Bollywood Action Movie: ಚಿತ್ರರಂಗದಲ್ಲಿ ಕೆಲವು ನಟಿಯರು ಕೇವಲ ಗ್ಲಾಮರ್‌ಗೆ ಸೀಮಿತವಾಗ್ತಾರೆ. ಆದರೆ ಇನ್ನೂ ಕೆಲವರು ತಾವೇನು ಅನ್ನೋದನ್ನ ಪ್ರೂವ್ ಮಾಡಲು ಹೊಸ ಹೊಸ ಪ್ರಯೋಗಗಳಿಗೆ ಕೈ ಹಾಕ್ತಾರೆ.

ಚಿತ್ರರಂಗದಲ್ಲಿ ಕೆಲವು ನಟಿಯರು ಕೇವಲ ಗ್ಲಾಮರ್‌ಗೆ ಸೀಮಿತವಾಗ್ತಾರೆ. ಆದರೆ ಇನ್ನೂ ಕೆಲವರು ತಾವೇನು ಅನ್ನೋದನ್ನ ಪ್ರೂವ್ ಮಾಡಲು ಹೊಸ ಹೊಸ ಪ್ರಯೋಗಗಳಿಗೆ ಕೈ ಹಾಕ್ತಾರೆ. ಈಗ ಬಾಲಿವುಡ್‌ನ ಟಾಪ್ ನಟಿ ಆಲಿಯಾ ಭಟ್ ಇಡೀ ದೇಶವೇ ಹುಬ್ಬೇರಿಸುವಂತಹ ಸಾಹಸಕ್ಕೆ ಕೈ ಹಾಕಿದ್ದಾರೆ. ಆಲಿಯಾ ನಟಿಸಿರೋ 'ಆಲ್ಫಾ' ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹೊಸ ಬಿರುಗಾಳಿ ಎಬ್ಬಿಸಿದೆ. ಕ್ಯೂಟ್ ಆಗಿ ಕಾಣ್ತಿದ್ದ ಆಲಿಯಾ, ಈಗ ರಗಡ್ ಆಕ್ಷನ್ ಕ್ವೀನ್ ಆಗಿ ಅಬ್ಬರಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಾಲಿವುಡ್‌ನ ಸ್ಟಾರ್ ನಿರ್ಮಾಣ ಸಂಸ್ಥೆ 'ಯಶ್ ರಾಜ್ ಫಿಲ್ಮ್ಸ್'ನ ಸ್ಪೈ ಯೂನಿವರ್ಸ್ ಅಡಿಯಲ್ಲಿ ಮೂಡಿಬರುತ್ತಿರುವ 'ಆಲ್ಫಾ' ಚಿತ್ರದ ಟ್ರೇಲರ್ ಈಗ ಯೂಟ್ಯೂಬ್‌ನಲ್ಲಿ ನಂಬರ್ ಒನ್ ಟ್ರೆಂಡಿಂಗ್‌ನಲ್ಲಿದೆ. ಈ ಟ್ರೇಲರ್‌ನಲ್ಲಿ ಆಲಿಯಾ ಭಟ್ ಕಣ್ಣುಗಳಲ್ಲಿ ಕಾಣುವ ಕ್ರೌರ್ಯ, ಅವರು ಮಾಡಿರುವ ರಿಯಲಿಸ್ಟಿಕ್ ಆಕ್ಷನ್ ಸೀನ್‌ಗಳನ್ನ ನೋಡಿದವರು ಬಿ ಟೌನ್​ಗೆ ಹೊಸ ಆಕ್ಷನ್ ಕ್ವೀನ್ ಆಗಮನ ಆಗಿದೆ ಅಂತಿದ್ದಾರೆ. ಈ ಹಿಂದೆ ಕೇವಲ ರೊಮ್ಯಾಂಟಿಕ್ ಮತ್ತು ಎಮೋಷನಲ್ ಪಾತ್ರಗಳಲ್ಲೇ ಹೆಚ್ಚಾಗಿ ಮಿಂಚಿದ್ದ ಆಲಿಯಾ, ಇದೇ ಮೊದಲ ಬಾರಿಗೆ ಫುಲ್ ಲೆಂತ್ ಆಕ್ಷನ್ ಸಿನಿಮಾದಲ್ಲಿ ಅಖಾಡಕ್ಕೆ ಇಳಿದಿದ್ದಾರೆ.

ಟ್ರೇಲರ್ ನೋಡಿದವರೆಲ್ಲಾ ಆಲಿಯಾನ 'ಲೇಡಿ ಧುರಂಧರ್' ಅಂತ ಕರೀತಾ ಇದ್ದಾರೆ. ಯಶ್ ರಾಜ್ ಸ್ಪೈ ಯುನಿವರ್ಸ್​ ಫಿಲ್ಮ್ಸ್ ಅಂದಾಕ್ಷಣ ನಮಗೆ ನೆನಪಾಗೋದು ಸಲ್ಮಾನ್ ಖಾನ್ ಅವರ 'ಟೈಗರ್' ಅಥವಾ ಶಾರುಖ್ ಅವರ 'ಪಠಾಣ್'. ಆದರೆ ಈ ಪುರುಷ ಪ್ರಧಾನ ಸ್ಪೈ ಜಗತ್ತಿಗೆ ಈಗ ಒಬ್ಬಳೇ ಒಬ್ಬಳು ಹೆಣ್ಣುಮಗಳು ಎಂಟ್ರಿ ಕೊಟ್ಟಿದ್ದಾಳೆ. ಅವಳೇ ಆಲ್ಫಾ ಆಲಿಯಾ. ಟ್ರೇಲರ್‌ನಲ್ಲಿ ಇವರ ಆಕ್ಷನ್ ಸೀಕ್ವೆನ್ಸ್ ನೋಡಿದವರು ಸಲ್ಮಾನ್-ಶಾರುಖ್‌ಗೆ ಈಕೆ ಕಮ್ಮಿ ಇಲ್ಲ, ಈಕೆ ನಿಜವಾದ ಲೇಡಿ ಧುರಂಧರ್ ಅಂತ ಹೊಗಳ್ತಾ ಇದ್ದಾರೆ.

ಟ್ರೇಲರ್‌ನಲ್ಲಿ ಕೇವಲ ಗನ್ ಫೈಟ್ ಅಷ್ಟೇ ಇಲ್ಲ, ಬದಲಿಗೆ ಮಣ್ಣಿನಲ್ಲಿ ಬಿದ್ದು ಒದ್ದಾಡುವ, ಮಾರ್ಷಲ್ ಆರ್ಟ್ಸ್ ಶೈಲಿಯ ರಿಯಲ್ ಫೈಟ್ಸ್‌ಗಳಿವೆ. ಬಾಲಿವುಡ್‌ನಲ್ಲಿ ಮಹಿಳಾ ಪ್ರಧಾನ ಆಕ್ಷನ್ ಸಿನಿಮಾಗಳು ಬರುವುದು ಅಪರೂಪ. ಬಂದರೂ ಅವು ಕಮರ್ಷಿಯಲ್ ಆಗಿ ಅಷ್ಟಾಗಿ ಸಕ್ಸಸ್ ಆಗಲ್ಲ ಎಂಬ ಟಾಕ್ ಇತ್ತು. ಆದರೆ ಆಲಿಯಾ ಭಟ್ ಈ ಎಲ್ಲಾ ಹಳೇ ರೆಕಾರ್ಡ್ಸ್ ಬ್ರೇಕ್ ಮಾಡಲು ರೆಡಿಯಾಗಿದ್ದಾರೆ. ಶರ್ವರಿ ವಾಗ್ ಕೂಡ ಈ ಚಿತ್ರದಲ್ಲಿ ಆಲಿಯಾ ಜೊತೆ ಸಾಹಸ ಮುಖ ತೋರಿಸಿದ್ದಾರೆ. ಟ್ರೇಲರ್‌ನಲ್ಲಿನ ಪ್ರತಿಯೊಂದು ಫ್ರೇಮ್ ಕೂಡ ಹಾಲಿವುಡ್ ರೇಂಜ್‌ನಲ್ಲಿದೆ." ಈ ಚಿತ್ರದ ಆಕ್ಷನ್ ದೃಶ್ಯಗಳಿಗಾಗಿ ಆಲಿಯಾ ಭಟ್ ತಿಂಗಳುಗಟ್ಟಲೆ ಕಠಿಣ ತರಬೇತಿ ಪಡೆದಿದ್ದಾರೆ.

ಟ್ರೇಲರ್ ನೋಡಿದ ನೆಟ್ಟಿಗರು 'ಇದು ಆಲಿಯಾ ಭಟ್ ಅವರ ಕೆರಿಯರ್ ಬೆಸ್ಟ್ ಟ್ರೇಲರ್' ಎಂದು ಕಮೆಂಟ್ ಮಾಡುತ್ತಿದ್ದಾರೆ. ಕ್ಯೂಟ್ ಲೇಡಿ ಈಗ ಮಾಸ್ ಆಡಿಯನ್ಸ್‌ಗೂ ಹತ್ತಿರವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಟ್ರೇಲರ್ ಸೃಷ್ಟಿಸಿರುವ ಹೈಪ್ ನೋಡಿದರೆ ಥಿಯೇಟರ್‌ನಲ್ಲಿ 'ಆಲ್ಫಾ' ಹೊಸ ಇತಿಹಾಸ ಸೃಷ್ಟಿಸುವುದು ಗ್ಯಾರಂಟಿ. ಈ ಹಿಂದೆ ಧುರಂಧರ್ 1 & 2 ಬಂದಾಗ ಯಶ್ ರಾಜ್ ಸ್ಪೈ ಯುನಿವರ್ಸ್ ಸಿನಿಮಾಗಳನ್ನ ಹಿಗ್ಗಾಮುಗ್ಗಾ ಟೀಕೆ ಮಾಡಲಾಗಿತ್ತು. ಆದ್ರೆ ಅದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಆಲ್ಫಾನ ರಗಢ್ ಆಗಿ ರೆಡಿ ಮಾಡಿದ್ದಾರೆ ನಿರ್ದೇಶಕ ಶಿವ್ ರಾವಳಿ. ಇನ್ನೂ ಈ ಮೂವಿಯಲ್ಲಿ ಆಲಿಯಾ ಶಾರ್ವರಿ ಜೊತೆಗೆ ಅನಿಲ್ ಕಪೂರ್ ಮತ್ತು ಬಾಬ್ಬಿ ಡಿಯೋಲ್ ಕೂಡ ಮುಖ್ಯಪಾತ್ರಗಳಲ್ಲಿದ್ದಾರೆ.

ಲಂಕೆ ಧಹಿಸಲು ಹೊರಟ ಆಲಿಯಾಗೆ ಹೃತಿಕ್ ಸಾಥ್..!

ಹೌದು ಆಲ್ಫಾನಲ್ಲಿ ಹೃತಿಕ್ ರೋಷನ್ ಕೂಡ ಎಂಟ್ರಿ ಕೊಟ್ಟು ಕಿಚ್ಚು ಹಚ್ಚಲಿದ್ದಾರೆ. ಸದ್ಯ ಟ್ರೇಲರ್​ನಲ್ಲಿ ಹೃತಿಕ್ ಚಿಕ್ಕ ಝಲಕ್ ತೋರಿಸಲಾಗಿದೆ. ಯಶ್ ಸ್ಪೈ ಯುನಿವರ್ಸ್ ಚಿತ್ರ ಇದಾದ್ದರಿಂದ ವಾರ್​​ ಚಿತ್ರಕ್ಕೂ ಇದಕ್ಕೂ ಕನೆಕ್ಷನ್ ಇದೆ. ಸೋ ಹೃತಿಕ್ ಕೂಡ ಇಲ್ಲಿ ವಾರ್ ಮಾಡಲಿದ್ದಾರೆ. ಒಟ್ಟಿನಲ್ಲಿ 'ಆಲ್ಫಾ' ಟ್ರೇಲರ್ ಮೂಲಕ ಆಲಿಯಾ ಭಟ್ ಬಾಲಿವುಡ್‌ನ 'ಲೇಡಿ ಧುರಂಧರ್' ಪಟ್ಟಕ್ಕೇರಿದ್ದಾರೆ. ಚಿತ್ರಮಂದಿರಗಳಲ್ಲಿ ಆಲಿಯಾ ಆಕ್ಷನ್ ಆರ್ಭಟ ನೋಡಲು ಫ್ಯಾನ್ಸ್ ಈಗಿನಿಂದಲೇ ಕೌಂಟ್‌ಡೌನ್ ಶುರು ಮಾಡಿದ್ದಾರೆ.