ಕೇರಳದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು ಪ್ರವಾ ಸಂತ್ರಸ್ತರಿಗಾಗಿ ಏಷ್ಯಾನೆಟ್ ನ್ಯೂಸ್ ವತಿಯಿಂದ ಸಂಗ್ರಹಿಸುತ್ತಿರುವ ಪರಿಹಾರ ನಿಧಿಗೆ 25 ಲಕ್ಷ ರು. ವೈಯಕ್ತಿಕವಾಗಿ ಸಂಸದ ರಾಜೀವ್ ಚಂದ್ರಶೇಖರ್ ನೆರವು ನೀಡಿದ್ದಾರೆ. 

ಬೆಂಗಳೂರು: ಭಾರಿ ಪ್ರವಾಹಕ್ಕೆ ಸಿಲುಕಿ ತತ್ತರಿಸಿರುವ ಕೇರಳದ ಪ್ರವಾಹ ಸಂತ್ರಸ್ತರಿಗೆ ಸಹಾಯಹಸ್ತ ಚಾಚುವಂತೆ ರಾಜ್ಯಸಭಾ ಸದಸ್ಯ ರಾಜೀವ್‌ಚಂದ್ರ ಶೇಖರ್ ಕರೆ ನೀಡಿದ್ದಾರೆ.

ಅಲ್ಲದೆ, ಸಂತ್ರಸ್ತರಿಗಾಗಿ ಏಷ್ಯಾನೆಟ್ ನ್ಯೂಸ್ ವತಿಯಿಂದ ಸಂಗ್ರಹಿಸುತ್ತಿರುವ ಪರಿಹಾರ ನಿಧಿಗೆ 25 ಲಕ್ಷ ರು. ವೈಯಕ್ತಿಕ ಸಹಾಯ ನೀಡಿದ್ದಾರೆ. ಕೇರಳದಲ್ಲಿ ಭಾರಿ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಸಂತ್ರಸ್ತರ ನೆರವಿಗೆ ಪ್ರತಿಯೊಬ್ಬರೂ ಧಾವಿಸಬೇಕಿದೆ. ಪ್ರಧಾನಮಂತ್ರಿ ಪರಿಹಾರ ನಿಧಿ ಅಥವಾ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಹಾಯ ನೀಡುವ ಮೂಲಕ ಸಹಾಯಹಸ್ತ ಚಾಚಬೇಕು ಎಂದು ಮನವಿ ಮಾಡಿದ್ದಾರೆ.

Scroll to load tweet…

ಈ ಬಗ್ಗೆ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಅಪಾರ ಆಸ್ತಿಪಾಸ್ತಿ ಹಾಗೂ ಜೀವ ಹಾನಿ ಉಂಟಾಗಿದೆ. ಇಂತಹ ಅಸಹಾಯಕ ಸ್ಥಿತಿಯಲ್ಲಿರುವ ಸಂತ್ರಸ್ತರಿಗೆ ನೆರವು ನೀಡಿ. ಏಷ್ಯಾನೆಟ್ ನ್ಯೂಸ್‌ನಿಂದ ಸಂಗ್ರಹಿಸುತ್ತಿರುವ ಪರಿಹಾರ ನಿಧಿಗೆ ೨೫ ಲಕ್ಷ ರು. ನೆರವು ನೀಡಿದ್ದೇನೆ. ಎಲ್ಲರೂ ಪ್ರಧಾನಮಂತ್ರಿ ಅಥವಾ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೆರವು ನೀಡುವಂತೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.