ಅದೇ ಗತ್ತು, ಅದೇ ತಾಕತ್ತು, ಅಭಿ ರೂಪದಲ್ಲಿ ಅಂಬರೀಷ್ ಮತ್ತೆ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದಾರೆ ಎಂದು ಟೀಸರ್ ನೋಡಿದವರು ಪ್ರತಿಕ್ರಿಯಿಸಿದ್ದಾರೆ. ದರ್ಶನ್, ಸುದೀಪ್, ಯಶ್ , ಪುನೀತ್ ಸೇರಿದಂತೆ ಎಲ್ಲಾ ಸ್ಟಾರ್‌ಗಳೂ ಅಭಿಷೇಕ್ ಅಂಬರೀಶ್‌ರನ್ನು ಕನ್ನಡ ಚಿತ್ರರಂಗಕ್ಕೆ ಸ್ವಾಗತಿಸಿ ಶುಭ ಹಾರೈಸಿದ್ದಾರೆ. ಟೀಸರ್‌ನಲ್ಲಿರುವ ಖಡಕ್ ಡೈಲಾಗ್ ಕೂಡ ಟ್ರೆಂಡ್ ಆಗುತ್ತಿದೆ. ‘ಚಾನ್ಸೇ ಇಲ್ಲ, ನೋ ವೇ.....ಹೀರೋನೇ’ ಎನ್ನುವ ಮಾತು ಅಭಿಮಾನಿಗಳಲ್ಲಿ ವೈರಲ್ ಆಗಿದೆ. 

'ಅಮರ್' ಟೀಸರ್ ರಿಲೀಸ್.. ನೋಡ್ರಪ್ಪಾ ಜೂ.ರೆಬೆಲ್ ಸ್ಟಾರ್‌ನಾ...!

ಈ ಸಂಖ್ಯೆ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಲೇ ಇದೆ. ಅಭಿಷೇಕ್ ಅಂಬರೀಷ್ ಈ ಚಿತ್ರದೊಂದಿಗೆ ದೊಡ್ಡ ಹವಾ ಸೃಷ್ಟಿಸುವುದು ಗ್ಯಾರಂಟಿ ಆಗಿದೆ. ಸಂದೇಶ್ ಕಂಬೈನ್ಸ್ ಬ್ಯಾನರ್‌ನಲ್ಲಿ ಸಂದೇಶ್ ನಾಗರಾಜ್ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೀಗ ಮಲೇಶಿಯಾದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಅಭಿಗೆ ಜೋಡಿಯಾಗಿ ತಾನ್ಯಾ ಹೋಪ್ ಅಭಿನಯಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ಅಮರ್’ ಚಿತ್ರದ ಟೀಸರ್ ನೋಡಿರುವ ಚಿತ್ರರಂಗದ ಹಲವು ತಾರೆಯರು
ಜೂನಿಯರ್ ರೆಬೆಲ್‌ಸ್ಟಾರ್‌ಗೆ ಸ್ವಾಗತ ಕೋರಿದ್ದಾರೆ.