಲ್ಲಿ ಹೊರಗೆ ಹಾಕಿದ್ದಾರೆ. ಆದರೆ ಇತ್ತ ನಿಖಿತಾ ಘಟನೆಯಿಂದ ಗಾಬರಿಗೊಂಡಿದ್ದಾರೆ. ಒಂದು ಕ್ಷಣ ಮಾತು ಬರದೇ ನಿಂತುಬಿಟ್ಟಿದ್ದಾರೆ. ಏನಾಯಿತು ಅನ್ನೋವಷ್ಟರಲ್ಲೇ ಇಷ್ಟೆಲ್ಲಾ ಘಟನೆ ನಡೆದು ಹೋಗಿತ್ತು. ಸುಧಾರಿಸಿಕೊಳ್ಳಲು ಕೆಲ ಹೊತ್ತು ಬೇಕಾಯಿತು.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ರೆಡ್ ಕಾರ್ಪೆಟ್ ಕಾರ್ಯಕ್ರಮದಲ್ಲಿನ ಭದ್ರತೆ ಕುರಿತು ಪ್ರಶ್ನಿಸಿದ್ದಾರೆ. ನಟಿಯರ ಬಳಿ ತೆರಳಲು ಅವಕಾಶ ನೀಡಿದ್ದು ಯಾಕೆ, ಭದ್ರತೆ ಎಲ್ಲಿತ್ತು? ಎಂದು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಇದು ಸಂಪೂರ್ಣ ಭದ್ರತೆ ಲೋಪ ಎಂದು ಹಲವರು ಕಳವಳ ವ್ಯಕ್ತಪಡಿಸಿದ್ದಾರೆ. ಸಿನಿಮಾ ಕಾರ್ಯಕ್ರಮಗಳಲ್ಲಿ ಈ ರೀತಿಯ ಸಣ್ಣ ಲೋಪವೂ ಅತೀ ದೊಡ್ಡ ಗಂಡಾಂತರಕ್ಕೆ ಕಾರಣವಾಗಲಿದೆ. ಸೆಲೆಬ್ರೆಟಿಗಳು ಜೀವಕ್ಕೂ ಅಪಾಯವಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


