ಲಕ್ಕಿಮ್ಯಾನ್‌ ಸಿನಿಮಾ ನೋಡಿದ ಬಹಳ ಮಂದಿ ನನ್ನ ಹುಡುಕಿಕೊಂಡು ಬರುತ್ತಿದ್ದರು. ಈ ಸಿನಿಮಾದ ಕೊನೆಯಲ್ಲಿ ಪರಮಾತ್ಮನಾದ ಅಪ್ಪು ಅವರಲ್ಲಿ ನಾನೊಂದು ಮಾತು ಕೇಳ್ತೀನಿ, ದೇವ್ರೇ ಕೊನೇ ಬಾರಿ ನಿನ್ನನ್ನೊಮ್ಮೆ ತಬ್ಬಿಕೊಳ್ಳಬಹುದಾ ಅಂತ. 

‘ಲಕ್ಕಿಮ್ಯಾನ್‌ ಸಿನಿಮಾ ನೋಡಿದ ಬಹಳ ಮಂದಿ ನನ್ನ ಹುಡುಕಿಕೊಂಡು ಬರುತ್ತಿದ್ದರು. ಈ ಸಿನಿಮಾದ ಕೊನೆಯಲ್ಲಿ ಪರಮಾತ್ಮನಾದ ಅಪ್ಪು ಅವರಲ್ಲಿ ನಾನೊಂದು ಮಾತು ಕೇಳ್ತೀನಿ, ದೇವ್ರೇ ಕೊನೇ ಬಾರಿ ನಿನ್ನನ್ನೊಮ್ಮೆ ತಬ್ಬಿಕೊಳ್ಳಬಹುದಾ ಅಂತ. ಅಪ್ಪು ನನ್ನ ತಬ್ಬಿಕೊಳ್ಳುತ್ತಾರೆ. ಜನರಿಗೆ ಈ ಸೀನ್‌ ಎಷ್ಟು ಕನೆಕ್ಟ್ ಆಗಿದೆ ಅಂದರೆ ಅವರು, ಅಪ್ಪು ಅವರನ್ನು ತಬ್ಬಿಕೊಂಡ ನೀವೇ ಲಕ್ಕಿಮ್ಯಾನ್‌. ನಿಮ್ಮನ್ನೊಮ್ಮೆ ತಬ್ಕೊಳ್ಬೇಕು ಅಂತ ಬಂದು ಕಣ್ಣೀರು ಹಾಕುತ್ತಾ ತಬ್ಕೊಳ್ತಾರೆ. ಈ ಸಿನಿಮಾ ನನ್ನ ಬದುಕಿನಲ್ಲಿ ಮರೆಯಾಗದ ಸ್ವೀಟ್‌ ಮೆಮೊರಿ.’ ಹೀಗಂದದ್ದು ಡಾರ್ಲಿಂಗ್‌ ಕೃಷ್ಣ.

‘ಲಕ್ಕಿಮ್ಯಾನ್‌’ ಚಿತ್ರತಂಡ ತಮ್ಮ ಸಿನಿಮಾವನ್ನು ಬೆಂಬಲಿಸಿದವರಿಗೆ ಥ್ಯಾಂಕ್ಸ್‌ ಹೇಳಲೆಂದು ಪ್ರೆಸ್‌ಮೀಟ್‌ ಕರೆದಿತ್ತು. ಈ ವೇಳೆ ಚಿತ್ರದ ನಾಯಕ ಡಾರ್ಲಿಂಗ್‌ ಕೃಷ್ಣ ಈ ಸಿನಿಮಾಕ್ಕೆ ಜನ ನೀಡಿದ ಅದ್ಭುತ ಪ್ರತಿಕ್ರಿಯೆ ಬಗ್ಗೆ ಮಾತನಾಡಿದರು. ‘ಅಪ್ಪು ನೆನಪಾಗಿ ಬೇಸರವಾಗುತ್ತೆ ಅಂತ ಮೊದಲು ಈ ಸಿನಿಮಾಕ್ಕೆ ಬರಲು ಅಶ್ವಿನಿ ಮೇಡಂ ಅನುಮಾನಿಸಿದ್ದರು. ನಾವು ಹೋಗಿ ಕರೆದ ಬಳಿಕ ಬಂದು ಸಿನಿಮಾ ನೋಡಿ ಬಹಳ ಎನ್‌ಜಾಯ್‌ ಮಾಡಿದ್ರು. ದೇವರ ದರ್ಶನ ದೇವಸ್ಥಾನದಲ್ಲೇ ಆಗಬೇಕು. ಹೀಗಾಗಿ ಥಿಯೇಟರ್‌ಗೇ ಬಂದು ಸಿನಿಮಾ ನೋಡಿ, ಓಟಿಟಿಗೆ ಕಾಯ್ಬೇಡಿ’ ಎಂದೂ ಕೃಷ್ಣ ವಿನಂತಿಸಿದರು.

Puneeth Rajkumar Lucky Man ಒಪ್ಪದಿದ್ದರೆ ಈ ಚಿತ್ರ ಮಾಡುತ್ತಿರಲಿಲ್ಲ: ನಾಗೇಂದ್ರ ಪ್ರಸಾದ್‌

ನಿರ್ದೇಶಕ ನಾಗೇಂದ್ರ ಪ್ರಸಾದ್‌, ‘ಇಷ್ಟು ಪ್ರೀತಿಸ್ತೀರಿ ಅಂತ ಕನಸೂ ಕಂಡಿರಲಿಲ್ಲ. ಇದು ಅಪ್ಪು ಅವರೇ ನಿಂತು ನಡೆಸಿದ ಸಿನಿಮಾ. ಅವರ ಆಶೀರ್ವಾದವೇ ನಮ್ಮನ್ನು ಮುನ್ನಡೆಸಿದೆ’ ಎಂದರು. ನಾಯಕಿ ಸಂಗೀತಾ ಶೃಂಗೇರಿ, ‘ಈ ಸಿನಿಮಾಕ್ಕೆ ಬಂದ ಪ್ರತಿಕ್ರಿಯೆ ನೋಡಿದ್ರೆ ಜನರಿಗೆ ಅಪ್ಪು ಅವರ ಮೇಲಿರುವ ಪ್ರೀತಿ ಕಾಣುತ್ತೆ. ಥಿಯೇಟರ್‌ನಲ್ಲಿ ಅವರ ಸೀನ್‌ ಬಂದಾಗ ಗಂಟಲು ಹೋಗೋ ರೀತಿ ಕಿರುಚಿದ್ದೀವಿ. ಮೊದಲಿಂದಲೂ ಅವ್ರನ್ನು ಭೇಟಿ ಆಗುವ ಕನಸಿತ್ತು, ಈವರೆಗೆ ಅದು ಸಾಧ್ಯವಾಗಲಿಲ್ಲ’ ಎಂದರು.

ಲಕ್ಕಿ ಮ್ಯಾನ್‌ ದೇವ್ರು ಅಪ್ಪು: ನಟ ಪುನೀತ್‌ರಾಜ್‌ಕುಮಾರ್‌ ನಟಿಸಿದ್ದಾರೆಂಬ ಕಾರಣಕ್ಕೆ ಸದ್ಯಕ್ಕೆ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ‘ಲಕ್ಕಿ ಮ್ಯಾನ್‌’. ಡಾರ್ಲಿಂಗ್‌ ಕೃಷ್ಣ ಚಿತ್ರದ ನಾಯಕ. ನಾಗೇಂದ್ರ ಪ್ರಸಾದ್‌ ನಿರ್ದೇಶನದ ಚಿತ್ರ. ‘ನನ್ನ ಮಾತೃಭಾಷೆ ಕನ್ನಡದಲ್ಲಿ ನಾನು ನಿರ್ದೇಶನ ಮಾಡುತ್ತಿರುವ ಮೊದಲ ಸಿನಿಮಾ ಇದು. ತಮಿಳಿನ ‘ಓ ಮೈ ಕಡವುಳೆ’ ಚಿತ್ರದ ರೀಮೇಕ್‌ ಇದು . ಮನರಂಜನೆ ಚಿತ್ರದ ಪ್ರಮುಖ ಅಂಶ. ಈ ಚಿತ್ರಕ್ಕೆ ‘ಲಕ್ಕಿ ಮ್ಯಾನ್‌’ ಎನ್ನುವ ಹೆಸರು ಕೊಟ್ಟಾಗ ಪುನೀತ್‌ ಅವರು ತುಂಬಾ ಖುಷಿ ಪಟ್ಟರು. ಕತೆ ಕೇಳಿ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರು. ಅಪ್ಪು ಅವರ ಜೊತೆ ಕೆಲಸಮಾಡಿದ್ದು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ಅವರು ತೋರಿಸಿದ ಪ್ರೀತಿಗೆ ನಾನು ಋುಣಿ. ಅಪ್ಪು ಅವರು ತುಂಬಾ ಅರ್ಥಗರ್ಭಿತವಾದ ಪಾತ್ರವನ್ನು ಮಾಡಿದ್ದಾರೆ’ ಎಂದು ನಾಗೇಂದ್ರ ಪ್ರಸಾದ್‌ ಹೇಳಿಕೊಂಡರು.

'ಲಕ್ಕಿ ಮ್ಯಾನ್' ಚಿತ್ರೀಕರಣ ಕಂಪ್ಲೀಟ್: ವಿಶೇಷ ಪಾತ್ರದಲ್ಲಿ Puneeth Rajkumar

ಇನ್ನೂ ಈ ಚಿತ್ರದ ಹಾಡೊಂದರಲ್ಲಿ ಪ್ರಭುದೇವ ಹಾಗೂ ಪುನೀತ್‌ರಾಜ್‌ಕುಮಾರ್‌ ಅವರು ಜತೆಯಾಗಿ ಡ್ಯಾನ್ಸ್‌ ಮಾಡಿರುವುದು ಮತ್ತೊಂದು ಹೈಲೈಟ್‌. ‘ನನ್ನ ಸಿನಿಮಾ ಜರ್ನಿ ಶುರುವಾಗಿದ್ದೇ ಅಪ್ಪು ಅವರ ಚಿತ್ರಗಳಲ್ಲಿ ಅಸಿಸ್ಟೆಂಟ್‌ ಡೈರೆಕ್ಟರ್‌ ಆಗಿ ಕೆಲಸ ಮಾಡುವ ಮೂಲಕ. ಅಪ್ಪು ಅವರ ಜತೆಗೆ ನಟಿಸಿದ್ದು ನನ್ನ ಪುಣ್ಯ. ನಾನು ಅವರ ಅಭಿಮಾನಿ ಕೂಡ. ಪುನೀತ್‌ ಅವರು ಇಲ್ಲಿ ದೇವರ ಪಾತ್ರ ಮಾಡಿದ್ದಾರೆ. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ನೋಡಿ, ಬೆಂಬಲಿಸಿ’ ಎಂದು ಡಾರ್ಲಿಂಗ್‌ ಕೃಷ್ಣ ಕೇಳಿಕೊಂಡರು. ಚಿತ್ರದ ನಾಯಕಿ ಸಂಗೀತಾ ಶೃಂಗೇರಿ ಮಾತನಾಡಿ, ‘ಚಿತ್ರದಲ್ಲಿ ಅನು ಹೆಸರಿನ ಪಾತ್ರದಲ್ಲಿ ನಟಿಸಿದ್ದೇನೆ. ಮಧ್ಯಮ ವರ್ಗದ ಹುಡುಗಿ. ಮದುವೆ ಬಗ್ಗೆ ಗೊಂದಲ ತುಂಬಿಕೊಂಡಿರುತ್ತಾಳೆ. ನನ್ನ ಪಾತ್ರ ಚೆನ್ನಾಗಿದೆ’ ಎಂದರು. ರೋಶಿನಿ ಪ್ರಕಾಶ್‌ ಚಿತ್ರದ ಮತ್ತೊಬ್ಬ ನಾಯಕಿ. ಅ ವರು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ರಂಗಾಯಣ ರಘ, ಸಾಧುಕೋಕಿಲ ಮುಖ್ಯ ಪಾತ್ರಧಾರಿಗಳು. ಪಿ ಆರ್‌ ಮೀನಾಕ್ಷಿ ಸುಂದರಮ್ ಹಾಗೂ ಸುಂದರ ಕಾಮರಾಜ್‌ ಅವರು ಚಿತ್ರದ ನಿರ್ಮಾಪಕರು.