ಕೋಲ್ಕತ್ತಾ[ಏ.25]: ಬುಧವಾರದಂದು ಪ್ರಧಾನಿ ಮೋದಿ ಮೊದಲ ಬಾರಿ ರಾಜಕೀಯೇತರ ಸಂದರ್ಶನದಲ್ಲಿ ಪಾಲ್ಗೊಂಡು ತಮ್ಮ ವೈಯುಕ್ತಿಕ ಜೀವನದ ಕುತೂಹಲಕಾರಿ ವಿಚಾರಗಳನ್ನು ಬಹಿರಂಗಪಡಿಸಿದ್ದರು. ಇದೇ ಸಂದರ್ಭದಲ್ಲಿ ಮಮತಾ ದೀದೀ ತನಗೆ ವರ್ಷಕ್ಕೆರಡು ಕುರ್ತಾ ಕಳುಹಿಸಿಕೊಡುತ್ತಾರೆಂಬ ವಿಚಾರವನ್ನೂ ಬಹಿರಂಗಪಡಿಸಿದ್ದರು. ಸದ್ಯ ಪ್ರಧಾನಿ ಮೋದಿಯ ಈ ಮಾತುಗಳಿಗೆ ದೀದೀ ಪ್ರತಿಕ್ರಿಯಿಸಿದ್ದಾರೆ.

'ಅಕ್ಕಿ' ಜೊತೆ ಮೋದಿ ಮಾತುಕತೆ: 'ಮಮತಾ ದೀದಿ ವರ್ಷಕ್ಕೆರಡು ಕುರ್ತಾ ಕಳುಹಿಸಿಕೊಡ್ತಾರೆ'

ಬುಧವಾರದಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳದ ಪ್ರಧಾನಿ ಮಮತಾ ಬ್ಯಾನರ್ಜಿ 'ಹಲವಾರು ಬಾರಿ ನಾನು ಗಿಫ್ಟ್ ಹಾಗೂ ಸಿಹಿತಿಂಡಿ ಕಳುಹಿಸಿರಬಹುದು, ಹೀಗಂತ ಮತ ಅವರಿಗೆ ಒಂದು ಮತವನ್ನೂ ನೀಡಲಾರೆ' ಎಂದಿದ್ದಾರೆ. ಹಿಗಿದ್ದರೂ ಮಮತಾ ಬ್ಯಾನರ್ಜಿ ತಮ್ಮ ಮಾತುಗಳಲ್ಲಿ ಮೋದಿ ಹೆಸರು ಉಲ್ಲೇಕಿಸಿಲ್ಲ ಎಂಬುವುದು ಗಮನಾರ್ಹ.

ವಿಫಲ ರಾಜಕಾರಣಿಯಿದ ನಟನಾಗುವ ಯತ್ನ ಎಂದ ಕಾಂಗ್ರೆಸ್!

ನಟ ಅಕ್ಷಯ್ ಕುಮರ್ ಜೊತೆಗಿನ ಮಾತುಕತೆಯಲ್ಲಿ ತನ್ನ ಕಟು ವಿರೋಧಿಗಳಲ್ಲಿ ಒಬ್ಬರಾಗಿರುವ ಮಮತಾ ದೀದಿ ಖುದ್ದು ನನಗೆ ಕುರ್ತಾ ಆಯ್ಕೆ ಮಾಡುತ್ತಾರೆ ಹಾಗೂ ಪ್ರತಿ ವರ್ಷ ಕೊಡುಗೆಯ ರೂರದಲ್ಲಿ ಕಳುಹಿಸಿಕೊಡುತ್ತಾರೆ ಎಂದಿದ್ದರು. ಈ ವಿಚರ ಭರೀ ಸದ್ದು ಮಾಡಿತ್ತು. ಇದೇ ಸಂದರ್ಭದಲ್ಲಿ ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬೀ ಆಜಾದ್ ಜೊತೆಗಿನ ತನ್ನ ನಂಟನ್ನೂ ಬಹಿರಂಗಪಡಿಸಿದ್ದರು.