* ನಾನು ಸಪ್ಪಗೆ ಕುಳಿತಿದ್ದರೆ ಬಹಳಷ್ಟು ಜನ ಹತ್ತಿರ ಬಂದು ಯಾಕೆ ಸಪ್ಪಗಿದ್ದೀಯಾ, ಏನಾಯಿತು ಎಂದು ಉದ್ವೇಗಕ್ಕೆ ಒಳಗಾಗುತ್ತಾರೆ. ನನಗೆ ಯಾರು ನಾಟಕ ಮಾಡುತ್ತಿದ್ದಾರೆ, ಯಾರು ನಿಜವಾದ ಕಾಳಜಿ ತೋರುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಅಂತವರಿಗೆ ನಾನು ಹೇಳುವುದು, ಸಪ್ಪಗೆ ಇದ್ದೀನಿ ಎಂದರೆ ಏನೋ ಆಗಿದೆ ಎಂದಲ್ಲ. ಬದಲಿಗೆ ನನ್ನೊಳಗೆ ಹೊಸದಾದ ಆಲೋಚನೆಗಳು, ಹೊಸ ದಾರಿಗಳು ತೆರೆದುಕೊಳ್ಳುತ್ತಿವೆ ಎಂದರ್ಥ.

* ನನ್ನ ಮದುವೆಯ ಬಗ್ಗೆ ಸಾಕಷ್ಟು ಜನ ಕೇಳುತ್ತಾರೆ. ಅವರಿಗೆ ನನ್ನ ಮದುವೆಯಿಂದ ಆಗುವ ಪ್ರಯೋಜನ ಏನಿದೆಯೋ ಗೊತ್ತಿಲ್ಲ. ಆದರೆ ನಾನು ಈಗಾಗಲೇ ನನ್ನ ಕೆಲಸದೊಂದಿಗೆ ಮದುವೆಯಾಗಿದ್ದೇನೆ. ನನ್ನ ಕೆಲಸವೇ ಈಗ ನನ್ನ ಸಂಗಾತಿ. ಇದರೊಂದಿಗೆ ಒಳ್ಳೆಯ ಸಂಬಂಧವೊಂದು ನನ್ನ ಜೊತೆಗೆ ಸಂಗಾತಿಯಾಗಿ ನಡೆದುಬರುತ್ತಿದೆ. ಸದ್ಯಕ್ಕೆ ನನಗೆ ಅಷ್ಟು ಸಾಕು.

ಆಲಿಯಾ ಭಟ್ ಪ್ರೀತಿಗೆ ತಂದೆಯಿಂದ ಸಿಕ್ತು ಗ್ರೀನ್ ಸಿಗ್ನಲ್

*ಕಳೆದ ಐದು ವರ್ಷದಲ್ಲಿ ನಾನು ಸಾಕಷ್ಟು ಬದಲಾಗಿದ್ದೇನೆ. ಬೇರೆಯವ ಮಾತಿಗೆ ಅನುಗುಣವಾಗಿ ಬದುಕುವುದಕ್ಕೆ ಆಗುವುದಿಲ್ಲ ಎನ್ನುವ ಅರಿವು ನನಗಾಗಿದೆ. ಸಮಯ ಇದ್ದ ಹಾಗೆಯೇ ಇರುವುದಿಲ್ಲ. ಅದರೊಂದಿಗೆ ನಾವೂ ಬದಲಾಗುತ್ತಿರುತ್ತೇವೆ. ಸಂಬಂಧಗಳೂ ಬದಲಾಗಬಹುದು. ಆದರೆ ವಾಸ್ತವದಲ್ಲಿ ಇರುವ ಸೌಂದರ್ಯವನ್ನು ಸವಿಯುತ್ತಾ ಮುಂದೆ ಸಾಗಬೇಕು ಅಷ್ಟೇ.