ಬೆಂಗಳೂರು (ಮಾ. 21): ಪ್ರಧಾನಿ ಮೋದಿಯವರ ಜೀವನಾಧಾರಿತ ಸಿನಿಮಾ ’ಪಿಎಂ ನರೇಂದ್ರ ಮೋದಿ, ಬೇಸ್ಡ್ ಆನ್ ಟ್ರು ಸ್ಟೋರಿ’ ಸಿನಿಮಾದ ಟ್ರೇಲರ್ ಭಾರೀ ಸಂಚಲನ ಮೂಡಿಸಿದೆ. 

’ನನ್ನ ಬೆಂಬಲಯಿಲ್ಲ’; ಮಂಡ್ಯ ಸ್ಪರ್ಧೆ ಬಗ್ಗೆ ಗಮನ ಸೆಳೆದಿದೆ ಪುನೀತ್ ಪತ್ರ

ಪ್ರಧಾನಿ ಮೋದಿಯವರ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿವೇಕ್ ಒಬೆರಾಯ್ ಗಮನ ಸೆಳೆದಿದ್ದಾರೆ. ಮೋದಿಯವರ ಜೀವನದ ವಿವಿಧ ಘಟ್ಟಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಮೋದಿ ಪಾತ್ರದಲ್ಲಿ ವಿವೇಕ್ ಒಬೆರಾಯ್ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಏಪ್ರಿಲ್ 5 ರಂದು ಈ ಸಿನಿಮಾ ದೇಶಾದ್ಯಂತ ತೆರೆ ಕಾಣಲಿದೆ. 

 

ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು, ಜನತೆಗೆ ದೇಶಕ್ಕಾಗಿ ಹೋರಾಡುವಂತೆ ರಾಷ್ಟ್ರಭಕ್ತಿಯ ಭಾಷಣ ಮಾಡುವಂತೆ ಕಾಣಿಸುತ್ತಾರೆ. ಈ ಟ್ರೇಲರ್ ನೋಡಿದ ಜನ ಜೈ ಮೋದಿಜಿ ಎನ್ನುತ್ತಿದ್ದಾರೆ. ದೊಡ್ಡ ಮಟ್ಟದ ಹವಾವನ್ನೇ ಎಬ್ಬಿಸಿದೆ. 

ಈ ಚಿತ್ರವನ್ನು ಖ್ಯಾತ ನಿರ್ದೇಶಕ ಓಮಂಗ್ ಕುಮಾರ್ ಪ್ರೇಕ್ಷಕರ ಮುಂದೆ ತಂದಿದ್ದಾರೆ. ಮೋದಿಯವರ ಜೀವನಚಿತ್ರವನ್ನು ಅದ್ಭುತವಾಗಿ ತೆರೆ ಮೇಲೆ ಕಟ್ಟಿಕೊಟ್ಟಿದ್ದಾರೆ.