ಮುಂಬೈ(ಮಾ.21): ಪ್ರಧಾನಿ ನರೇಂದ್ರ ಮೋದಿ ಭಾರತದ ರಾಜಕಾರಣದ ಭೀಷ್ಮ ಪಿತಾಮಹಾ ಇದ್ದ ಹಾಗೆ ಎಂದು ಚಲನಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಮುಂಬೈನ ಅಪಾರ್ಟಮೆಂಟ್ ವೊಂದರ ಕಾವಲುಗಾರ ಸವಿ ಸಿಧು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ #MainBhiChowkidar ಅಭಿಯಾನ ಲೇವಡಿ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸವಿ ಸಿಧು ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಭಾರತದ ರಾಜಕಾರಣದಲ್ಲಿ ಹಿರಿಯರಾಗಿದ್ದು, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರಂತ ಯುವ ನಾಯಕರು ಅವರಿಗೆ ಗೌರವ ನೀಡುವುದನ್ನು ಕಲಿಯಬೇಕು ಎಂದು ಸವಿ ಸಿಧು ಹೇಳಿದ್ದಾರೆ.

ಸವಿ ಸಿಧು ಬಾಲಿವುಡ್ ಚಿತ್ರಗಳಾದ ಬ್ಲ್ಯಾಕ್ ಫ್ರೈಡೇ, ಗುಲಾಲ್, ಪಾಂಚ್, ಪಟಿಯಾಲಾ ಹೌಸ್ ಮುಂತಾದ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಹೆಚ್ಚು ಅವಕಾಶಗಳು ದೊರೆಯದ ಕಾರಣ ಸದ್ಯ ಸವಿ ಅಪಾರ್ಟಮೆಂಟ್ ವೊಂದರಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದಾರೆ.