ಮುಖಕ್ಕೆ ಮಾಸ್ಕ್ ಹಾಕಿಕೊಂಡು ಮೈಸೂರಿನಲ್ಲಿ ಟಾಂಗಾ ಸವಾರಿ ಮಾಡಿದ ಜಗ್ಗೇಶ್
ಮೈಸೂರಿನಲ್ಲಿ ಟಾಂಗಾ ಸವಾರಿ ಮಾಡಿದ ಜಗ್ಗೇಶ್ | ಮುಖಕ್ಕೆ ಮಾಸ್ಕ್ ಹಾಕಿಕೊಂಡು ರಸ್ತೆಯಲ್ಲಿ ಓಡಾಡಿದ್ದಾರೆ | ಸಣ್ಣ ಸಣ್ಣ ವಿಷಯವೂ ನಮಗೆ ಸಂತೋಷ ನೀಡುತ್ತದೆ ಎಂದಿದ್ದಾರೆ
ನವರಸ ನಾಯಕ ಜಗ್ಗೇಶ್ ಸೆಲೆಬ್ರಿಟಿ ಗುಂಗನ್ನು ತಲೆಗೇರಿಸಿಕೊಳ್ಳದೇ ತುಂಬಾ ಸಿಂಪಲ್ ಆಗಿ ಇರುತ್ತಾರೆ. ಸಣ್ಣ ಸಣ್ಣ ಖುಷಿಗಳನ್ನು ಎಂಜಾಯ್ ಮಾಡುತ್ತಾರೆ.
ಮೈಸೂರಿನ ಟಾಂಗಾ ಸವಾರಿ ಸಿಕ್ಕಾಪಟ್ಟೆ ಫೇಮಸ್. ಮುಖಕ್ಕೆ ಮಾಸ್ಕ್ ಹಾಕಿಕೊಂಡು ರಸ್ತೆಯಲ್ಲೇ ಟಾಂಗಾ ಸವಾರಿ ಮಾಡಿದ್ದಾರೆ.
‘ಬಾಲ್ಯದಲ್ಲಿ ರಾಜಣ್ಣನ ಸಿನಿಮಾ ನೋಡಲು ಅಮ್ಮನ ಜೊತೆ ಶ್ರೀರಾಮಪುರದಿಂದ ನವರಂಗ ಚಿತ್ರಮಂದಿರಕ್ಕೆ ಹೋಗಿ #ಕೃಷ್ಣದೇವರಾಯ ಚಿತ್ರ ನೋಡಿದ ನೆನಪು ಕಾಡಿತು! ಮಕ್ಕಳಂತೆ ದೊಡ್ಡವರ ತನಗಳ ಬಿಟ್ಟು ಬದುಕಿದರೆ ನಾವು ಮಕ್ಕಳಂತೆ ಸಂತೋಷವಾಗಿ ಬದುಕಬಹುದು! Life is beautiful...be happy.’ ಎಂದು ಸ್ಟೇಟಸ್ ಹಾಕಿ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಸಣ್ಣ ಸಣ್ಣ ಖುಷಿಗಳನ್ನು ಎಂಜಾಯ್ ಮಾಡುವುದೆಂದರೆ ಇದೆ ಅಲ್ವಾ? ನಾವೆಲ್ಲರೂ ಇದೇ ರೀತಿ ಜೀವನವನ್ನು ಎಂಜಾಯ್ ಮಾಡಲು ಶುರು ಮಾಡಿದರೆ ಲೈಫ್ ಈಸ್ ಸೂಪರ್.