ಪ್ರೇಮಿಗಳ ’ಕಥೆಯೊಂದು ಶುರುವಾಗಿದೆ’

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 1, Aug 2018, 9:21 AM IST
'Katheyondu Shuruvagide' premier show
Highlights

ಕಥೆಯೊಂದು ಶುರುವಾಗಿದೆ ಚಿತ್ರತಂಡ ಒಂದು ವಿಭಿನ್ನ ಪ್ರೀಮಿಯರ್ ಶೋ ಆಯೋಜಿಸಿದೆ. ಈ ಪ್ರೀಮಿಯರ್ ಶೋನಲ್ಲಿ ಅದೃಷ್ಟಶಾಲಿ ಪ್ರೇಮಿಗಳಿರುತ್ತಾರೆ, ಪ್ರೀತಿಸಿ ಮದುವೆ ಆದವರು ಇರುತ್ತಾರೆ, ಜತೆಗೆ ಮದುವೆ ಆಗಿ 25 ವರ್ಷ ಪೂರೈಸಿದ ಜೋಡಿಗಳು ಇರುತ್ತಾರೆ. 

ಬೆಂಗಳೂರು (ಆ. 01): ಕಥೆಯೊಂದು ಶುರುವಾಗಿದೆ ಚಿತ್ರತಂಡ ಒಂದು ವಿಭಿನ್ನ ಪ್ರೀಮಿಯರ್ ಶೋ ಆಯೋಜಿಸಿದೆ. ಈ ಪ್ರೀಮಿಯರ್ ಶೋನಲ್ಲಿ ಅದೃಷ್ಟಶಾಲಿ ಪ್ರೇಮಿಗಳಿರುತ್ತಾರೆ, ಪ್ರೀತಿಸಿ ಮದುವೆ ಆದವರು ಇರುತ್ತಾರೆ, ಜತೆಗೆ ಮದುವೆ ಆಗಿ 25 ವರ್ಷ ಪೂರೈಸಿದ ಜೋಡಿಗಳು ಇರುತ್ತಾರೆ.

ಅಷ್ಟೇ ಯಾಕೆ, ಲವ್ ಬ್ರೇಕಪ್ ಆದವರೂ ಇರುತ್ತಾರೆ. ಅವರೊಂದಿಗೆ ರಕ್ಷಿತ್ ಶೆಟ್ಟಿ, ದಿಗಂತ್ ಇರುತ್ತಾರೆ. ಅವರೆಲ್ಲ ಸೇರಿ ಆ ದಿನ ‘ಕಥೆಯೊಂದು ಶುರುವಾಗಿದೆ’ ಚಿತ್ರದ ವಿಶೇಷ ಪ್ರದರ್ಶನ ವೀಕ್ಷಿಸುತ್ತಾರೆ. ಗುರುವಾರ ಸಂಜೆ ಬೆಂಗಳೂರಿನ ಜಿಟಿ ಮಾಲ್‌ನಲ್ಲಿ ಈ ಶೋ ಏರ್ಪಡಾಗಿದೆ. ಹೀಗೊಂದು ವಿಶೇಷ ಪ್ರೀಮಿಯರ್ ಶೋ ಮೂಲಕ ತೆರೆಗೆ ಬರಲು ಸಜ್ಜಾಗಿದೆ ‘ಕತೆಯೊಂದು ಶುರುವಾಗಿದೆ’ ಚಿತ್ರ.

ರಕ್ಷಿತ್ ಶೆಟ್ಟಿ ಹಾಗೂ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ, ಸೆನ್ನಾ ಹೆಗ್ಡೆ ನಿರ್ದೇಶನದ ‘ಕಥೆಯೊಂದು ಶುರುವಾಗಿದೆ’ ಚಿತ್ರತಂಡ ಪ್ರೀಮಿಯರ್ ಶೋ ಸಲುವಾಗಿಯೇ ಪ್ರೀತಿಸಿದವರು, ಪ್ರೀತಿಸಿ ಮದುವೆ ಆದವರಿಂದ ಪ್ರೇಮ ಕತೆಗಳನ್ನು ಆನ್‌ಲೈನ್ ಮೂಲಕ ಆಹ್ವಾನಿಸಿತ್ತು. ಆಯ್ಕೆಯಾದವರಿಗೆ ಪ್ರೀಮಿಯರ್ ಶೋ ಟಿಕೆಟ್ ನೀಡುತ್ತೇವೆ ಎಂದಿತ್ತು. ಇದುವರೆಗೂ 25 ಕ್ಕೂ ಹೆಚ್ಚು ಜೋಡಿಗಳು ತಮ್ಮ ಪ್ರೇಮಕತೆಗಳನ್ನು ವಿಡಿಯೋ ಮೂಲಕ ದಾಖಲಿಸಿ, ಕತೆಯೊಂದು ಶುರುವಾಗಿದೆ ಚಿತ್ರ ತಂಡಕ್ಕೆ ಕಳುಹಿಸಿಕೊಟ್ಟಿದ್ದಾರೆ.

ಅಷ್ಟೂ ಕತೆಗಳು ಈಗ ‘ಕತೆಯೊಂದು ಶುರುವಾಗಿದೆ’ ಚಿತ್ರದ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಲಭ್ಯವಿದೆ. ದಿಗಂತ್ ಹಾಗೂ ಪೂಜಾ ದೇವರಿಯಾ ಅಭಿನಯದ ಈ ಚಿತ್ರ ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ. ಈಗಾಗಲೇ ಅಮೆರಿಕ, ಇಂಗ್ಲೆಂಡ್ ಹಾಗೂ ಜರ್ಮನಿಯಲ್ಲಿ 11 ಪ್ರೀಮಿಯರ್ ಶೋ ನಡೆದಿವೆ. ಈಗ ರಾಜ್ಯಾದ್ಯಂತ 80 ಕ್ಕೂ ಹೆಚ್ಚು ಚಿತ್ರಮಂದಿರಗಳು ಸೇರಿದಂತೆ ವಿದೇಶದಲ್ಲೂ ಹಲವು ಕಡೆ ಚಿತ್ರದ ರಿಲೀಸ್‌ಗೆ
ಚಿತ್ರ ತಂಡ ಸಿದ್ಧತೆ ನಡೆಸಿದೆ.

loader