ಕುಂವೀ ಅವರ ಆ ಕಾದಂಬರಿ ಹೆಸರು ‘ಕನಕಾಂಗಿ ಕಲ್ಯಾಣ’. ಈ ಕಾದಂಬರಿಯನ್ನಿಟ್ಟುಕೊಂಡು ಸಿನಿಮಾ ಮಾಡಬೇಕು ಎಂಬುದು ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್‌ ಅವರಿಗೆ ಇದ್ದ ಬಹು ದಿನಗಳ ಕನಸು. ಅದನ್ನು ನಿರ್ದೇಶಕ ಸೂರಿ ಅವರ ಬಳಿಯೇ ‘ಜಾಕಿ’ ಚಿತ್ರದ ಸಮಯದಲ್ಲೇ ಹೇಳಿಕೊಂಡಿದ್ದರಂತೆ. ಆದರೆ, ಪಾರ್ವತಮ್ಮ ನಿಧನರಾದ ಮೇಲೆ ‘ಕನಕಾಂಗಿ ಕಲ್ಯಾಣ’ ಸಿನಿಮಾ ಆಗುವ ವಿಚಾರಕ್ಕೆ ಅಲ್ಲಿಗೆ ನಿಂತಿತ್ತು.

ಕೋಟ್ಯಧಿಪತಿಯಲ್ಲಿ 25 ಲಕ್ಷದ ಪ್ರಶ್ನೆ ಕ್ವಿಟ್ ಮಾಡಿ 12.5 ಲಕ್ಷ ಸಾಕು ಎಂದ ಮಹಿಳೆ!

ತುಂಬಾ ಹಿಂದೆಯೇ ಈ ಬಗ್ಗೆ ನನ್ನೊಂದಿಗೆ ಪಾರ್ವತಮ್ಮ ಅವರೇ ಮಾತನಾಡಿದ್ದರು. ಕಾದಂಬರಿ ಬಗ್ಗೆ ಮೆಚುಗೆಯೂ ಸೂಚಿಸಿದ್ದರು. ಕನಕಾಂಗಿ ಕಲ್ಯಾಣ ಕಾಂದಬರಿಯನ್ನು ಸಿನಿಮಾ ಮಾಡುವ ಆಸಕ್ತಿಯೂ ತೋರಿದ್ದರು. ನಿರ್ದೇಶಕ ಸೂರಿ ಹಾಗೂ ಪುನೀತ್‌ರಾಜ್‌ಕುಮಾರ್‌ ಕೂಡ ಈ ಬಗ್ಗೆ ಮಾತನಾಡಿದ್ದರು. ಅವರ ನಿಧನದ ನಂತರ ಮತ್ತೆ ಆ ಬಗ್ಗೆ ನಾನು ಕೇಳಕ್ಕೆ ಹೋಗಲಿಲ್ಲ. ಈಗ ಸಿನಿಮಾ ಆಗುತ್ತಿದೆ ಎಂದರೆ ಖುಷಿ ಆಗುತ್ತದೆ.- ಕುಂ. ವೀರಭದ್ರಪ್ಪ, ಸಾಹಿತಿ

ಆದರೆ, ಈಗ ಬಂದಿರುವ ಮಾಹಿತಿ ಪ್ರಕಾರ ನಿರ್ದೇಶಕ ಸೂರಿ ಅವರು ಈ ಚಿತ್ರವನ್ನು ಕೈಗೆತ್ತಿಗೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ‘ಯುವರತ್ನ’ ಚಿತ್ರದ ನಂತರ ಈ ಸಿನಿಮಾ ಶುರು ಮಾಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಅಷ್ಟರಲ್ಲಿ ಸೂರಿ ಅವರು ಕೂಡ ‘ಪಾಪ್‌ಕಾರ್ನ್‌ ಮಂಕಿ ಟೈಗರ್‌’ ಚಿತ್ರವನ್ನು ಮುಗಿಸಿಕೊಳ್ಳಲಿದ್ದಾರೆ. ಆದರೆ, ಈ ಬಗ್ಗೆ ಕೇಳಿದರೆ ಸೂರಿ ಅವರು ಹೇಳುವುದೇ ಬೇರೆ.

ನೆರೆ ಸಂತ್ರಸ್ತರಿಗೆ ನೆರವಾಗಲು ಪುನೀತ್ 5 ಲಕ್ಷ ರೂ ದೇಣಿಗೆ

‘ನಾವು ಕುಂವೀ ಅವರ ಕಾದಂಬರಿ ಸಿನಿಮಾ ಮಾಡುವ ಬಗ್ಗೆ ಮಾತನಾಡಿದ್ದು ನಿಜ. ನನಗೆ ಇದನ್ನು ಹೇಳಿದ್ದೇ ಪಾರ್ವತಮ್ಮ ರಾಜ್‌ಕುಮಾರ್‌ ಅವರು. ಸಾಹಿತಿ ಕುಂ ವೀರಭದ್ರಪ್ಪ ಅವರೊಂದಿಗೂ ಮಾತನಾಡಿದೆ. ಕಾದಂಬರಿ ಓದಿದ ಮೇಲೆ ಇಷ್ಟುದೊಡ್ಡ ಸಿನಿಮಾ ನನ್ನಿಂದ ಸಾಧ್ಯವಿಲ್ಲ ಅನಿಸಿತು. ಜತೆಗೆ ಆನೆಗಳನ್ನು ಪಳಗಿಸುವುದು, ಆ ಕಾಲವನ್ನು ರೀ ಕ್ರಿಯೇಟ್‌ ಮಾಡುವುದು ಕಷ್ಟ. ತುಂಬಾ ತಾಳ್ಮೆ ಮತ್ತು ಸಮಯ ಎರಡೂ ಬೇಕು ಅನಿಸಿ ಸುಮ್ಮನಾದೆ’ ಎನ್ನುತ್ತಾರೆ ಸೂರಿ.

ಕೋಟ್ಯಧಿಪತಿಯಲ್ಲಿ ಪುನೀತ್‌ಗೆ ಸವಾಲು ಹಾಕಿದ ಸ್ಪರ್ಧಿ!

ಆದರೆ, ಈ ನಡುವೆ ಇದೇ ‘ಕನಕಾಂಗಿ ಕಲ್ಯಾಣ’ ಕಾದಂಬರಿಯನ್ನು ಸಿನಿಮಾ ಮಾಡುವ ಆಸಕ್ತಿ ತೋರಿಸಿರುವುದು ಮತ್ತೊಬ್ಬ ನಿರ್ದೇಶಕ ಕೃಷ್ಣ. ‘ಗಜಕೇಸರಿ’ ಸಿನಿಮಾ ಮಾಡಿದ ಮೇಲೆ ಐತಿಹಾಸಿಕ ಕತೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ಹೆಬ್ಬುಲಿ ಕೃಷ್ಣ ಅವರು ‘ಕಮಕಾಂಗಿ ಕಲ್ಯಾಣ’ ಕಾದಂಬರಿಯನ್ನು ತೆರೆ ಮೇಲೆ ತರುವುದಕ್ಕೆ ಆಸಕ್ತಿ ತೋರಿಸಿದ್ದಾರಂತೆ. ಸದ್ಯದ ಮಾಹಿತಿ ಪ್ರಕಾರ ಈ ಕಾದಂಬರಿಯನ್ನು ಬಹುತೇಕ ಕೃಷ್ಣ ಅವರೇ ಸಿನಿಮಾ ಮಾಡುವ ಸಾಧ್ಯತೆಗಳಿವೆ. ಒಂದು ವೇಳೆ ಕೃಷ್ಣ ಅವರು ಈ ಚಿತ್ರವನ್ನು ಮಾಡುವುದಾದರೆ ಹೀರೋ ಯಾರಾಗುತ್ತಾರೆ ಎಂಬುದು ಸದ್ಯದ ಕುತೂಹಲ. ಆದರೆ, ಕುಂವೀ ಅವರ ‘ಕನಕಾಂಗಿ ಕಲ್ಯಾಣ’ ಕಾದಂಬರಿ ಬಗ್ಗೆ ಸ್ಯಾಂಡಲ್‌ವುಡ್‌ ನಿರ್ದೇಶಕರು ಆಸಕ್ತಿ ತೋರುತ್ತಿರುವುದಂತೂ ಸತ್ಯ.