ನವದೆಹಲಿ(ಏ.24): ಬಾಲಿವುಡ್ ನಟ ಅಕ್ಷಯ್ ಕುಮಾರ್ ನಡೆಸಿದ ಪ್ರಧಾನಿ ಮೋದಿ ಅವರ ಸಂದರ್ಶನವನ್ನು ಕಾಂಗ್ರೆಸ್ ಲೇವಡಿ ಮಾಡಿದೆ.

ಅಕ್ಷಯ್ ಕುಮಾರ್ ನಡೆಸಿರುವ ಸಂದರ್ಶನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಇದು ವಿಫಲ ರಾಜಕಾರಣಿಯೋರ್ವ ಸಿನಿಮಾ ನಟನಾಗಲು ನಡೆಸಿರುವ ಯತ್ನ ಎಂದು ವವ್ಯಂಗ್ಯವಾಡಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ವಕ್ತಾರ ರಣ್ದೀಪ್ ಸುರ್ಜೆವಾಲಾ, ಪ್ರಧಾನಿ ಮೋದಿ ಇದೇ ಮೇ.23ರಂದು ಜನರಿಂದ ತಿರಸ್ಕರಿಸಲ್ಪಡುತ್ತಿದ್ದು ಇದೇ ಕಾರಣಕ್ಕೆ ನಟನಾ ವೃತ್ತಿಯನ್ನು ಈಗಲೇ ಆಯ್ದುಕೊಂಡಿದ್ದಾರೆ ಎಂದು ಕುಹುಕವಾಡಿದ್ದಾರೆ.

ಅಕ್ಷಯ್ ಕುಮಾರ್ ಓರ್ವ ಅದ್ಭುತ ನಟನಾಗಿದ್ದು,  ಅವರ ನಟನೆಯನ್ನು ಎಲ್ಲರೂ ಇಷ್ಟ ಪಡುತ್ತಾರೆ. ಆದರೆ ಪ್ರಧಾನಿ ಮೋದಿ ವಿಫಲ ರಾಜಕಾರಣಿಯಾಗಿದ್ದು, ನಟನೆಯತ್ತ ಮುಖ ಮಾಡಿದ್ದಾರೆ ಎಂದು ಸುರ್ಜೆವಾಲ ಪ್ರಧಾನಿಯವರ ಕಾಲೆಳೆದಿದ್ದಾರೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಏ.18ರಂದು ಮುಗಿದಿದ್ದು, ಏ.23 ರಂದು ಎರಡನೇ ಹಂತದ ಮತದಾನ ಮುಕ್ತಾಯ ಕಂಡಿದೆ. ನಡೆಯಲಿದೆ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.