ನೀವು ಕಿರಿಕ್‌ ಪಾರ್ಟಿ ಸಿನಿಮಾ ನೋಡಿದ್ದರೆ ಅದರಲ್ಲಿದ್ದ ಹಳದಿ ಕಾರು ಗೊತ್ತಿರುತ್ತದೆ. ಸಿನಿಮಾದಲ್ಲಿ ಮುಖ್ಯ ಪಾತ್ರ ವಹಿಸುವ ಚೆಂದದ, ಡಿಫರೆಂಟಾದ ಕಾರಿದು. ಅದನ್ನು ಚಿತ್ರತಂಡ ತಮಗೆ ಬೇಕಾದ ಹಾಗೆ ರೆಡಿ ಮಾಡಿಸಿಕೊಂಡಿತ್ತು. ಹಾಗಾಗಿ ಹಲವಾರು ಮಂದಿಗೆ ಆ ಕಾರಿನ ಮೇಲೆ ಸಿಕ್ಕಾ­ಪಟ್ಟೆಲವ್ವಾಗಿತ್ತು. ತಮ್ಮ ಬಳಿಯೂ ಅಂಥ ದ್ದೊಂದು ಕಾರಿದ್ದರೆ ಅಂತ ಅದೆಷ್ಟೋ ಜನ ಆಸೆ ಪಟ್ಟಿದ್ದರು.
ಮಂಗಳೂರು(ಎ.29): ನೀವು ಕಿರಿಕ್ ಪಾರ್ಟಿ ಸಿನಿಮಾ ನೋಡಿದ್ದರೆ ಅದರಲ್ಲಿದ್ದ ಹಳದಿ ಕಾರು ಗೊತ್ತಿರುತ್ತದೆ. ಸಿನಿಮಾದಲ್ಲಿ ಮುಖ್ಯ ಪಾತ್ರ ವಹಿಸುವ ಚೆಂದದ, ಡಿಫರೆಂಟಾದ ಕಾರಿದು. ಅದನ್ನು ಚಿತ್ರತಂಡ ತಮಗೆ ಬೇಕಾದ ಹಾಗೆ ರೆಡಿ ಮಾಡಿಸಿಕೊಂಡಿತ್ತು. ಹಾಗಾಗಿ ಹಲವಾರು ಮಂದಿಗೆ ಆ ಕಾರಿನ ಮೇಲೆ ಸಿಕ್ಕಾಪಟ್ಟೆಲವ್ವಾಗಿತ್ತು. ತಮ್ಮ ಬಳಿಯೂ ಅಂಥ ದ್ದೊಂದು ಕಾರಿದ್ದರೆ ಅಂತ ಅದೆಷ್ಟೋ ಜನ ಆಸೆ ಪಟ್ಟಿದ್ದರು.
ಈಗ ಕಿರಿಕ್ ಪಾರ್ಟಿ ತಂಡ ಆ ಕಾರನ್ನು ಹರಾಜಿಗಿಟ್ಟಿದೆ. ಇಂಟರೆಸ್ಟಿಂಗ್ ಅಂದರೆ ಆ ಹರಾಜಿನಲ್ಲಿ ಬಂದ ಹಣವನ್ನು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ದಾನ ಮಾಡುತ್ತೇವೆ ಅಂತ ಕಿರಿಕ್ ಪಾರ್ಟಿ ತಂಡ ಹೇಳಿಕೊಂಡಿದೆ. ಇದು ಬಹಳ ಒಳ್ಳೆಯ ಕೆಲಸ. ಗೆದ್ದವರೆಲ್ಲರೂ ಸಣ್ಣ ಪಾಲೊಂದನ್ನು ಅವಶ್ಯಕತೆ ಇರುವವರಿಗೆ ನೀಡಿದರೆ ಅದಕ್ಕಿಂತ ಮಾದರಿ ಕೆಲಸ ಮತ್ತೊಂದಿಲ್ಲ. ಅಂದಹಾಗೆ ನೀವು ಹರಾಜಿನಲ್ಲಿ ಭಾಗವಹಿಸಬೇಕಾದರೆ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಏಪ್ರಿಲ್ 29ರಂದು ರಿಜಿಸ್ಪ್ರೇಷನ್ ಶುರುವಾಗಲಿದೆ.
ವರದಿ: ಕನ್ನಡಪ್ರಭ, ಸಿನಿವಾರ್ತೆ
