Asianet Suvarna News Asianet Suvarna News

ಸಿನಿಮಾ ಆಗುತ್ತಿದೆ ಮದನ್ ಪಟೇಲ್‌ರ 'ತಮಟೆ' ಕಾದಂಬರಿ!

ನಟ ಮಯೂರ್ ಪಟೇಲ್ ಬಹುದಿನಗಳ ನಂತರ ಕಾಣಿಸಿಕೊಂಡಿದ್ದು, ನಟನೆಯ ಬದಲಿಗೆ ನಿರ್ದೇಶಕನ ಟೋಪಿ ಧರಿಸಿದ್ದಾರೆ. ಈ ಚಿತ್ರದ ಹೆಸರು ‘ತಮಟೆ’.

 

actor Mayur  patel to direct tamate film
Author
Bangalore, First Published Aug 19, 2019, 2:14 PM IST

ಮಯೂರ್ ಪಟೇಲ್‌ತಂದೆ ಮದನ್ ಪಟೇಲ್ ಪ್ರಮುಖ ಪಾತ್ರಧಾರಿ. ನಟ, ನಿರ್ಮಾಪಕ ಮದನ್ ಪಟೇಲ್ ಬರೆದ ‘ತಮಟೆ’ ಕಾದಂಬರಿಯನ್ನಾಧರಿಸಿ ತಯಾರಾದ ಚಿತ್ರವಿದು. ಇದು ತಮಟೆ ಬಾರಿಸುವ ಬಡ ಮುನಿಯನ ಬದುಕಿನ ಕತೆ. ತಮಟೆ ಬಾರಿಸುವುದನ್ನೇ ನಂಬಿಕೊಂಡು ಬದುಕುತ್ತಿದ್ದ ಮುನಿಯನ ಬದುಕಿಗೆ ಆಧುನಿಕತೆ ಹೇಗೆಲ್ಲ ಸವಾಲಾಯಿತು ಎನ್ನುವುದನ್ನು ಈ ಚಿತ್ರದ ಮೂಲಕ ತೋರಿಸಲು ಹೊರಟಿದ್ದಾರೆ ನಿರ್ದೇಶಕ ಮಯೂರ್ ಪಟೇಲ್.

ಅಯ್ಯೋ! ರಾಧಾ ಮಿಸ್‌ಗೆ ಟೂ ಬಿಟ್ಟು ಶಾನ್ವಿ ಹಿಂದೆ ಹೊರಟೇ ಬಿಟ್ರು ರಮಣ್!

ಕಾದಂಬರಿಯನ್ನಾಧರಿಸಿ ತಯಾರಾದ ಚಿತ್ರವಿದು. ಇದು ತಮಟೆ ಬಾರಿಸುವ ಬಡ ಮುನಿಯನ ಬದುಕಿನ ಕತೆ. ತಮಟೆ ಬಾರಿಸುವುದನ್ನೇ ನಂಬಿಕೊಂಡು ಬದುಕುತ್ತಿದ್ದ ಮುನಿಯನ ಬದುಕಿಗೆ ಆಧುನಿಕತೆ ಹೇಗೆಲ್ಲ ಸವಾಲಾಯಿತು ಎನ್ನುವುದನ್ನು ಈ ಚಿತ್ರದ ಮೂಲಕ ತೋರಿಸಲು ಹೊರಟಿದ್ದಾರೆ ನಿರ್ದೇಶಕ ಮಯೂರ್ ಪಟೇಲ್.

 

‘ಅಪ್ಪ ಬರೆದಿದ್ದ ಈ ಕಾದಂಬರಿಯ ಪ್ರತಿಗಳು ಮಾರಾಟವಾಗಿವೆ. ಅದನ್ನು ಓದಿದ ನಂತರ ಬಡ ಮುನಿಯನ ಪಾತ್ರ ತೀವ್ರವಾಗಿ ಕಾಡಿತ್ತು. ಅದನ್ನೇ ಆಧರಿಸಿ ಸಿನಿಮಾ ಮಾಡಲು ನಿರ್ಧರಿಸಿದೆ. ಮುನಿಯ ಪಾತ್ರಕ್ಕೆ ಯಾರು ಕಲಾವಿದ ಅಂತ ಯೋಚಿಸುತ್ತಿದ್ದಾಗ ನನ್ನ ತಲೆಗೆ ಬಂದಿದ್ದು ತಂದೆ ಮದನ್ ಪಟೇಲ್.ಅವರು ಕೂಡ ಮೂಲತಃ ವಾದ್ಯ ನುಡಿಸುತ್ತಾ ಬಂದವರು. ಅದರಲ್ಲೂ ತಮಟೆ ಬಾರಿಸುವುದು ಅವರಿಗೆ ಗೊತ್ತಿತ್ತು. ಹಾಗಾಗಿ ನೀವೇ ಸೂಕ್ತ ಅಂತ ಹೇಳಿ, ನಿರ್ದೇಶನಕ್ಕಿಳಿಯುತ್ತಿದ್ದೇನೆ’ ಎನ್ನುವ ಮಾತು ನಟ ಮಯೂರ್ ಪಟೇಲ್ ಅವರದ್ದು.

 

Follow Us:
Download App:
  • android
  • ios