ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಸ್ಯಾಂಡಲ್‌ವುಡ್ ತಾರಾಂಗಣವೇ ಸೇರಿ ಮಾಡಿರುವಂತಹ ಮೊದಲ 3D ಪೌರಾಣಿಕ ಸಿನಿಮಾ 'ಕುರುಕ್ಷೇತ್ರ'! ಪಾತ್ರಧಾರಿಗಳ ಹೆಸರು ಹಾಗೂ ಟೀಸರ್ ಮೂಲಕ ಗಮನ ಸೆಳೆದ ಕುರುಕ್ಷೇತ್ರ ಟೀಸರ್ ರಿಲೀಸ್ ಆಗಿದ್ದು ಅದು ಅಭಿಮಾನಿಗಳಿಗೆ ಬೇಸರ ತಂದಿದೆ.

ಪೈಲ್ವಾನ್ V/S ಕುರುಕ್ಷೇತ್ರ: ಸ್ಟಾರ್ ವಾರ್ ಬಗ್ಗೆ ಸುದೀಪ್ ಕೂಲ್ ಉತ್ತರವಿದು!

ಟೀಸರ್ ಮೂಲಕ ಪರಭಾಷಾ ಚಿತ್ರದವರನ್ನು ಒಮ್ಮೆ ಸ್ಯಾಂಡಲ್‌ವುಡ್ ಕಡೆ ನೋಡುವಂತೆ ಮಾಡಿದ್ದು 'ಕುರುಕ್ಷೇತ್ರ'. ಟ್ರೇಲರ್‌ನಲ್ಲಿ ಅಭಿಮಾನಿಗಳನ್ನು ತೃಪ್ತಿಪಡಿಸುವಲ್ಲಿ ವಿಫಲವಾಗಿದೆ. ಟ್ರೇಲರ್ ಪೂರ್ತಿ ಮುನಿರತ್ನ ಹೆಸರೇ ಕಾಣುತ್ತದೆ ಹೊರತು ಯಾವ ಹೊಸತನವೂ ಕಾಣುವುದಿಲ್ಲ. ನಿರೀಕ್ಷೆ ಹುಟ್ಟಿಸಿದಷ್ಟು ಟ್ರೇಲರ್ ಚೆನ್ನಾಗಿಲ್ಲ ಎಂಬ ಅಭಿಪ್ರಾಯ ಮೂಡಿದೆ. ಎರಡು ಟೀಸರ್ ಸೇರಿಸಿ ಮಾಡಿರುವ ಟ್ರೇಲರ್ ಇದು ಎಂದು ಟ್ರೋಲ್ ಮಾಡಲಾಗುತ್ತಿದೆ.

ಬಿಡುಗಡೆ ಆಗಿರುವ ಟ್ರೇಲರ್ 1 ನಿಮಿಷ 50 ಸೆಕೆಂಡ್ ಇದ್ದು ಅದರಲ್ಲಿ ಸುಮಾರು 1 ನಿಮಿಷ ಮುನಿರತ್ನ ಹಾಗೂ ಪ್ರೊಡಕ್ಷನ್ ಹೌಸ್ ಹೆಸರು ಇದೆ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವು ನೆಟ್ಟಿಗರು ಚಿತ್ರದ ಕೆಲವೊಂದು ದೃಶ್ಯವನ್ನು ಮಂಡ್ಯದ ಗದ್ದೆಯಲ್ಲಿ ಚಿತ್ರೀಕರಣ ಮಾಡಿರುವ ಹಾಗಿದೆ. ಇದನ್ನು ಪರಭಾಷೆಗಳಲ್ಲಿ ರಿಲೀಸ್ ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ.