Asianet Suvarna News Asianet Suvarna News

#MeToo ಪರಿಣಾಮ ? ಜಗ್ಗೇಶ್‌ರಿಂದ ಜಾಗರೂಕ ನಡೆ

ಸಾಮಾನ್ಯವಾಗಿ ನವರಸ ನಾಯಕ ಟ್ವಿಟರ್ ಹಾಗೂ ಫೇಸ್'ಬುಕ್'ನಲ್ಲಿ ಚಟುವಟಿಕೆಯಿಂದ ಇರುತ್ತಾರೆ. ತಮ್ಮ ಪ್ರೀತಿ ಪಾತ್ರರಿಗೆ, ಸ್ನೇಹಿತರು ಹಾಗೂ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುವುದು, ಸಲಹೆ ನೀಡುವುದು.ವ್ಯವಸ್ಥೆಯ ಬಗ್ಗೆ ಟೀಕಿಸುವುದು ಮುಂತಾದವನ್ನು ಮಾಡುತ್ತಿರುತ್ತಾರೆ. 

Actor jaggesh to use Social Media only for wishing people
Author
Bengaluru, First Published Oct 21, 2018, 7:35 PM IST

ಬೆಂಗಳೂರು[ಅ.21]: ಸ್ಯಾಂಡಲ್ ವುಡ್'ಗೂ ಕಾಲಿಟ್ಟ #MeToo ಆಪಾದನೆಗಳು ಹಾಗೂ ನಟರ ವಿರುದ್ಧ ಕೇಳಿಬರುತ್ತಿರುವ ಆರೋಪಗಳ ಬಗ್ಗೆ ನವರಸ ನಾಯಕ ಜಗ್ಗೇಶ್ ಸಾಮಾಜಿಕ ಮಾಧ್ಯಮಗಳಲ್ಲಿ ಜಾಗರೂಕ ನಡೆ ಅನುಸರಿಸಲು ಮುಂದಾಗಿದ್ದಾರೆಯೇ ಅವರ ಟ್ವಿಟರ್'ನ ಒಂದು ಪೋಸ್ಟ್ ನಿಜ ಅನಿಸುವಂತಿದೆ ! 

ಸಾಮಾನ್ಯವಾಗಿ ನವರಸ ನಾಯಕ ಟ್ವಿಟರ್ ಹಾಗೂ ಫೇಸ್ ಬುಕ್ ನಲ್ಲಿ ಸದಾ ಚಟುವಟಿಕೆಯಿಂದ ಇರುತ್ತಾರೆ. ತಮ್ಮ ಪ್ರೀತಿ ಪಾತ್ರರಿಗೆ, ಸ್ನೇಹಿತರು ಹಾಗೂ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುವುದು, ಸಲಹೆ ನೀಡುವುದು.ವ್ಯವಸ್ಥೆಯ ಬಗ್ಗೆ ಟೀಕಿಸುವುದು ಮುಂತಾದವನ್ನು ಮಾಡುತ್ತಿರುತ್ತಾರೆ. ಆದರೆ ಇನ್ನು ಮುಂದೆ ಸಾಮಾಜಿಕ ಮಾಧ್ಯಮವನ್ನು ಬೇರೆಯವರ ವಿಷಯಗಳ ಬಗ್ಗೆ ಚರ್ಚಿಸುವುದನ್ನು ಬಿಟ್ಟು ತಮ್ಮ ಪ್ರೀತಿ ಪಾತ್ರರಿಗೆ ಶುಭ ಕೋರಲು ಮಾತ್ರ ಬಳಸುವುದಾಗಿ ಟ್ವಿಟರ್'ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. 

ಇದಕ್ಕೆ ಕೆಲವು ದಿನಗಳಿಂದ  #MeToo ಅಭಿಯಾನ ಕನ್ನಡಕ್ಕೂ ಕಾಲಿಟ್ಟಿರುವುದು ಕಾರಣವಾಗಿರಬಹುದೆ  ಅಥವಾ ಬೇರೆಯವರ ಗೊಡವೆ ನಮಗ್ಯಾಕೆ ಎನ್ನುವುದೇ ?  ಅದಕ್ಕೆ ಅವರ ಈ ಮಾತುಗಳೆ ಸಾಕ್ಷಿಯಾಗಿದೆ.          
 

'ಆಧುನಿಕತೆ ದಿಕ್ಕುತಪ್ಪಿದೆ ಸಮಾಜ ! ಬದುಕು ಹಸನಾಗಿಸಲು ಚಿತ್ರವಿಚಿತ್ರ ಚದುರಂಗದ ಆಟದಲ್ಲಿಸಾಗಿ ಗುರಿಮುಟ್ಟ ಬೇಕು, ವಯಸ್ಸುಮಾಗತ್ತಿದೆ ಹೊಸತನ
ಕಲಿಯಲು ಹವಣಿಸುತ್ತಿದೆ ಮನ, ಲೋಕದ ಡೊಂಕಿಗಿಂತ ನಮ್ಮಬದುಕಿನ ಮೇಲೆ ಉಳಿದಆಯುಷ್ಯ ಗಮನಹರಿಸುವ! ನನ್ನಪ್ರೀತಿಪಾತ್ರರಿಗೆ ಶುಭಕೋರಲು
ಮಾತ್ರ ಬಳಸುವೆ ಈಜಾಗ!ಇನ್ನು ಮುಂದೆ no coments fr others affairs!

 

Follow Us:
Download App:
  • android
  • ios