‘ಪಿಎಂ ನರೇಂದ್ರ ಮೋದಿ’ ಚಿತ್ರದ ಟ್ರೈಲರ್ ಬಿಡುಗಡೆ ಅಗಿದ್ದು ಕೇವಲ ಒಂದು ದಿನದಲ್ಲಿ 9 ಮಿಲಿಯನ್ ಹಿಟ್ಸ್ ಆಗಿದೆ. ಟ್ರೇಲರ್ ನೋಡಿ ಕೆಲವರು ಭೇಷ್ ಎಂದರೆ ಇನ್ನು ಕೆಲವರು ಇದು ಚುನಾವಣೆ ಸಮಯದಲ್ಲಿ ಹೊಸ ಟ್ರಿಕ್ ಅನ್ನುತ್ತಿದ್ದಾರೆ.

ಖ್ಯಾತ ಚಿತ್ರ ನಿರ್ದೇಶಕ ಓಮಂಗ್ ಕುಮಾರ್ ಈ ರೀತಿಯ ಬಯೋಪಿಕ್ ಮಾಡಿರುವುದಕ್ಕೆ ಅವರ ಪ್ರಾಮಾಣಿಕತೆಯನ್ನೇ ಪ್ರಶ್ನೆ ಮಾಡಿದ್ದಾರೆ ಕಾಲಿವುಡ್ ಹಾಗೂ ಟಾಲಿವುಡ್ ನಟ ಸಿದ್ಧಾರ್ಥ್. ‘#PMNarendraModiTrailer ನಲ್ಲಿ ಹೇಗೆ ಬ್ರಿಟಿಷರ ವಿರುದ್ಧ ಹೋರಾಡಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು ಎಂದು ತೋರಿಸಿಲ್ಲ. ಒಂದು ವೇಳೆ ಅದನ್ನೆಲ್ಲಾ ತೋರಿಸಿದ್ದರೆ ಜಾತ್ಯತೀತ, ಉದಾರವಾದಿ ಎಂದೇ ಹೆಸರಾದ ನೆಹರೂರವರ ಕಾಲೆಳೆಯಬಹುದಿತ್ತು. ಈ ಟ್ರೈಲರ್ ಒಂದು ಚೀಪ್ ಟ್ರಿಕ್ ತರ ಕಾಣುತ್ತಿದೆ.’ ಎಂದು ಟ್ಟೀಟ್ ಮಾಡಿದ್ದಾರೆ.

ಪಿಎಂ ಮೋದಿ ಟ್ರೇಲರ್ ರಿಲೀಸ್: ಸಂಚಲನ ಮೂಡಿಸಿದೆ ವಿವೇಕ್ ಒಬೆರಾಯ್ ಲುಕ್!

ಮೋದಿ ಭೀಷ್ಮ ಪಿತಾಮಹಾ ಇದ್ದಂಗೆ: ಚೌಕಿದಾರನಾಗಿರುವ ನಟನಿಂದ ರಾಹುಲ್ ಗೆ ತಪರಾಕಿ!

ಸಿದ್ಧಾರ್ಥ್ ರವರ ಟ್ವೀಟ್ ಟ್ವೀಟಿಗರ ಆಕ್ರೋಶಕ್ಕೆ ಕಾರಣವಾಗಿದೆ.