ಭಾರತೀಯ ಚಿತ್ರರಂಗದಲ್ಲೇ ದಿ. ವಿಲನ್ ಚಿತ್ರತಂಡ ದಾಖಲೆ ಬರೆಯಲು ಮುಂದಾಗಿದೆ. ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲು ಅನ್ನುವಂತೆ ದಿ ವಿಲನ್ ಚಿತ್ರ ತಂಡ ತನ್ನ ಟೀಸರ್ ರಿಲೀಸ್‌ಗೆ ಟಿಕೆಟ್ ದರ ನಿಗದಿ ಮಾಡಿದೆ. 

ಬೆಂಗಳೂರು :  ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲು ಅನ್ನುವಂತೆ ದಿ ವಿಲನ್ ಚಿತ್ರ ತಂಡ ತನ್ನ ಟೀಸರ್ ರಿಲೀಸ್‌ಗೆ ಟಿಕೆಟ್ ದರ ನಿಗದಿ ಮಾಡಿದೆ. ಅದೂ ರು. 500. ಜೂನ್ 28ರಂದು ಜಿಟಿ ವರ್ಲ್ಡ್ ಮಾಲ್ ಮಾಲ್‌ನಲ್ಲಿ ಬಿಡುಗಡೆಯಾಗುವ ಟೀಸರ್ ಪ್ರದರ್ಶನಕ್ಕೆ ಈ ದರ ನಿಗದಿ ಮಾಡಲಾಗಿದೆ. ಇದರಿಂದ ಬಂದ ಹಣವನ್ನು ಸಂಕಷ್ಟದಲ್ಲಿರುವ ನಿರ್ದೇಶಕರಿಗೆ ವಿತರಿಸುವ ಉದ್ದೇಶ ಇಟ್ಟುಕೊಳ್ಳಲಾಗಿದೆ. 

ಇನ್ನು ಇದೇ ಚಿತ್ರದಲ್ಲಿ ಇರುವ ಹಾಡಿನಿಂದಾಗಿ ಕನ್ನಡ ಚಿತ್ರರಂಗದ ಬಾಸ್ ಯಾರು ಎನ್ನುವ ಗದ್ದಲ ಮತ್ತೆ ಶುರುವಾಗಿದೆ. ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದ ಸ್ಯಾಂಡಲ್‌ವುಡ್ ಬಾಸ್ ಯಾರು ಎನ್ನುವ ವಿವಾದ ದಿ ವಿಲನ್ ಚಿತ್ರದ ಹಾಡಿನಿಂದ ಮತ್ತಷ್ಟು ಜಾಸ್ತಿಯಾಗಿದೆ. 

ದಿ ವಿಲನ್ ಚಿತ್ರದಲ್ಲಿ ಬಳಸಿಕೊಂಡಿರುವ ನಿನ್ನೆ ಮೊನ್ನೆ ಬಂದವರೆಲ್ಲಾ ಬಾಸ್ ಅಂತಾರೆ ಎನ್ನುವ ಹಾಡಿನಿಂದಾಗಿ ಈ ವಿವಾದ ಮತ್ತೆ ಗರಿಗೆದರಿಕೊಂಡಿದೆ. ಈ ಹಾಡು ಬೇರೆ ಸ್ಟಾರ್‌ಗಳ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ