ಕಳೆದ 2 ವರ್ಷದಲ್ಲಿ  ಸಿನಿಮಾದಿಂದ ಹೆಚ್ಚು ಸಂಗ್ರಹವಾದ ತೆರಿಗೆ ಇದಾಗಿದೆ. ಬಾಹುಬಲಿ ಮೊದಲ ಭಾಗದಿಂದಲೂ 8.9 ಕೋಟಿ.ರೂ ಮನರಂಜನಾ ತೆರಿಗೆ ಸಂಗ್ರಹವಾಗಿತ್ತು.  

ಬೆಂಗಳೂರು(ಮೇ.24): ರಾಜಮೌಳಿ ನಿರ್ದೇಶನದ ಬಾಹುಬಲಿ ವಿಶ್ವದಾದ್ಯಂತ ಹೊಸ ದಾಖಲೆ ಬರೆದಿದ್ದು 1500 ಕೋಟಿ ರೂ.ಗೂ ಹೆಚ್ಚು ಗಳಿಕೆಯತ್ತ ಸಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕರ್ನಾಟಕದಲ್ಲಿಯೂ 100 ಕೋಟಿ ಮುಟ್ಟಿದೆ ಎಂದು ಕೆಲವೊಂದು ವರದಿಗಳು ಹೇಳುತ್ತವೆಯಾದರೂ ಖಚಿತ ಮಾಹಿತಿಯಿಲ್ಲ. ಇನ್ನೊಂದು ಮುಖ್ಯ ಸಂಗತಿಯಂದರೆ ಬಾಹುಬಲಿ-2 ಕರ್ನಾಟಕ ಸರ್ಕಾರಕ್ಕೆ 17 ಕೋಟಿ ರೂ. ಮನರಂಜನಾ ತೆರಿಗೆ ಪಾವತಿಸಿದೆ. ಬೆಂಗಳೂರಿನಲ್ಲಿ 13.50 ಕೋಟಿ ರೂ., ಇತರ ಜಿಲ್ಲೆಗಳಲ್ಲಿ 3.50 ಕೋಟಿ ರೂ. ಮನರಂಜನಾ ತೆರಿಗೆ ಸಂಗ್ರಹವಾಗಿದೆ.

ಕಳೆದ 2 ವರ್ಷದಲ್ಲಿ ಸಿನಿಮಾದಿಂದ ಹೆಚ್ಚು ಸಂಗ್ರಹವಾದ ತೆರಿಗೆ ಇದಾಗಿದೆ. ಬಾಹುಬಲಿ ಮೊದಲ ಭಾಗದಿಂದಲೂ 8.9 ಕೋಟಿ.ರೂ ಮನರಂಜನಾ ತೆರಿಗೆ ಸಂಗ್ರಹವಾಗಿತ್ತು.