ಕುರುಕ್ಷೇತ್ರ ಯಾವಾಗ ರಿಲೀಸ್ ಆಗುತ್ತೆ ಸರ್ ?, ನಮ್ ಬಾಸ್ ನೋಡ್ಬೇಕು, ಅಂಬಿ ಅಣ್ಣನನ್ನು ನೋಡಬೇಕು ನಾನು ಎಂದು ಕೇಳುತ್ತಿದ್ದ ಅಭಿಮಾನಿಗಳಿಗೆ ರಿಲೀಸ್ ದಿನಾಂಕ ನಿಗದಿಪಡಿಸಿ ಸಿಹಿ ಸುದ್ದಿ ಕೊಟ್ಟರು. ಬಿಡುಗಡೆಗೂ ಮುನ್ನ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದು 'ಕುರುಕ್ಷೇತ್ರ'ದ ಎರಡು ಟೀಸರ್‌ಗಳು.

ಮುನಿರತ್ನ ಮೇಲೆ ಮುನಿಸಿಕೊಂಡ ಡಿ-ಬಾಸ್ ಫ್ಯಾನ್ಸ್!

ಇದಾದ ಮೇಲೆ ಶುರುವಾಯ್ತು ನೋಡಿ ಕಿಡಿ. ಡಿ ಬಾಸ್‌ ಅಭಿಮಾನಿಗಳು ಟ್ರೈಲರ್‌ ಲಾಂಚ್‌ ಆಹ್ವಾನ ಪತ್ರಿಕೆಯಲ್ಲಿ ನಮ್ಮ ದರ್ಶನ್ ಫೋಟೋವಿಲ್ಲ ಎಂದು ನಿರ್ಮಾಪಕ ಮುನಿರತ್ನ ವಿರುದ್ಧ ತಿರುಗಿ ಬಿದ್ದರು. ಆ ನಂತರ ಬಿಡುಗಡೆಯಾದ ಟ್ರೇಲರ್ ನೋಡಿ ಇದೇನಪ್ಪಾ? ವಿಡಿಯೋ ತುಂಬಾ ಮುನಿರತ್ನ ಹೆಸರು ಮಾತ್ರ ಕಾಣಿಸುತ್ತದೆ ಇನ್ಯಾರು ಇಲ್ವಾ ಎಂದು ಮುನಿರತ್ನ ವಿರುದ್ಧ ಮುನಿಸಿಕೊಂಡರು.

'ಕುರುಕ್ಷೇತ್ರ' ಟ್ರೈಲರ್‌ನಲ್ಲಿ ತಪ್ಪು-ತಪ್ಪು ಕನ್ನಡ ಬಳಕೆ!

ಹಾಟ್ ಹಾಟ್‌ ವಾತಾವರಣವನ್ನು ಕೂಲ್ ಮಾಡೋಕೆ ದರ್ಶನ್‌ ತಮಾಷೆ ಮಾಡುವ ರೀತಿಯಲ್ಲಿ 'ಕುರುಕ್ಷೇತ್ರ ಕಲಾವಿದರಿಗೆ ಒಂದು ಸಿನಿಮಾಗೆ ಕೊಡುವಷ್ಟು ಸಂಭಾವನೆ ಕೊಟ್ಟು ಎರಡು ಸಿನಿಮಾ ಕೆಲಸ ಮಾಡಿಸಿದ್ದಾರೆ' ಎಂದು ಕಾಲೆಳೆದರು. ಪಂಚ ಭಾಷೆಯಲ್ಲಿ ರಿಲೀಸ್ ಆಗುತ್ತಿರುವ ಕುರುಕ್ಷೇತ್ರ ಬಾಕ್ಸ್‌ ಆಫೀಸ್‌ನಲ್ಲಿ ಎಷ್ಟು ಕೋಟಿ ತನ್ನದಾಗಿಸಿಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.