ಶಶಿ ಕುಮಾರ್ ಪುತ್ರ ಆದಿತ್ಯ ಶಶಿಕುಮಾರ್‌ಅಭಿನಯದ ಚೊಚ್ಚಲ ಚಿತ್ರ ಮೊಡವೆಗೆ ಅಪೂರ್ವ ನಾಯಕಿ ಆಗಿದ್ದಾರೆ. ಈಗಾಗಲೇ ಆ ಚಿತ್ರಕ್ಕೆ ಚಿತ್ರೀಕರಣವೂ ಮುಗಿದಿದೆ. ಈ ಚಿತ್ರದಲ್ಲಿ ಪಕ್ಕಾ ಹೋಮ್ಲಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಅಪೂರ್ವ. ‘ಚಿತ್ರದಲ್ಲಿ ನನ್ನ ಪಾತ್ರ ಬಹಳ ಚೆನ್ನಾಗಿದೆ. ಪಕ್ಕಾ ಹಳ್ಳಿ ಹುಡುಗಿ. ಚಿತ್ರದ ಉದ್ದಕ್ಕೂ ಲಂಗ ದಾವಣಿ ತೊಟ್ಟು, ಹಳ್ಳಿ ಹುಡುಗಿಯಂತೆ ಅಭಿನಯಿಸುವುದಕ್ಕೆ ಅವಕಾಶ ಸಿಕ್ಕಿದೆ. ನಟನೆಗೂ ಸಾಕಷ್ಟು ಅವಕಾಶ ದೊರೆತಿದೆ. ಸಿನಿಮಾ ಚೆನ್ನಾಗಿ ಬಂದಿದೆ ಎನ್ನುವ ವಿಶ್ವಾಸವೂ ಇದೆ. ಆದರೆ ನನ್ನ ಗಮನ ಈಗ ಹೊಸ ಬಗೆಯ ಪಾತ್ರಗಳ ಕಡೆಯಿದೆ. ಗ್ಲಾಮರಸ್ ಪಾತ್ರಗಳಲ್ಲೂ ಕಾಣಿಸಿಕೊಳ್ಳಬೇಕೆನ್ನುವ ಆಸೆಯಿದೆ. ಅಂತಹ ಪಾತ್ರಗಳು ಸಿಗಬಹುದೆನ್ನುವ ನಿರೀಕ್ಷೆಯಲ್ಲಿದ್ದೇನೆ’ ಎನ್ನುತ್ತಾರೆ ಅಪೂರ್ವ.

ಶಶಿಕುಮಾರ್ ಪುತ್ರ ಸ್ಯಾಂಡಲ್’ವುಡ್’ಗೆ ಎಂಟ್ರಿ

ರವಿಚಂದ್ರನ್ ಅಭಿನಯದ ‘ಅಪೂರ್ವ’ಚಿತ್ರದೊಂದಿಗೆ ಬೆಳ್ಳಿತೆರೆಗೆ ಬಂದ ಮೈಸೂರು ಮೂಲದ ಅಪೂರ್ವ, ಆ ಚಿತ್ರ ಬಂದು ನಂತರ ಎರಡು ವರ್ಷ ಸಿನಿಮಾ ಜಗತ್ತಿನಿಂದಲೇ ದೂರ ಇದ್ದರು.  ಮತ್ತೆ ಶರಣ್ ಅಭಿನಯದ ‘ವಿಕ್ಟರಿ 2’ ಮೂಲಕ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡು ನಟಿಯಾಗಿ ಬ್ಯುಸಿಯಾಗುವ ನಿರೀಕ್ಷೆಯಲ್ಲಿದ್ದಾರೆ.