ಕುಡಿದ ಅಮಲಿನಲ್ಲಿ ಸ್ಕೈಬಾರ್ ನಲ್ಲಿ ಜಗಳ ತೆಗೆದಿದ್ದಾನೆ. ಗಲಾಟೆ ಆಗುತ್ತಿದ್ದಂತೆ ಸ್ಕೈಬಾರ್​​​ ಸಿಬ್ಬಂದಿ ಕಬ್ಬನ್ ಪಾರ್ಕ್​ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕುಡಿದ ಮತ್ತಿನಲ್ಲಿ ಸೀರಿಯಲ್​ ಌಕ್ಟರ್​ ಜೊತೆ ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ‘ಸರ್ಪ ಸಂಬಂಧ’ ಧಾರಾವಾಹಿಯ ಪ್ರಮುಖ ಪಾತ್ರಧಾರಿ ನಿರುಷಾ ಮೇಲೆ ಬಿಲ್ಡರ್​​ ಪುತ್ರ ದರ್ಪ ತೋರಿದ್ದಾನೆ. ಖ್ಯಾತ ಬಿಲ್ಡರ್ ಶ್ರೀನಿವಾಸ್ ಮಗ ದರ್ಶನ್, ಕುಡಿದ ಅಮಲಿನಲ್ಲಿ ಸ್ಕೈಬಾರ್ ನಲ್ಲಿ ಜಗಳ ತೆಗೆದಿದ್ದಾನೆ. ಗಲಾಟೆ ಆಗುತ್ತಿದ್ದಂತೆ ಸ್ಕೈಬಾರ್​​​ ಸಿಬ್ಬಂದಿ ಕಬ್ಬನ್ ಪಾರ್ಕ್​ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು, ಬಿಲ್ಡರ್​ ಪುತ್ರ ಹಾಗೂ ಸ್ನೇಹಿತರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದಾರೆ.