‘ಕೆಲವರಿಗೆ ಸಿನಿಮಾ ಮಾಡುವವರ ಕಷ್ಟಗೊತ್ತಿಲ್ಲ. ಬಂಡವಾಳ ಹಾಕುವವರ ನೋವು ಗೊತ್ತಿಲ್ಲ. ತಿಂಗಳಾನುಗಟ್ಟಲೆ ಕುಳಿತು ಕತೆ ಬರೆದವರ ಶ್ರಮ ಗೊತ್ತಿರುವುದಿಲ್ಲ. ಎಲ್ಲೋ ಕುಳಿತು, ಇನ್ನೇನೋ ನೋಡಿ ಒಂದು ಸಿನಿಮಾ ರಿಮೇಕು, ಕದ್ದಿದ್ದು ಅಂತೆಲ್ಲ ಪಟ್ಟಕಟ್ಟುವುದು, ಆರೋಪ ಮಾಡುವುದು, ಗಾಸಿಪ್‌ ಹಬ್ಬಿಸುವುದು ತುಂಬಾ ಸುಲಭ. ಇದು ಶುದ್ಧ ಸ್ವಮೇಕ್‌ ಸಿನಿಮಾ. ರಿಮೇಕ್‌ ಎನ್ನುವ ಆರೋಪ ಶುದ್ಧ ಸುಳ್ಳು. ಕೆಲವರಿಗೆ ಹೊಟ್ಟೆಕಿಚ್ಚು. ಈ ಸಂದರ್ಭ ಕನ್ನಡದ ಪ್ರೇಕ್ಷಕರಿಗೆ ನಾನೊಂದು ಭರವಸೆ ನೀಡುತ್ತೇನೆ, ಈ ತರಹದ ಕತೆ, ಈ ತನಕ ಬಂದಿಲ್ಲ. ನಿರ್ದೇಶಕ ರಮೇಶ್‌ ಇಂದಿರಾ ಅವರೇ ತಿಂಗಳುಗಟ್ಟಲೆ ಕುಳಿತು ಬರೆದ ಕತೆ ಇದು. ಸಂಸಾರಿಕ ಜೀವನದ ಹಲವು ಮಜಲುಗಳನ್ನು ಈ ಕತೆ ಹೇಳುತ್ತದೆ. ಕಾರ್‌ ಡ್ರೈವರ್‌ ಮತ್ತು ಅದರ ಮಾಲೀಕನ ನಡುವೆ ನಡೆಯುವ ಸಂಭಾಷಣೆ ತುಂಬಾ ಅದ್ಭುತವಾಗಿದೆ. ಇಂತಹ ಕತೆಗೆ ರಿಮೇಕ್‌ ಎನ್ನುವ ಪಟ್ಟಕಟ್ಟುವುದು ಸರಿಯಲ್ಲ’ ಎಂದರು ಜಗ್ಗೇಶ್‌.

ರಕ್ಷಿತ್ ಶೆಟ್ಟಿಯಿಂದ ಜಗ್ಗೇಶ್ ಚಿತ್ರದ ಆಡಿಯೋ ಲಾಂಚ್!

ಅವರು ನಟಿಸಿದ ‘ಪ್ರೀಮಿಯರ್‌ ಪದ್ಮಿನಿ’ ಚಿತ್ರದ ಕ್ಲೈಮ್ಯಾಕ್ಸ್‌ ಚಿತ್ರೀಕರಣ ಬೆಂಗಳೂರು ಬಸವನಗುಡಿ ಕೆಕೆ ಹೌಸ್‌ನಲ್ಲಿ ನಡೆಯಿತು. ಅದು ಆ ಚಿತ್ರದ ಟೈಟಲ್‌ ಸಾಂಗ್‌ ಚಿತ್ರೀಕರಣದ ಸಂದರ್ಭ. ಯೋಗರಾಜ್‌ ಭಟ್‌ ಬರೆದ ಸಾಹಿತ್ಯಕ್ಕೆ ಅರ್ಜುನ್‌ ಜನ್ಯಾ ಸಂಗೀತ ನೀಡಿದ್ದರು. ಇಮ್ರಾನ್‌ ಸರ್ದಾರಿಯಾ ನೃತ್ಯ ನಿರ್ದೇಶನದಲ್ಲಿ ಜಗ್ಗೇಶ್‌, ಗುಂಡು ಹಾಕುತ್ತಾ‘ಅತ್ಲಾಗೆ, ಇತ್ಲಾಗೆ ’ ಅಂತ ತೂರಾಡುತ್ತಾ ನೃತ್ಯಕ್ಕೆ ಹೆಜ್ಜೆ ಹಾಕುತ್ತಿದ್ದರು. ಅದ್ವೈತ್‌ ಗುರುಮೂರ್ತಿ ತಮ್ಮ ಕ್ಯಾಮರಾ ಕಣ್ಣಲ್ಲಿ ಆ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದರು. ಮಧ್ಯಾಹ್ನ ಊಟದ ಸಮಯ. ಚಿತ್ರೀಕರಣಕ್ಕೆ ಬ್ರೇಕ್‌ ಬಿದ್ದಾಗ ಮಾತಿಗೆ ಸಿಕ್ಕರು ಜಗ್ಗೇಶ್‌. ಮೊದಲು ಅವರು ಮಾತಿಗಿಳಿದಿದ್ದೇ ಆ ಚಿತ್ರದ ಬಗೆಗೆ ಕೇಳಿ ಬಂದ ರಿಮೇಕ್‌ ಆರೋಪದ ಕುರಿತು. ಈ ಹಿಂದೆ ಅವರು 8ಎಂ ಎಂ ಸಿನಿಮಾ ಕುರಿತೂ ಇಷ್ಟೇ ಪ್ರೀತಿಯಿಂದ ಮಾತಾಡಿದ್ದರು.

ನನಸಾಯಿತು ನವರಸನಾಯಕನ ಬಹುದಿನದ ಕನಸು!