ಮಂಡ್ಯದ ಗಂಡು, ರೆಬೆಲ್ ಸ್ಟಾರ್, ಚಿತ್ರರಂಗದ ಯಜಮಾನ ಹೀಗೆ ಅನೇಕ ಹೆಸರುಗಳಿಂದ ಕರೆಸಿಕೊಂಡಿದ್ದ ಅಂಬಿ ಇನ್ನು ನೆನಪು ಮಾತ್ರವಷ್ಟೆ. ಇವರ ಲವ್ ಸ್ಟೋರಿ ತುಂಬಾ ಇಂಟರೆಸ್ಟಿಂಗ್!

ಮೊಟ್ಟ ಮೊದಲ ಬಾರಿ ಸುಮಲತಾ ಅವರು ಅಂಬಿಯನ್ನು ಭೇಟಿಯಾದದ್ದು ವುಡ್‌ಲ್ಯಾಂಡ್ ಹೊಟೇಲ್‌ನಲ್ಲಿ. ಅಲ್ಲಿಂದ ಚಿಗುರಿತು ಪ್ರೀತಿ. ಅಂಬಿಗೆ ಸುಮಲತಾ ಕಣ್ಣುಗಳೆಂದರೆ ತುಂಬಾ ಇಷ್ಟವಿತ್ತಂತೆ. ಮೊದಲು ಪ್ರಪೋಸ್ ಮಾಡಿದ್ದು ಯಾರು ಗೊತ್ತಾ? ಅದು ಒನ್ ಆ್ಯಂಡ್ ಒನ್ಲಿ ರೆಬಲ್ ಸ್ಟಾರ್ ಅಂಬರೀಶ್.

ಅಂದು ಅಂಬಿ ಪ್ರಪೋಸ್ ಮಾಡಿದ ಪೋಟೋವನ್ನು ಸುಮಲತ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಾಕಿ ಪತಿಯನ್ನು ನೆನೆಸಿಕೊಂಡಿದ್ದಾರೆ. ಲವ್..ಲಾಸ್ಟ್ ಲೈಫ್‌ ಟೈಂ...ಇಟ್ ನೀಡ್ಸ್ ಟೂ. My love ಅಭಿಷೇಕ್ ಹಾಗೂ ನನ್ನನ್ನು ಸದಾ ನೋಡುತ್ತಿರುತ್ತಾರೆ ಹಾಗೂ ಕಾಯುತ್ತಾರೆ. ನಮ್ಮ ಮಗನ ಮೊದಲ ಚಿತ್ರದ ಟೀಸರ್‌ ಬಿಡುಗಡೆ ಆಗುತ್ತಿದೆ. ಎಲ್ಲರಿಗೂ Happy #ValentinesDay" ಎಂದು ಬರೆದುಕೊಂಡಿದ್ದಾರೆ.