ಕೇರಳದ ಪಲ್ಲಶ್ಶನದ ಪ್ರಸಿದ್ಧ ದೇವಸ್ಥಾನದಲ್ಲಿ ನಡೆದ 'ಉತ್ಸವ್ 2026' ಕಾರ್ಯಕ್ರಮದಲ್ಲಿ ತಮಿಳು ನಟ ರವಿ ಮೋಹನ್‌ 'ದೇವಿ ರತ್ನಂ' ಪ್ರಶಸ್ತಿ ಸ್ವೀಕರಿಸಿದರು. ಇದೇ ವೇಳೆ ಗಾಯಕಿ ಕೆನಿಶಾ ಅವರ ಸಂಗೀತ ಕಾರ್ಯಕ್ರಮ ನೆರೆದಿದ್ದವರನ್ನು ರಂಜಿಸಿತು.

ಕೇರಳದ ಪ್ರಸಿದ್ಧ ಪಲ್ಲಶ್ಶನ ಪಳಯಕಾವು ಶ್ರೀ ಮೀನ್‌ಕುಳತ್ತಿ ಭಗವತಿ ದೇವಸ್ಥಾನದಲ್ಲಿ 'ಉತ್ಸವ್ 2026' ಅದ್ದೂರಿಯಾಗಿ ನಡೀತು. ಈ ಕಾರ್ಯಕ್ರಮದಲ್ಲಿ ತಮಿಳಿನ ಖ್ಯಾತ ನಟ ರವಿ ಮೋಹನ್ 'ದೇವಿ ರತ್ನಂ' ಪ್ರಶಸ್ತಿ ಸ್ವೀಕರಿಸಿದರು. ರವಿ ಮೋಹನ್ ಅವರ ಉಪಸ್ಥಿತಿ ಮತ್ತು ಗಾಯಕಿ ಕೆನಿಶಾ ಅವರ ಲೈವ್ ಸಂಗೀತ ಕಾರ್ಯಕ್ರಮ ಈ ಉತ್ಸವಕ್ಕೆ ವಿಶೇಷ ಕಳೆ ತಂದುಕೊಟ್ಟಿತು.

Add Asianetnews Kannada as a Preferred SourcegooglePreferred

ದೇವಸ್ಥಾನದ ವಾರ್ಷಿಕೋತ್ಸವದ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ಕೇರಳ ಮತ್ತು ತಮಿಳುನಾಡಿನಿಂದ ಸಾವಿರಾರು ಭಕ್ತರು, ಸಿನಿಮಾ ಪ್ರೇಮಿಗಳು, ಸಂಗೀತ ಪ್ರಿಯರು ಭಾಗವಹಿಸಿದ್ದರು. ನಟ ರವಿ ಮೋಹನ್ ಅವರನ್ನು ನೋಡಲು ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಇದರಿಂದ ಕಾರ್ಯಕ್ರಮದ ರಂಗು ಮತ್ತಷ್ಟು ಹೆಚ್ಚಾಗಿತ್ತು.

ಕಾರ್ಯಕ್ರಮದ ಮುಖ್ಯ ಆಕರ್ಷಣೆ ಅಂದ್ರೆ, ನಟ ರವಿ ಮೋಹನ್ ಅವರಿಗೆ 'ದೇವಿ ರತ್ನಂ' ಪ್ರಶಸ್ತಿ ನೀಡಿ ಗೌರವಿಸಿದ್ದು. ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ಮತ್ತು ಅವರ ಜನಪ್ರಿಯತೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಯಿತು. ಈ ಗೌರವ ಸ್ವೀಕರಿಸಿದಾಗ ನೆರೆದಿದ್ದ ಭಕ್ತರು ಮತ್ತು ಅಭಿಮಾನಿಗಳು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ಈ ವೇಳೆ ಮಾತನಾಡಿದ ರವಿ ಮೋಹನ್, ಮೀನ್‌ಕುಳತ್ತಿ ಭಗವತಿ ದೇವಸ್ಥಾನದ ಶ್ರೀಮಂತ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಹೊಗಳಿದರು. ಭಕ್ತಿ, ಸಂಪ್ರದಾಯ, ಕಲೆ ಮತ್ತು ಮನರಂಜನೆಯನ್ನು ಇಷ್ಟು ಸುಂದರವಾಗಿ ಒಟ್ಟುಗೂಡಿಸಿ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಸಂಘಟಕರಿಗೆ ಅಭಿನಂದನೆ ಸಲ್ಲಿಸಿದರು. ಅವರ ಮಾತುಗಳಿಗೆ ನೆರೆದಿದ್ದವರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ತು.

ಜನರನ್ನು ಹುಚ್ಚೆಬ್ಬಿಸಿದವು

ಇದೇ ಕಾರ್ಯಕ್ರಮದಲ್ಲಿ ಗಾಯಕಿ ಕೆನಿಶಾ ತಮ್ಮ ಬ್ಯಾಂಡ್ ಜೊತೆ ಲೈವ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಅವರ ಹಾಡುಗಳು ನೆರೆದಿದ್ದ ಜನರನ್ನು ಹುಚ್ಚೆಬ್ಬಿಸಿದವು. ಸುಮಧುರ ಹಾಡುಗಳು ಮತ್ತು ಪವರ್‌ಫುಲ್ ಗೀತೆಗಳ ಮೂಲಕ ಕೆನಿಶಾ ಎಲ್ಲರನ್ನೂ ರಂಜಿಸಿದರು. ಅವರ ಸ್ಟೇಜ್ ಪ್ರೆಸೆನ್ಸ್, ಧ್ವನಿ ಮತ್ತು ಜನರೊಂದಿಗಿನ ಸಂವಾದ ದೇವಸ್ಥಾನದ ಆವರಣದಲ್ಲಿ ಹಬ್ಬದ ವಾತಾವರಣವನ್ನೇ ಸೃಷ್ಟಿಸಿತ್ತು.

ಒಟ್ಟಿನಲ್ಲಿ, ಆಧ್ಯಾತ್ಮ, ಸಂಸ್ಕೃತಿ, ಸಿನಿಮಾ ಮತ್ತು ಸಂಗೀತದ ಈ ಸಂಗಮ ಎಲ್ಲರ ಮನಗೆದ್ದಿತು. ದೇವಸ್ಥಾನದ ವಾರ್ಷಿಕೋತ್ಸವಗಳಲ್ಲಿ ಇದೊಂದು ಸ್ಮರಣೀಯ ಕಾರ್ಯಕ್ರಮ ಎಂದು ಭಾಗವಹಿಸಿದ್ದವರೆಲ್ಲರೂ ಹೇಳಿದರು. ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಕ್ಕಾಗಿ ಸಂಘಟಕರು ನಟ ರವಿ ಮೋಹನ್, ಗಾಯಕಿ ಕೆನಿಶಾ ಮತ್ತು ನೆರೆದಿದ್ದ ಎಲ್ಲಾ ಜನರಿಗೆ ಧನ್ಯವಾದ ತಿಳಿಸಿದರು.