ಸಿನಿಮಾ ಕ್ಷೇತ್ರಕ್ಕೆ ಐಶ್ವರ್ಯಾ ರೈ ಕೊಡುಗೆಯನ್ನು ಪರಿಗಣಿಸಿ 'ಮೇರಿಯಲ್ ಸ್ಟ್ರೀಪ್' ಪ್ರಶಸ್ತಿ ನೀಡಲಾಗಿದೆ. ಐಶ್ ಮಗಳು ಆರಾಧ್ಯ ಬಚ್ಚನ್ ಜೊತೆ ವಾಷಿಂಗ್ ಟನ್ ಡಿಸಿಯಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದ್ದು ಪತಿ ಅಭಿಶೇಕ್ ಬಚ್ಚನ್ ಪತ್ನಿಯ ಸಾಧನೆ ಬಗ್ಗೆ ಹೆಮ್ಮೆಪಟ್ಟಿದ್ದಾರೆ.
ಮುಂಬೈ (ಸೆ. 10): ಸಿನಿಮಾ ಕ್ಷೇತ್ರಕ್ಕೆ ಐಶ್ವರ್ಯಾ ರೈ ಕೊಡುಗೆಯನ್ನು ಪರಿಗಣಿಸಿ ’ಮೇರಿಯಲ್ ಸ್ಟ್ರೀಪ್’ ಪ್ರಶಸ್ತಿ ನೀಡಲಾಗಿದೆ. ಐಶ್ವರ್ಯಾ ರೈ ಮಗಳು ಆರಾಧ್ಯ ಬಚ್ಚನ್ ಜೊತೆ ವಾಷಿಂಗ್ ಟನ್ ಡಿಸಿಯಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದ್ದು ಪತಿ ಅಭಿಷೇಕ್ ಬಚ್ಚನ್ ಪತ್ನಿಯ ಸಾಧನೆ ಬಗ್ಗೆ ಹೆಮ್ಮೆಪಟ್ಟಿದ್ದಾರೆ.
ಟ್ವಿಟರ್ನಲ್ಲಿ ಪತ್ನಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಐಶ್ವರ್ಯಾಗೆ ಪ್ರಶಸ್ತಿ ಬಂದಿರುವುದು ಖುಷಿಪಡುವ ವಿಚಾರ. ಪತಿಯಾಗಿ ಇದು ನನಗೆ ಹೆಮ್ಮೆ ವಿಚಾರ ಎಂದು ಟ್ವೀಟ್ ಮಾಡಿದ್ದಾರೆ.
ಪ್ರಶಸ್ತಿ ಸ್ವೀಕರಿಸಿದ ಐಶ್ವರ್ಯಾ ರೈ, ನನ್ನೆಲ್ಲಾ ಹಿತೈಷಿಗಳಿಗೆ, ನನ್ನ ಸ್ನೇಹಿತರು, ಕುಟುಂಬದವರಿಗೆ ಧನ್ಯವಾದಗಳು. ಎಲ್ಲರಿಗೂ ದೇವರು ಒಳ್ಳೆಯದು ಮಾಡಲಿ. ಲವ್ ಯೂ ಆಲ್
