ಬೆಂಗಳೂರು (ಆ. 17): ವರುಣನ ಆರ್ಭಟಕ್ಕೆ ಕೇರಳ ಅಕ್ಷರಶಃ ತತ್ತರಿಸಿದೆ. ಹೆಚ್ಚಿನ ಜನರು ಮನೆಯನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. 

ಪವರ್ ಸ್ಟಾರ್ ಪುನೀತ್ ಇವರಿಗೆ ನೆರವಿನ ಹಸ್ತಚಾಚಿದ್ದಾರೆ. ನೆರೆ ಸಂತ್ರಸ್ತರಿಗೆ ಕೇರಳ ಸಿಎಂ ನಿಧಿಗೆ 5 ಲಕ್ಷ  ರೂ ನೀಡಿದ್ದಾರೆ. 

ಕೇರಳ ಪ್ರವಾಹ ಸಂತ್ರಸ್ತರಿಗೆ ರಾಜೀವ್ ಚಂದ್ರಶೇಖರ್ 25 ಲಕ್ಷ ರು. ನೆರವು

ಪುನೀತ್ ರಂತೆ ಈಗಾಗಲೇ ಅನೇಕ ನಟರು ಧನ ಸಹಾಯ ಮಾಡಿದ್ದಾರೆ. ಅಲ್ಲು ಅರ್ಜುನ್ 25 ಲಕ್ಷ, ವಿಜಯ್ ದೇವರಕೊಂಡ 5 ಲಕ್ಷ, ಕಮಲ್ ಹಾಸನ್ 25 ಲಕ್ಷ, ಸೂರ್ಯ ಮತ್ತು ಕಾರ್ತಿ 25 ಲಕ್ಷ ನೀಡಿದ್ದಾರೆ. 

ಕೇರಳ ನೆರೆ ಸಂತ್ರಸ್ತರಿಗೆ ಕಮಲ್ ಹಾಸನ್ ನೆರವು

ಕೇರಳದಲ್ಲಿ ವರುಣನ ಆರ್ಭಟ ಇನ್ನು ಮುಂದುವರೆದಿದೆ. ಪ್ರವಾಹದಲ್ಲಿ 167 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ನಾಳೆವರೆಗೂ ಮಳೆ ಮುಂದುವರೆಯಲಿದೆ ಎಂದು ಹವಾಮಾನ ವರದಿ ಹೇಳಿದೆ.