ಕಳ್ಳತನದ ವ್ಯವಹಾರ ಮಾಡೋಂಗಿದ್ರೆ ರಾಜಕೀಯ..., ಮರ್ಯಾದಸ್ಥರಿಗೆ ರಾಜಕೀಯವಲ್ಲ. ರಾಜಕೀಯವಾಗಿ ಹಣ ಮಾಡಿಕೊಳ್ಳುವುದಿದ್ರೆ ಮಾಡಿಕೋ..., ರಾಜಕೀಯ ದುಡ್ಡು ಮಾಡಿ, ಹಣ ಚೆಲ್ಲಿ ಚುನಾವಣೆ ಮಾಡು... –ಇವು ಮಾಜಿ ಸಚಿವ ಅಂಬರೀಷ್‌ ಅವರ ಹೇಳಿಕೆಗಳು. ಈ ಹೇಳಿಕೆಗಳನ್ನೊಳಗೊಂಡ ವಿಡಿಯೊ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ಹೇಳಿರುವುದಿಷ್ಟು

 ‘15 ಜನ ಸಿಎಂಗಳ ಜತೆ ಟೀ ಕುಡಿದಿರೋನು ಅಂಬರೀಶ. ನಾನು ಇವತ್ತಿನಿಂದ ರಾಜಕೀಯ ನೋಡುತ್ತಿಲ್ಲ. ನನಗೆ ಅವತ್ತಿಂದ ಇವತ್ತಿನ ತನಕ ರಾಜಕೀಯ ಗೊತ್ತು. ರಾಜಕೀಯ ಮರ್ಯಾದಸ್ಥರಿಗಲ್ಲ. ರಾಜಕೀಯವಾಗಿ ಹಣ ಮಾಡಿಕೊಳ್ಳುವುದಿದ್ರೆ ಮಾಡಿಕೋ., ರಾಜಕೀಯ ದುಡ್ಡು ಮಾಡಿ, ಹಣ ಚೆಲ್ಲಿ ಚುನಾವಣೆ ಮಾಡು..., ಕಳ್ಳತನದ ವ್ಯವಹಾರ ಮಾಡೋಂಗಿದ್ರೆ ರಾಜಕೀಯ...

ನಾವೂ ಕರ್ನಾಟಕದಲ್ಲಿ ಎಲ್ಲಾ ಜಾತಿ, ಎಲ್ಲಾ ಪಕ್ಷದವರ ಅನ್ನ ತಿಂದಿರೋರು. ಫಸ್ಟ್‌ಕ್ಲಾಸಾಗಿ  35 ವರ್ಷ ಜೀವನ ಮಾಡಿದ್ದೀವಿ. ನಾನೇನಾದ್ರು ಜಾತಿ, ಪಕ್ಷ ನೋಡಿದ್ನಾ? ಎಲ್ಲಾರು ಕೊಟ್ಟು ಸಾಕಿರೋರೆ ನನಗೆ... ಏನ್‌ ಕಮ್ಮಿ ಸಾಕಿದ್ದಾರಾ?

ಈ ವಿಡಿಯೊ 2009ರ ಡಿ. 25ರಂದು ಅಪ್‌ಲೋಡ್‌ ಆಗಿದ್ದು ಈಗ ವೈರಲ್ ಆಗಿದೆ.

Click Here :ಪ್ರೇಮಿಗಳೆ ನಂದಿ ಬೆಟ್ಟದಲ್ಲಿ ರೊಮ್ಯಾನ್ಸ್ ಮಾಡುವಾಗ ಎಚ್ಚರ