ಕಾಲಿವುಡ್ ಮಾಸ್ ಆ್ಯಂಡ್ ಕ್ಲಾಸ್ ಹೀರೋ ವಿಜಯ್ ಸೇತುಪತಿ ಕೆಲ ದಿನಗಳ ಹಿಂದೆ ಆಸ್ಟ್ರೇಲಿಯಾದ ಇಂಡಿಯನ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೇಳೆ ಮೆಲ್ಭಾರ್ನ್ ನಲ್ಲಿರುವ STS Tamil ಆಸ್ಟ್ರೇಲಿಯಾ ರೇಡಿಯೋ ಚಾನೆಲ್‌ಗೆ ಸಂದರ್ಶನ ನೀಡಿದ್ದರು. ಅಲ್ಲಿ Article 370 ಬಗ್ಗೆ ಮಾತನಾಡಿದ್ದಾರೆ.

ಸೆಟ್ಟೇರಲಿದೆ ಮುತ್ತಯ್ಯ ಮುರುಳೀಧರನ್ ಬಯೋಪಿಕ್

 

ಕಾಶ್ಮೀರದ ಬಗ್ಗೆ ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರ ಅಸಂವಿಧಾನಿಕ ಹಾಗೂ ಪ್ರಜಾಪ್ರಭುತ್ವ ವಿರೋಧಿ. ಕಾಶ್ಮೀರದ ಜನರು ಅನುಭವಿಸುತ್ತಿರುವ ತೊಂದರೆ ಹಾಗೂ ಅವರ ಸಮಸ್ಯೆ ಅಲ್ಲಿ ವಾಸ ಮಾಡುವವರಿಗೆ ಮಾತ್ರ ತಿಳಿದಿರುತ್ತದೆ. ನಾನು ಕಾಳಜಿಯಿಂದ ಹೇಳಬಹುದು. ಆದರೆ ನನ್ನ ಅಭಿಪ್ರಾಯದ ಮೇಲೆ ನೀವು ನಿರ್ಧಾರ ತೆಗೆದುಕೊಳ್ಳಿ ಎನ್ನಲು ಆಗುವುದಿಲ್ಲ' ಎಂದು ಹೇಳಿಕೊಂಡಿದ್ದಾರೆ.

ಇನ್ನೊಂದೆಡೆ ಸೂಪರ್ ಸ್ಟಾರ್ ರಜನೀಕಾಂತ್ NDA ಸರ್ಕಾರವನ್ನು ಹೊಗಳಿದ್ದು ಅಮಿತ್ ಶಾ ಹಾಗೂ ಮೋದಿ ನಿರ್ಧಾರಕ್ಕೆ ಹಾಗೂ ಸಂಸತ್ತಿನಲ್ಲಿ ಅವರ ಭಾಷಣಕ್ಕೆ ಭೇಷ್ ಎಂದಿದ್ದಾರೆ.