ಸ್ಯಾಂಡಲ್‌ವುಡ್ ಬಹುನಿರೀಕ್ಷಿತ ಚಿತ್ರ 'ಕುರುಕ್ಷೇತ್ರ' ರಿಲೀಸ್ ದಿನಾಂಕ ಹತ್ತಿರವಾಗುತ್ತಿದ್ದಂತೆ ಸೌಂಡ್ ಜಾಸ್ತಿ ಮಾಡುತ್ತಿದೆ. ಇನ್ನು ಸಿನಿಮಾ ಆರಂಭವಾದಾಗಿನಿಂದಲೂ ಎಲ್ಲಿಯೂ ಕಾಣಿಸಿಕೊಳ್ಳದ ದರ್ಶನ್ ಪತ್ನಿ ವಿಜಯಲಕ್ಷ್ಮಿ ಪುತ್ರನೊಂದಿಗೆ ಸಿನಿಮಾ ನೋಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಕುರುಕ್ಷೇತ್ರ ಒಪ್ಪದಿದ್ದರೆ ನನ್ನಂಥ ಮುಠ್ಠಾಳ ಮತ್ತೊಬ್ಬ ಇರುತ್ತಿರಲಿಲ್ಲ!

'ಕುರುಕ್ಷೇತ್ರ' ಪ್ರೆಸ್‌ಮೀಟ್‌ನಲ್ಲಿ 'ಇನ್ನೂ ಸಿನಿಮಾ ನೋಡಿಲ್ಲ, ನೋಡ್ತೀನಿ' ಎಂದು ಹೇಳಿದ ದರ್ಶನ್ ಆಗಸ್ಟ್‌ 5 ರಂದು ಬೆಂಗಳೂರಿನ ರಾಕ್‌ಲೈನ್ ಕಾರ್ನಿವಲ್ ಸಿನಿಮಾದಲ್ಲಿ ರಾತ್ರಿ 'ಕುರುಕ್ಷೇತ್ರ' ವಿಶೇಷ ಪ್ರದರ್ಶನದಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಅಭಿಮನ್ಯು ಪಾತ್ರಧಾರಿ ನಿಖಿಲ್ ಕುಮಾರಸ್ವಾಮಿ, ನಿರ್ಮಾಪಕರಾದ ಮುನಿರತ್ನ, ರಾಕ್‌ಲೈನ್ ವೆಂಕಟೇಶ್ ಹಾಗೂ ಸಾಧುಕೋಕಿಲ ಸಿನಿಮಾ ವೀಕ್ಷಿಸಿದ್ದಾರೆ.

 

ಆಗಸ್ಟ್‌ 9 ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿರುವ 'ಕುರುಕ್ಷೇತ್ರ' ಚಿತ್ರರಂಗದಲ್ಲೇ ಮೈಲಿಗಲ್ಲು ನಿರ್ಮಿಸಲು ಹೊರಟಿರುವ ಬಹುನಿರೀಕ್ಷಿತ ಪೌರಾಣಿಕ ಚಿತ್ರವಾಗಿದೆ.

"