ಸನ್ನಿ ಲಿಯೋನ್ಗೆ ಅಭಿನಯದ ಪಾಠ ಶುರುವಾಗಿದೆ. ಅಳುವುದು ಹೇಗೆ ? ಕಥೆಯಲ್ಲಿರುವ ಪಾತ್ರವನ್ನು ಫೀಲ್ ಮಾಡಿಕೊಳ್ಳುವುದು ಹೇಗೆ. ಇಂತಹ ಹಲವು ವಿಚಾರಗಳನ್ನು ನಿರ್ದೇಶಕ ಪ್ರಕಾಶ್ ಭಾರದ್ವಾಜ್ ಹೇಳಿಕೊಡುತ್ತಿದ್ದಾರೆ. ಕಳೆದ ಕೆಲ ತಿಂಗಳಿನಿಂದ ಈ ಕಲಿಕೆ ನಡೆಯುತ್ತಿದ್ದು, ಈಗ ಸನ್ನಿ ಒಂದು ಹಂತಕ್ಕೆ ಬಂದಿದ್ದಾರೆ. ಗ್ಲೀಸ್ರಿನ್ ಇಲ್ಲದೇ ಅಳುವುದನ್ನು ಕಲಿತಾಗಿದೆ. ಪಾತ್ರಗಳನ್ನೂ ಫೀಲ್ ಮಾಡಿಕೊಳ್ಳುತ್ತಿದ್ದಾರೆ.
ಮುಂಬೈ(ನ.19): ಸನ್ನಿ ಲಿಯೋನ್ಗೆ ಅಭಿನಯದ ಪಾಠ ಶುರುವಾಗಿದೆ. ಅಳುವುದು ಹೇಗೆ ? ಕಥೆಯಲ್ಲಿರುವ ಪಾತ್ರವನ್ನು ಫೀಲ್ ಮಾಡಿಕೊಳ್ಳುವುದು ಹೇಗೆ. ಇಂತಹ ಹಲವು ವಿಚಾರಗಳನ್ನು ನಿರ್ದೇಶಕ ಪ್ರಕಾಶ್ ಭಾರದ್ವಾಜ್ ಹೇಳಿಕೊಡುತ್ತಿದ್ದಾರೆ.
ಕಳೆದ ಕೆಲ ತಿಂಗಳಿನಿಂದ ಈ ಕಲಿಕೆ ನಡೆಯುತ್ತಿದ್ದು, ಈಗ ಸನ್ನಿ ಒಂದು ಹಂತಕ್ಕೆ ಬಂದಿದ್ದಾರೆ. ಗ್ಲೀಸ್ರಿನ್ ಇಲ್ಲದೇ ಅಳುವುದನ್ನು ಕಲಿತಾಗಿದೆ. ಪಾತ್ರಗಳನ್ನೂ ಫೀಲ್ ಮಾಡಿಕೊಳ್ಳುತ್ತಿದ್ದಾರೆ.
ಸನ್ನಿಗೆ ಅಭಿನಯದ ಪಾಠ ಹೇಳಿಕೊಡಲು ಅರೇಂಜ್ ಮಾಡಿದ್ದು ಬೇರೆ ಯಾರೂ ಅಲ್ಲ. ಅದು ಆಮೀರ್ ಖಾನ್. ಆದರೆ, ಯಾವ್ ಚಿತ್ರಕ್ಕಾಗಿ ಈ ಬದಲಾವಣೆ ಅನ್ನೋದು ಇನ್ನಷ್ಟೇ ತಿಳಿಯಬೇಕಿದೆ.
