ದೇಶಾದ್ರಿ ಹೊಸ್ಮನೆ

ಶೀರ್ಷಿಕೆಗೆ ತಕ್ಕಂತೆ ಇದು ಲವ್‌ ಸ್ಟೋರಿ ಸಿನಿಮಾ. ಪ್ರೀತಿ, ಪ್ರೇಮ ಎನ್ನುವ ಈ ಕಾಲದ ವ್ಯವಹಾರಿಕ ಭಾವನೆಗಳ ನಡುವೆ ಪ್ರೀತಿಗೆ ಹೊಸ ವ್ಯಾಖ್ಯಾನ ನೀಡುತ್ತೆ ಈ ಸಿನಿಮಾ. ಅದು ಈ ಕಾಲದ ಜನರೇಷನ್‌ಗೆ ತಕ್ಕನಾಗಿದೆ ಎನ್ನುವುದು ಚಿತ್ರದ ಪ್ಲಸ್‌ ಪಾಯಿಂಟ್‌.ಅಷ್ಟುಕಾರಣಕ್ಕೆ ಇದು ಪಕ್ಕಾ ಯೂತ್‌ಫುಲ್‌ ಸಿನಿಮಾ ಅಂತೆನಿಸಿದರೂ, ಫ್ಯಾಮಿಲಿ ಡ್ರಾಮಾವಾಗಿಯೂ ರಂಜಿಸಬಲ್ಲದು. ಅದಕ್ಕಾಗಿಯೇ ಒಂದಷ್ಟುಸೆಂಟಿಮೆಂಟ್‌ ಸೀನ್‌ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು.

ತೆಲುಗು ನಿರ್ದೇಶನಕ್ಕೆ ಹಾರಿದ ರಿಯಲ್ ಸ್ಟಾರ್!

ಸಂತೋಷ್‌ ನಾರಾಯಣ್‌ ಅಗರ್ಭ ಶ್ರೀಮಂತ. ಫೇಮಸ್‌ ಬ್ಯುಸಿನೆಸ್‌ ಟೈಕೂನ್‌. ಆ ಲೆವಲ್‌ಗೆ ಆತ ಬೆಳೆಯುವುದಕ್ಕೆ ಕಾರಣ ಓರ್ವ ಮಹಿಳೆ ಕಾರಣ. ಆಕೆ ಆತನ ಒಂದು ಕಾಲದ ಪ್ರೇಯಸಿ. ಪ್ರೀತಿಸುವವನಿಗೆ ಆಸ್ತಿ, ಅಂತಸ್ತು ಮತ್ತು ಹಣ ಇರಬೇಕೆಂದು ಪಾಠ ಮಾಡಿದ ಹೋದ ಹುಡುಗಿ. ಆಕೆ ಹೇಳಿದ ಆ ಒಂದು ಮಾತನ್ನು ಅಕ್ಷರಶಃ ಸತ್ಯವಾಗಿಸಿದ ಸಕ್ಸಸ್‌ಫುಲ್‌ ಮ್ಯಾನ್‌ ಸಂತೋಷ್‌ ನಾರಾಯಣ್‌. ಅದೇ ಶ್ರೀಮಂತಿಕೆ, ಅಂತಸ್ತು ಮತ್ತೆ ಪ್ರೀತಿಸಿದವಳನ್ನುಕನೆಕ್ಟ್ ಮಾಡುತ್ತದೆ. ಆತ ವಿವಾಹಿತ. ಆ ಕನೆಕ್ಷನ್‌ ಯಾಕಾಯಿತು? ಅಲ್ಲಿಂದ ಏನಾಯಿತು? ಇದು ಐ ಲವ್‌ ಯೂ ಚಿತ್ರದ ಸಸ್ಪೆನ್ಸ್‌ ಸಂಗತಿ. ಅದು ಗೆದ್ದು ಸೋಲುವ, ಸೋತು ಗೆಲ್ಲುವ ಪ್ರೀತಿಯ ಆಟ. ಇಲ್ಲಿ ಗೆದ್ದವರು ಯಾರು, ಸೋತವರು ಯಾರು, ಯಾರಿಗೆ ಯಾರು ಪ್ರೀತಿಯ ನಿವೇದನೆ ಮಾಡಿದರು, ಹೇಗೆ ಮಾಡಿದರು ಎನ್ನುವುದೇ ಚಿತ್ರದ ಕತೆ.

ತಾರಾಗಣ: ಉಪೇಂದ್ರ, ರಚಿತಾ ರಾಮ್‌, ಸೋನುಗೌಡ, ಬ್ರಹ್ಮಾನಂದಂ, ಹೊನ್ನವಳ್ಳಿ ಕೃಷ್ಣ

ನಿರ್ದೇಶನ: ಆರ್‌. ಚಂದ್ರು

ಗೃಹಿಣಿ ಪಾತ್ರ ಮೆಚ್ಚಿದ ಸುದೀಪ್?

ಸಂಗೀತ: ಡಾ. ಕಿರಣ್‌

ಬಹುತೇಕ ಕತೆ ಸಾಗುವುದೇ ಪ್ಲಾಷ್‌ ಬ್ಯಾಕ್‌ ಮೂಲಕ. ವರ್ತಮಾನದ ಮುಂದೆ ಭೂತಕಾಲವನ್ನು ತಂದಿಡುತ್ತಾ, ಭವಿಷ್ಯದ ನಗ್ನ ಸತ್ಯವನ್ನು ತೆರೆದಿಡುವ ನಿರ್ದೇಶಕನ ನಿರೂಪಣೆಯ ಕುಶಲಗಾರಿಕೆ ಇಲ್ಲಿ ಹೆಚ್ಚು ಗಮನ ಸೆಳೆಯುತ್ತದೆ. ಹೊಸತಲ್ಲದ ಕತೆಯನ್ನು ನಿರೂಪಣೆ ಶೈಲಿಯೇ ಸರಗವಾಗಿ ಸಾಗಿಸುತ್ತದೆ. ಮತ್ತೊಂದೆಡೆ ಅದಕ್ಕೆ ದೊಡ್ಡ ಮಟ್ಟದಲ್ಲಿ ಪ್ಲಸ್‌ ಆಗಿದ್ದು ಉಪೇಂದ್ರ ಕ್ಯಾರೆಕ್ಟರ್‌. ಕ್ಯಾರೆಕ್ಟರ್‌ ರೂಪ ನೋಡಿದರೆ ಉಪ್ಪಿಗೆ ಅದೇನು ಹೊಸತಲ್ಲ. ಕೊಂಚ ವಿಭಿನ್ನ ಮಾತ್ರ. ಅದನ್ನು ಅವರು ಅವಗಾನಿಸಿಕೊಂಡ ರೀತಿ ಮಾತ್ರ ಅದ್ಬುತ. ಒಬ್ಬ ಪಕ್ಕಾ ಹಠವಾದಿ ಬ್ಯುಸಿನೆಸ್‌ಮ್ಯಾನ್‌ ವ್ಯಕ್ತಿತ್ವ, ವಿವಾಹವಾದರೂ ಪ್ರೇಯಸಿಯ ಬಗೆಗಿನ ಮೋಹ, ರಸಿಕನಾಗಿಯೂ ಕಾಣಿಸಿಕೊಳ್ಳುವ ಚಪಲದ ಆ ಪಾತ್ರವನ್ನು ಉಪ್ಪಿ, 20ರ ಹುಡುಗನೂ ನಾಚುವಂತೆ ಲವಲವಿಕೆಯಲ್ಲಿ ನಿಭಾಯಿಸಿದ್ದಾರೆ. ಪಾತ್ರ ಪೋಷಣೆ ನೋಡಿದರೆ ಉಪ್ಪಿಗೆ ಈಗಲೂ ಮೂವತ್ತೇ ವರ್ಷ ! ಉಪ್ಪಿಗಿಂತ ರುಚಿ ಬೇರಿಲ್ಲ ಅಂತಲೇ ಅಭಿಮಾನಿಗಳನ್ನು ಭರಪೂರ ರಂಜಿಸುತ್ತಾರೆ.

ಚಿತ್ರ ವಿಮರ್ಶೆ: I Love You

ಸಿಕ್ಕಾಪಟ್ಟೆಬೋಲ್ಡ್‌ ಪಾತ್ರ ಎಂದೇ ಕ್ಯೂರಿಯಾಸಿಟಿ ಹುಟ್ಟಿಸಿದ್ದ ರಚಿತಾ ರಾಮ್‌ ಪಾತ್ರ, ಈ ಕಾಲದ ಹುಡುಗಿಯರ ಪ್ರತಿರೂಪಕ. ಆ ಪಾತ್ರವನ್ನು ರಚಿತಾ ರಾಮ್‌ ಸಮರ್ಥವಾಗಿಯೇ ನಿಭಾಯಿಸಿದ್ದಾರೆ. ಒಂದೆರೆಡು ಬೋಲ್ಡ್‌ ಸನ್ನಿವೇಶಗಳಿದ್ದರೂ, ಕತೆಯೊಳಗಿನ ಆ ಪಾತ್ರಗಳ ಸನ್ನಿವೇಶ ಅರ್ಥವಾದರೆ ಅದೇನು ಅಶ್ಲೀಲ ಎಂದೆನಿಸುವುದಿಲ್ಲ. ಒಂದಷ್ಟುಮುಜುಗರವಂತೂ ಹೌದು. ಆ ರೀತಿಯ ಮುಜುಗರ ಇಲ್ಲಿನ ಕಾಮಿಡಿ ರೂಪದ ಮಾತುಗಳಲ್ಲೂ ಇದೆ. ಸೋನು ಈ ಚಿತ್ರದ ಮತ್ತೊಂದು ಹೈಲೈಟ್ಸ್‌. ಪಕ್ಕಾ ಟ್ರೆಡಿಷನಲ್‌ ಲುಕ್‌ನಲ್ಲೇ ಕಾಣಿಸಿಕೊಂಡರೂ, ಕ್ಲೈಮ್ಯಾಕ್ಸ್‌ನಲ್ಲಿ ಅವರೇ ನಿಜವಾದ ಹೀರೋ. ಪಿ.ಡಿ. ಸತೀಶ್‌, ಬ್ರಹ್ಮಾನಂದಂ, ಜಯರಾಮ್‌ ಸೇರಿ ಉಳಿದವರ ಪಾತ್ರಗಳಿಗೂ ನ್ಯಾಯ ಸಿಕ್ಕಿದೆ. ಒಂದೆರೆಡು ಹಾಡುಗಳಲ್ಲಿ ಸಂಗೀತ ಕಿರಣ್‌ ಇಷ್ಟವಾದರೆ, ಹಿನ್ನೆಲೆ ಸಂಗೀತದಲ್ಲಿ ಗುರುಕಿರಣ್‌ ಕ್ಲೈಮ್ಯಾಕ್ಸ್‌ವರೆಗೂ ಹಿತವಾಗಿಯೇ ಸಾಗಿ ಬರುತ್ತಾರೆ. ಗಣೇಶ್‌, ವಿನೋದ್‌ ನಿರ್ದೇಶನದ ಆ್ಯಕ್ಷನ್‌ ಸನ್ನಿವೇಶಗಳು, ರಿಯಲ್‌ಸ್ಟಾರ್‌ ಉಪೇಂದ್ರ ಆ್ಯಕ್ಷನ್‌ ಸ್ಟಾರ್‌ ಕೂಡ ಹೌದು ಎನ್ನುವುದನ್ನು ಸಾಬೀತು ಮಾಡಿವೆ. ಸುಜ್ಞಾನ್‌ ಕಾಮೆರಾ ಚಿತ್ರದ ಅಂದ ಹೆಚ್ಚಿಸಿದೆ. ಅಷ್ಟಾಗಿಯೂ, ‘ಜನ ಬುದ್ಧಿವಂತರು, ಅವರಗೇನು ಬೇಕು ಅದನ್ನು ಆಯ್ಕೆ ಮಾಡಿಕೊಳ್ಳುತ್ತಾರೆಂಬ’ ಡೈಲಾಗ್‌ ಚಿತ್ರದಲ್ಲಿದೆ. ಅದು ನೋಡುಗರಿಗೂ ಅನ್ವಯ.