ಮೈಸೂರು ನಗರ ಪೊಲೀಸ್ ಆಯುಕ್ತರ ಪ್ರಕಾರ ಕಾರಿನಲ್ಲಿದ್ದವರು 5 ಮಂದಿ. ಆದರೆ ದರ್ಶನ್ ಸ್ನೇಹಿತರು, ಸಂಬಂಧಿಕರು ಹೇಳುತ್ತಿರುವುದು ನಾಲ್ವರನ್ನು. ಆದರೆ ಎಂಎಲ್ಸಿ ವರದಿಯಲ್ಲಿ 6 ಜನ ಗಾಯಾಳುಗಳ ಬಗ್ಗೆ ಉಲ್ಲೇಖಿಸಲಾಗಿದೆ. ಹಾಗಾದರೆ ದರ್ಶನ್ ಜತೆ ಕಾರಿನಲ್ಲಿದ್ದ 5ನೇ ವ್ಯಕ್ತಿ ಯಾರು ಎಂಬ ಪ್ರಶ್ನೆ ಕಾಡುತ್ತಿದೆ.

ಬೆಂಗಳೂರು[ಸೆ.26]: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ತಿದೆ. ಕಾರಲ್ಲಿ ಪ್ರಯಾಣಿಸುತ್ತಿದ್ದವರು 5 ಅಥವಾ 6 ಜನರೋ ಅನ್ನೋ ಗೊಂದಲ ಸೃಷ್ಟಿಯಾಗಿದೆ. ಪೊಲೀಸರ ನಡೆ ಬಗ್ಗೆ ಹಲವು ಅನುಮಾನಗಳು ಮೂಡುತ್ತಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾರು ಅಪಘಾತದಲ್ಲಿ ಆಸ್ಪತ್ರೆ ಸೇರಿರುವ ನಟ ದರ್ಶನ್ ಗೆ ಮೂರನೇ ದಿನವೂ ಚಿಕಿತ್ಸೆ ಮುಂದುವರೆದಿದೆ. ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳ ದಂಡೇ ಆಸ್ಪತ್ರೆಯತ್ತ ಹರಿದು ಬಂದರೆ ಮತ್ತೊಂದೆಡೆ ಪ್ರಕರಣದಲ್ಲಿ ಹಲವು ಗೊಂದಲಗಳು ಮುಂದುವರೆದಿವೆ. 

ಮೈಸೂರು ನಗರ ಪೊಲೀಸ್ ಆಯುಕ್ತರ ಪ್ರಕಾರ ಕಾರಿನಲ್ಲಿದ್ದವರು 5 ಮಂದಿ. ಆದರೆ ದರ್ಶನ್ ಸ್ನೇಹಿತರು, ಸಂಬಂಧಿಕರು ಹೇಳುತ್ತಿರುವುದು ನಾಲ್ವರನ್ನು. ಆದರೆ ಎಂಎಲ್ಸಿ ವರದಿಯಲ್ಲಿ 6 ಜನ ಗಾಯಾಳುಗಳ ಬಗ್ಗೆ ಉಲ್ಲೇಖಿಸಲಾಗಿದೆ. ಹಾಗಾದರೆ ದರ್ಶನ್ ಜತೆ ಕಾರಿನಲ್ಲಿದ್ದ 5ನೇ ವ್ಯಕ್ತಿ ಯಾರು ಎಂಬ ಪ್ರಶ್ನೆ ಕಾಡುತ್ತಿದೆ.

ಎಫ್ ಐಆರ್ ನಲ್ಲಿ 4 ಮಂದಿ ಹೆಸರು
ಎಫ್ಐಆ ಆರ್'ನಲ್ಲಿ ಕಾರು ಚಾಲಕ ರಾಯ್ ಆಂಟೋನಿ, ನಟ ದರ್ಶನ್, ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ನಾಲ್ಕು ಮಂದಿ ಹೆಸರು ಮಾತ್ರ ಉಲ್ಲೇಖಿಸಿಲಾಗಿದೆ. ಆದರೆ, ಆಸ್ಪತ್ರೆಯ ಎಂ.ಎಲ್.ಸಿ ವರದಿಯಲ್ಲಿ ಈ ನಾಲ್ವರ ಜೊತೆಗೆ ಪ್ರಕಾಶ್ ಹಾಗೂ ವಿನಯ್ ಶಂಕರ್ ಎಂಬ ಹೆಸರು ನಮೂದಿಸಲಾಗಿದೆ. ಇವೆಲ್ಲವನ್ನು ಗಮನಿಸಿದರೆ ಎಲ್ಲವೂ ಗೊಂದಲಮಯಗೂಡಗಿದೆ.