ಸೆಟ್ಟೇರಲಿದೆ ಮುತ್ತಯ್ಯ ಮುರುಳೀಧರನ್ ಬಯೋಪಿಕ್
ಸೆಟ್ಟೇರಲಿದೆ ಮುತ್ತಯ್ಯ ಮುರುಳೀಧರನ್ ಬಯೋಪಿಕ್ | ತಮಿಳು ನಟ ವಿಜಯ್ ಸೇತುಪತಿ ಈ ಬಯೋಪಿಕ್ ನಲ್ಲಿ ನಟಿಸಲಿದ್ದಾರೆ | ಸದ್ಯದಲ್ಲೇ ಬರಲಿದೆ ಬಯೋಪಿಕ್
ಬಾಲಿವುಡ್ ನಲ್ಲಿ ಬಯೋಪಿಕ್ ಪರ್ವ ಶುರುವಾಗಿದೆ. ಅದರಲ್ಲೂ ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದವರ ಬಗ್ಗೆ ಸಾಲು ಸಾಲು ಸಿನಿಮಾಗಳು ತೆರೆಗೆ ಬರುತ್ತಿವೆ. ಆ ಸಾಲಿಗೆ ಇದೀಗ ಮುತ್ತಯ್ಯ ಮುರುಳೀಧರನ್ ಕೂಡಾ ಸೇರಿದ್ದಾರೆ.
ತಮಿಳು ನಟ ವಿಜಯ್ ಸೇತುಪತಿ ಶ್ರೀಲಂಕನ್ ಕ್ರಿಕೆಟಿಗ ಮುತ್ತಯ್ಯ ಮುರುಳೀಧರನ್ ಬಯೋಪಿಕ್ ನಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಸ್ಪಿನ್ ಮಾಂತ್ರಿಕ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ವಿಶ್ವಕಂಡ ಶ್ರೇಷ್ಠ ಕ್ರಿಕೆಟಿಗ. ಕ್ರಿಕೆಟ್ ಇತಿಹಾಸದಲ್ಲಿ ಸ್ಪಿನ್ ಬೌಲಿಂಗ್‌ಗೆ ಹೊಸ ಬಾಷ್ಯ ಬರೆದ ಕೀರ್ತಿ ಮುರಳೀದರನ್‌ಗೆ ಸಲ್ಲಲಿದೆ.
ವಿಶಿಷ್ಠ ಬೌಲಿಂಗ್ ಶೈಲಿ ಹಾಗೂ ದೂಸ್ರಾ ಸ್ಪಿನ್ ದಾಳಿಯಿಂದ ಸಚಿನ್ ತೆಂಡುಲ್ಕರ್ ಸೇರಿದಂತೆ ವಿಶ್ವದ ಘಟಾನುಘಟಿ ಬ್ಯಾಟ್ಸ್‌ಮನ್‌ಗಳಿಗೆ ಮುರಳೀಧರನ್ ನಡುಕ ಹುಟ್ಟಿಸಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಬರೋಬ್ಬರಿ 800 ವಿಕೆಟ್ ಕಬಳಿಸಿ ಗರಿಷ್ಠ ವಿರೆಟ್ ಕಬಳಿಸಿದ ಮೊದಲಿಗ ಅನ್ನೋ ದಾಖಲೆಗೆ ಪಾತ್ರರಾಗಿದ್ದಾರೆ.
ಏಕದಿನದಲ್ಲೂ 534 ವಿಕೆಟ್ ಕಬಳಿಸಿ ಮೊದಲ ಸ್ಥಾನದಲ್ಲಿದ್ದಾರೆ. 1996ರ ಶ್ರೀಲಂಕಾ ವಿಶ್ವಕಪ್ ಗೆಲುವಿನ ತಂಡದಲ್ಲಿ ಮುರಳೀಧರನ್ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇದೀಗ ಈ ದಿಗ್ಗಜ ಕ್ರಿಕೆಟಿಗನ ಬಯೋಪಿಕ್ ಮೂವಿ ತಮಿಳಿನಲ್ಲಿ ಸೆಟ್ಟೇರಲಿದೆ.
ರಣವೀರ್ ಸಿಂಗ್ ಕಪಿಲ್ ದೇವ್ ಬಯೋಪಿಕ್‌ನ ‘83’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆಗೊಂಡು ನಿರೀಕ್ಷೆ ಹೆಚ್ಚಿಸಿದೆ. ಪರಿಣಿತಿ ಚೋಪ್ರಾ ಸೈನಾ ನೆಹ್ವಾಲ್ ಬಯೋಪಿಕ್‌ನಲ್ಲಿ ನಟಿಸುವುದಕ್ಕಾಗಿ ಬ್ಯಾಡ್ಮಿಂಟನ್ ಅಭ್ಯಾಸದಲ್ಲಿ ತೊಡಗಿಯಾಗಿದೆ.
ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧೂ ಮತ್ತು ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಕುರಿತಾದ ಚಿತ್ರಗಳು ತೆರೆಗೆ ಬರಲು ಸಿದ್ಧತೆ ನಡೆಸುತ್ತಿರುವಂತೆಯೇ ಈ ಚಿತ್ರಗಳಿಗೆ ದೀಪಿಕಾ ಪಡುಕೋಣೆ ಮತ್ತು ತಾಪ್ಸಿ ಪನ್ನು ಅವರ ಹೆಸರು ಖಚಿತವಾಗುವ ಹಂತ ತಲುಪಿಯಾಗಿದೆ.