ಸಿಂಪ್ಲಿಸಿಟಿ, ನ್ಯಾಚುರಲ್ ಹಾಗೂ ಹಂಬಲ್ ಹುಡುಗಿ ಸಾಯಿ ಪಲ್ಲವಿ ಸೌತ್ ಇಂಡಿಯಾ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿ. ಬ್ಯೂಟಿ ವಿತ್ ಬ್ರೇನ್ ಎಂದರೆ ತಪ್ಪಾಗದು ನೋಡಿ. ಮಲ್ಲರ್ ಬಗೆಗಿನ ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ ನೋಡಿ.

2 ಕೋಟಿ ಆಫರನ್ನು ನಿರಾಕರಿಸಿದ್ರಾ ಸಾಯಿಪಲ್ಲವಿ?

- ಪಲ್ಲವಿ ಸರ್ಟಿಫೈಡ್ ಡ್ಯಾನ್ಸ್ ಟ್ರೇನಿಂಗ್ ಪಡೆದಿಲ್ಲ. ಬಾಲಿವುಡ್ ನ ಮಾಧುರಿ ದೀಕ್ಷಿತ್ ಹಾಗೂ ಐಶ್ವರ್ಯ ರೈ ನೋಡಿ ಕಲಿತುಕೊಂಡಿದ್ದಾರೆ.

- ಈ ನಟಿ ಕೇರಳದವರಲ್ಲ ಆದರೆ ಪ್ರತಿ ವರುಷ ಓಣಂ ಹಬ್ಬವನ್ನು ತಪ್ಪದೇ ಆಚರಿಸುತ್ತಾರೆ.

- ಪಲ್ಲವಿಯ ರೇರ್ ಟ್ಯಾಲೆಂಟ್ ಬಾದಾಗ ಭಾಷೆಯಲ್ಲಿ ಮಾತನಾಡುವುದು. ಬಾದಾಗ ಅನ್ನುವುದೊಂದು ಅಪರೂಪದ ಸಮುದಾಯ. ಆ ಜನಾಂಗಕ್ಕೆ ಸೇರುವ ಸಾಯಿ ಪಲ್ಲವಿಗೆ ಈ ಭಾಷೆಯನ್ನು ಬರೆಯಲು ಹಾಗೂ ಓದಲು ಬರುತ್ತದೆ.

- ಸಾಯಿ ಪಲ್ಲವಿ ಜಾರ್ಜಿಯಾದಲ್ಲಿ ವೈದ್ಯಕೀಯ ಶಿಕ್ಷಣ ಪಡೆದಿದ್ದಾರೆ. ನಟಿ ಆಗಿಲ್ಲದಿದ್ದರೆ ಕಾರ್ಡಿಯಾಲಜಿಸ್ಟ್ ಆಗುತ್ತಿದ್ದರು.

- ಸಾಯಿ ಪಲ್ಲವಿ ಮೊದಲ ಸಿನಿಮಾ ‘ಧಾಮ್ ಧೂಮ್’ನಲ್ಲಿ ಕಂಗನಾ ರಾಣಾವತ್ ಗೆ ಜೊತೆಯಾಗಿ ನಟಿಸಿದ್ದಾರೆ.