ವಾವ್! ಹಿ ಈಸ್ ಸೋ ಸ್ಮಾರ್ಟ್ ಅಂತ ಟಿವಿ ಮುಂದೆ ಕೂರುವ ಆಂಟಿ ಹಾಗೂ ಹುಡುಗಿಯರಿಗೊಂದು ಗುಡ್‌ ನ್ಯೂಸ್ ಕೊಡಲು ರಮಣ್ ಉರುಫ್ ಸ್ಕಂದ ರೆಡಿಯಾಗಿದ್ದಾರೆ. ಇದು ಧಾರಾವಾಹಿನಾ?ನ್ಯೂಸಾ ? ಇಲ್ಲಿದೆ ನೋಡಿ.

ರಾಧಾ ಮಿಸ್ ಪಾತ್ರಕ್ಕೆ ಕಿರುತೆರೆ ರಾಧಿಕಾ ಪಂಡಿತ್!

'ರಣಾಂಗಣ' ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿತ್ತಿರುವ ಸ್ಕಂದ ಅಕೋಶ್ ಗೆ ಶಾನ್ವಿ ಶ್ರೀವಾಸ್ತವ್ ನಟಿಯಾಗಿ ಆಯ್ಕೆಯಾಗಿದ್ದಾರೆ. ನೈಜ ಘಟನೆ ಆಧಾರಿತ ಚಿತ್ರಕ್ಕೆ ರೋಹಿತ್ ರಾವ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಇನ್ನು ಈ ಚಿತ್ರದಲ್ಲಿ ಸ್ಕಂದ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಗಾಂಧಿನಗರದಲ್ಲಿ ಗಿರಗಿಟ್ಲೆ ಹೊಡೆಯುತ್ತಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.