ಆ ಮೂಲಕ ಅಭಿಮಾನಿಗಳಿಗೂ ಹತ್ತಿರವಾಗಲಿದ್ದಾರೆ. ಜೂನ್‌ 6ರಂದು ರಕ್ಷಿತ್‌ ಶೆಟ್ಟಿಅವರ ಹುಟ್ಟು ಹಬ್ಬ. ಅಭಿಮಾನಿಗಳ ಒತ್ತಾಯದ ಮೇರೆಗೆ ಅಂದು ಸೋಷಯಲ್‌ ಮೀಡಿಯಾಗೆ ಬರುವ ಮೂಲಕ ಅಭಿಮಾನದ ಉಡುಗೋರೆ ನೀಡಲು ಮುಂದಾಗಿದ್ದಾರೆ.

ಟೀಮ್‌ ರಕ್ಷಿತ್‌ ಶೆಟ್ಟಿ

ರಕ್ಷಿತ್‌ ಶೆಟ್ಟಿಅವರ ಹೆಸರಿನಲ್ಲಿ ಅಧಿಕೃತವಾಗಿ ಟೀಮ್‌ ರಕ್ಷಿತ್‌ ಶೆಟ್ಟಿಹೆಸರಿನಲ್ಲಿ ಅವರ ಅಭಿಮಾನಿಗಳ ತಂಡ ಹುಟ್ಟುಕೊಂಡಿದೆ. ಈ ಮೂಲಕ ಅಭಿಮಾನಿಗಳೇ ತಮ್ಮ ನೆಚ್ಚಿನ ಸಿಂಪಲ್‌ ಸ್ಟಾರ್‌ನ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಮಾಡುವುದಕ್ಕೆ ಹೊರಟಿದ್ದಾರೆ. ಹುಟ್ಟುಹಬ್ಬಕ್ಕಾಗಿಯೇ ವಿಶೇಷವಾದ ಫೋಟೋಗಳನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಹರಿ ಬಿಡಲಿದ್ದಾರೆ. ಈ ಟೀಮ್‌ ರಕ್ಷಿತ್‌ ಶೆಟ್ಟಿಹೆಸರಿನ ತಂಡದ ಪುಟದಲ್ಲಿ ರಕ್ಷಿತ್‌ ಶೆಟ್ಟಿನಟನೆಯ ಚಿತ್ರಗಳು, ಹೊಸ ಫೋಟೋಗಳನ್ನು ಹಾಕುವ ಮೂಲಕ ಸಿಂಪಲ್‌ ಸ್ಟಾರ್‌ ಅಭಿಮಾನಿಗಳು ಆ್ಯಕ್ಟಿವ್‌ ಆಗಲಿದ್ದಾರೆ.

ಅಭಿಮಾನಿಗಳ ಜತೆ ನೇರ ಸಂಪರ್ಕದಲ್ಲಿರುವುದಕ್ಕೆ ಸೋಷಲ್‌ ಮೀಡಿಯಾ ದೊಡ್ಡ ಮಟ್ಟದಲ್ಲಿ ಸೇತುವೆ ಆಗುತ್ತಿದೆ. ಅದರಿಂದ ನಾನು ಇಷ್ಟುದಿನ ದೂರ ಇದ್ದೆ. ಈಗ ಮತ್ತೆ ಸೋಷಲ್‌ ಮೀಡಿಯಾಗೆ ಮರಳುತ್ತಿದ್ದೇನೆ. ಟೀಮ್‌ ರಕ್ಷಿತ್‌ ಶೆಟ್ಟಿಹೆಸರಿನಲ್ಲಿ ನೇರವಾಗಿ ಅಭಿಮಾನಿಗಳ ಜತೆ ಮಾತನಾಡುತ್ತೇನೆ. ನನ್ನ ಚಿತ್ರಗಳ ವಿವರಣೆಗಳನ್ನು ಹೇಳುತ್ತೇನೆ. ಸದ್ಯಕ್ಕೆ ಅವನೇ ಶ್ರೀಮನ್ನಾರಾಯಣ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಹೊಸ ಹೊಸ ವಿಚಾರಗಳನ್ನು ಹೇಳಲಿದ್ದೇನೆ - ರಕ್ಷಿತ್‌ ಶೆಟ್ಟಿ, ನಟ

ಹುಟ್ಟು ಹಬ್ಬಕ್ಕೆ ಟೀಸರ್‌- ಪೋಸ್ಟರ್‌

ರಕ್ಷಿತ್‌ ಶೆಟ್ಟಿಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ‘777 ಚಾರ್ಲಿ’ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದು, ಜೂನ್‌ 6ರಂದು ಅಧಿಕೃತವಾಗಿ ‘ಅವನೇ ಶ್ರೀಮನ್ನಾರಾಯಣ’ ಚಿತ್ರಕ್ಕೆ ಶೂಟಿಂಗ್‌ ಮುಕ್ತಾಯ ಮಾಡಲಿದ್ದಾರೆ. ಹೀಗಾಗಿ ಅದೇ ದಿನ ಚಿತ್ರಕ್ಕೆ ಕುಂಬಳಕಾಯಿ ಹೊಡೆಯುವ ಮೂಲಕ ರಕ್ಷಿತ್‌ ಶೆಟ್ಟಿನಟನೆಯ ಬಹು ನಿರೀಕ್ಷೆಯ ಚಿತ್ರ, ಶೂಟಿಂಗ್‌ ಮೈದಾನದಿಂದ ತಾಂತ್ರಿಕ ಕೆಲಸಗಳತ್ತ ಮುಖ ಮಾಡಲಿದೆ. ಹುಟ್ಟುಹಬ್ಬದಂದೇ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಹೊಸ ಟೀಸರ್‌ ಅಥವಾ ಪೋಸ್ಟರ್‌ ಬಿಡುಗಡೆ ಮಾಡುವ ಆಲೋಚನೆಯಲ್ಲಿದೆ ಚಿತ್ರತಂಡದ.