ಆ್ಯಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾಗೆ ಕೂಡಿ ಬಂತು ಕಂಕಣ ಭಾಗ್ಯ | ಬಾಲ್ಯದ ಸ್ನೇಹಿತೆ ಜೊತೆ ಎಂಗೇಜ್‌ಮೆಂಟ್ 

ಬೆಂಗಳೂರು (ನ. 16): ಆ್ಯಕ್ಷನ್​ ಪ್ರಿನ್ಸ್ ಧ್ರುವ ಸರ್ಜಾಗೆ ಕಂಕಣ ಭಾಗ್ಯ ಕೂಡಿ ಬಂದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಹುಕಾಲದ ಗೆಳತಿ ಪ್ರೇರಣಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಧ್ರುವ ಸರ್ಜಾ. ಡಿಸೆಂಬರ್ 10 ರಂದು ಬನಶಂಕರಿಯ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಪ್ರೇರಣಾ ಜತೆ ಧ್ರುವ ಸರ್ಜಾ ಎಂಗೇಜ್​ಮೆಂಟ್ ನಡೆಯಲಿದೆ. ​ 
ಹುಟ್ಟು‌ಹಬ್ಬದ ಸಂದರ್ಭದಲ್ಲಿ ನೀಡಿದ ಸಂದರ್ಶನದಲ್ಲಿ ಧ್ರುವ ಸರ್ಜಾ ಲವ್ ವಿಷಯವನ್ನು ಬಹಿರಂಗಪಡಿಸಿದ್ದಾರೆ. 

ಪ್ರೇರಣಾ- ಧ್ರುವ ಸರ್ಜಾ ಬಹುಕಾಲದಿಂದ ಆತ್ಮೀಯ ಸ್ನೇಹಿತರು. ಸರ್ಜಾ ಕುಟುಂಬಕ್ಕೂ ಪ್ರೇರಣ ಆತ್ಮೀಯರು. ಸ್ನೇಹ ಪ್ರೀತಿಗೆ ತಿರುಗಿ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದಾರೆ. 

ಯಾರು ಈ ಪ್ರೇರಣಾ? 

ಧ್ರುವ ಸರ್ಜಾ ಹಾಗೂ ಪ್ರೇರಣಾ 16 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಧ್ರುವಾಗೆ 16 ವರ್ಷ ಇದ್ದಾಗ ಪ್ರೀತಿಯಲ್ಲಿ ಬಿದ್ದಿದ್ದಾರೆ. ಹಿಂದೂ ಸಂಪ್ರದಾಯದಂತೆ ಡಿಸೆಂಬರ್ ಮೊದಲ ವಾರದಲ್ಲಿ ರಿಂಗ್ ಬದಲಾಯಿಸಿಕೊಳ್ಳುವ ಮೂಲಕ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ನಲ್ಲಿರುವ ಆಂಜನೇಯ ದೇವಸ್ತಾನದಲ್ಲಿ ನಿಶ್ಚಿತಾರ್ಥ ನಡೆಯಲಿದೆ. ಬಸವನಗುಡಿಯ ಕಾಲೇಜೊಂದರಲ್ಲಿ ಪ್ರೇರಣಾ ಲೆಕ್ಚರರ್ ಆಗಿದ್ದರು. ಆಗ ಧ್ರುವ ಸರ್ಜಾ ಬಾಕ್ಸರ್ ಆಗಿದ್ದರು. ಈ ಸಂದರ್ಭದಲ್ಲಿ ಇಬ್ಬರೂ ಲವ್ವಲ್ಲಿ ಬಿದ್ದಿದ್ದಾರೆ. ಸದ್ಯ ಪ್ರೇರಣಾ ಮನೆಯಲ್ಲಿದ್ದಾರೆ. ಬಾಲ್ಯದಿಂದಲೂ ಇಬ್ಬರು ಕ್ಲೋಸ್ ಫ್ರೆಂಡ್ಸ್ ಆಗಿದ್ದಾರೆ.