ಆ್ಯಕ್ಷನ್, ಡೈಲಾಗ್ಸ್, ಆಂಗಿಕ ಭಾಷೆ...ಗಳಿಂದಲೇ ಅಂಬರೀಷ್ ಕನ್ನಡಿಗರ ಹೃದಯದಲ್ಲಿ ವಿಶೇಷ ಸ್ಥಾನ ಗಿಟ್ಟಿಸಿದವರು. ಇನ್ನು ಅವರ ಮಗನ ಸಿನಿಮಾವೆಂದೆ ಸಹಜವಾಗಿಯೇ ಎಲ್ಲರಿಗೂ ಕುತೂಹಲ ಇದ್ದೇ ಇರುತ್ತದೆ. ಜೂ.ಅಂಬರೀಷ್ ನಟನೆಯ ಅಮರ್ ಚಿತ್ರದ ಪ್ರೇಮಿಗಳ ದಿನದಂದೇ ರಿಲೀಸ್ ಮಾಡಲಾಗಿದೆ.

ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅಭಿನಯ, ನಿರ್ದೇಶಕ ನಾಗಶೇಖರ್ ಹಾಗೂ ಸಂದೇಶ್ ನಾಗರಾಜ್‌ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಅಮರ್ ಚಿತ್ರದ ಟೀಸರ್ ಇಂದು ಅದ್ಧೂರಿಯಾಗಿ ಬಿಡುಗಡೆಯಾಯಿತು.

'ಹೀರೋ ತರನಾ.....no way chanceee illa....ಹೀರೋನೇ' ಎಂದು ಡೈಲಾಗ್ ಹೇಳುವ ಮೊಲಕ ಅಭಿಷೇಕ್ ಎಂಟ್ರಿ ಕೊಡುತ್ತಾರೆ.

ಇನ್ನು ಅಭಿಷೇಕ್ Dignified, ಕ್ಲಾಸಿಕ್ ಆ್ಯಂಡ್ ಮಾಸ್... ಮೂರು ಲುಕ್‌ನಲ್ಲೂ ಕಾಣಿಸಿಕೊಂಡಿದ್ದಾರೆ. ಟೀಸರ್ ಶುರುವಿನಲ್ಲಿ 'ಮರೆಯಾದೆ ನೀನು, ಮರೆಯಲಾರೆ ನಾನು..ನೋಯುತಿದೆ ಮನ, ಸದಾ ನೆನದು ನಿನ್ನ. ಎಂದೆಂದಿಗೂ ನನ್ನೆದೆಯಲಿ ನೀ ಅಮರ..ಗೆಳೆಯ, ನಿನಗಿದೋ ಅರ್ಪಣೆ ಈ ನನ್ನ ಅಮರ್' ಎಂದು ಇತ್ತೀಚೆಗೆ ಕರುನಾಡನ್ನು ಅಗಲಿದ ಅಂಬರೀಷ್‌ಗೆ ನಮನಗಳನ್ನು ಸಲ್ಲಿಸುವ ಮೂಲಕ ಟೀಸರ್ ಆರಂಭವಾಗುತ್ತದೆ.

ಇನ್ನು ಚಿಕ್ಕಣ್ಣ ಹಾಗೂ ಅಭಿಷೇಕ್ ಕಾಂಬಿನೇಷನ್‌ನ ಸಿನಿಮಾ ಹೇಗಿರುತ್ತದೆ ಎಂದು ಕಾದು ನೋಡಬೇಕೆದೆ. ಬಟ್ ಇದೊಂದು ಹಿಟ್ ಸಿನಿಮಾ ಆಗುವುದು ಗ್ಯಾರಂಟಿ. ಆದರೆ, ಅಂಬರೀಷ್ ಮಗನಾಗಿ ಅಮರ್ ಅಲಿಯಾಸ್ ಅಭಿಷೇಕ್ ಚಿತ್ರದಲ್ಲಿ ಹೇಗೆ ನಟಿಸಿದ್ದಾರೆಂಬ ಕುತೂಹಲ ಕನ್ನಡಿಗರದ್ದು.

ಎಲ್ಲೆಡೆಯಿಂದ ಜೂ.ಅಂಬರೀಷ್‌ಗೆ ಶುಭ ಹಾರೈಕೆಗಳು ಬರುತ್ತಿದ್ದು, ಅಮರ್ ಚಿತ್ರ ಯಶ ಕಾಣಲೆಂದೂ ನಾವೂ ಹಾರೈಸೋಣವೇ?