ಬೆಂಗಳೂರು(ಮಾ.27): ಲೋಕಸಭೆ ಚುನಾವಣೆಗೆ ದೇಶ ಸಜ್ಜಾಗಿದೆ. ಅದರಂತೆ ರಾಜ್ಯ ರಾಜಧಾನಿ ಬೆಂಗಳೂರು ಕೂಡ ಸಾರ್ವತ್ರಿಕ ಚುನಾವಣೆಗೆ ಎದುರು ನೋಡುತ್ತಿದೆ.

ಬೆಂಗಳೂರಿನಲ್ಲಿ ಒಟ್ಟು ಮೂರು ಲೋಕಸಭಾ ಕ್ಷೇತ್ರಗಳಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಬೆಂಗಳೂರು ದಕ್ಷಿಣ, ಮಧ್ಯ ಮತ್ತು ಉತ್ತರ ಲೋಕಸಭಾ ಕ್ಷೇತ್ರಗಳಿವೆ. ಈ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು 28 ವಿಧಾನಸಭಾ ಕ್ಷೇತ್ರಗಳು ಬರುತ್ತವೆ.

ಆದರೆ ಲೋಕಸಭಾ ಕ್ಷೇತ್ರಗಳು ಮತ್ತು ವಿಧಾನಸಭಾ ಕ್ಷೇತ್ರಗಳು ಅದಲು ಬದಲಾಗುವುದರಿಂದ ಮತದಾರರಲ್ಲಿ ಕೆಲವೊಮ್ಮೆ ಗೊಂದಲಗಳು ಉಂಟಾಗುವುದು ಸಹಜ. ಉದಾಹರಣೆಗೆ ಒಂದು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುವ ಮತದಾರ ಲೋಕಸಭೆಗೆ ಮತ್ತೊಂದು ಕ್ಷೇತ್ರದ ವ್ಯಾಪ್ತಿಗೆ ಬರುತ್ತಾನೆ. ಇಂತಹ ಸಂದರ್ಭದಲ್ಲಿ ಮತದಾರರಲ್ಲಿ ಗೊಂದಲ ಉಂಟಾಗುವುದು ಸಹಜ.

ಅದರಂತೆ ನಿಮ್ಮ ಸುವರ್ಣನ್ಯೂಸ್.ಕಾಂ ಬೆಂಗಳೂರು ನಗರಕ್ಕೆ ಸಂಬಂಧಿಸಿದಂತೆ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳ ಸಂಪೂರ್ಣ ಮಾಹಿತಿ ನೀಡಿದ್ದು, ಯಾವ ವಿಧಾನಸಭಾ ಕ್ಷೇತ್ರಗಳು ಯಾವ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತವೆ ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು ದಕ್ಷಿಣ:

ನಗರದ ಪ್ರಮುಖ ಲೋಕಸಭಾ ಕ್ಷೇತ್ರವಾಗಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಬರುತ್ತವೆ.

1. ಗೋವಿಂದರಾಜ್ ನಗರ-166-ಬಿಜೆಪಿ

2. ವಿಜಯನಗರ-167-ಕಾಂಗ್ರೆಸ್

3. ಚಿಕ್ಕಪೇಟೆ-169-ಬಿಜೆಪಿ

4. ಬಸವನಗುಡಿ-170-ಬಿಜೆಪಿ

5. ಪದ್ಮನಾಭನಗರ-171-ಬಿಜೆಪಿ

6. ಬಿಟಿಎಂ ಲೇಔಟ್-172-ಕಾಂಗ್ರೆಸ್

7. ಜಯನಗರ-173-ಕಾಂಗ್ರೆಸ್

8.ಬೊಮ್ಮನಹಳ್ಳಿ-175-ಬಿಜೆಪಿ

ಬೆಂಗಳೂರು ಮಧ್ಯ:

ಇನ್ನು ಬೆಂಗಳೂರು ಮಧ್ಯ ಲೋಕಸಭಾ ಕ್ಷೇತ್ರದತ್ತ ಗಮನಹರಿಸುವುದಾದರೆ ಈ ಕ್ಷೇತ್ರದಲ್ಲೂ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿವೆ.

1. ಸರ್ವಜ್ಞನಗರ-160-ಕಾಂಗ್ರೆಸ್

2. ಸಿ.ವಿ. ರಾಮನ್‌ ನಗರ-161-ಬಿಜೆಪಿ

3. ಶಿವಾಜಿನಗರ-162-ಕಾಂಗ್ರೆಸ್

4. ಶಾಂತಿನಗರ-163-ಕಾಂಗ್ರೆಸ್

5. ಗಾಂಧಿನಗರ-164-ಕಾಂಗ್ರೆಸ್

6. ರಾಜಾಜಿನಗರ-165-ಬಿಜೆಪಿ

7. ಚಾಮರಾಜಪೇಟೆ-168-ಕಾಂಗ್ರೆಸ್

8. ಮಹದೇವಪುರ-174-ಬಿಜೆಪಿ

ಬೆಂಗಳೂರು ಉತ್ತರ:

ಅದರಂತೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲೂ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿವೆ.

1. ಕೆಆರ್ ಪುರಂ-151-ಕಾಂಗ್ರೆಸ್

2. ಬ್ಯಾಟರಾಯನಪುರ-152-ಕಾಂಗ್ರೆಸ್

3. ಯಶವಂತಪುರ-153-ಕಾಂಗ್ರೆಸ್

4. ದಾಸರಹಳ್ಳಿ-155-ಜೆಡಿಎಸ್

5. ಮಹಾಲಕ್ಷ್ಮಿ ಲೇಔಟ್-156-ಜೆಡಿಎಸ್

6. ಮಲ್ಲೇಶ್ವರಂ-157-ಬಿಜೆಪಿ

7. ಹೆಬ್ಬಾಳ-158-ಕಾಂಗ್ರೆಸ್

8.ಪುಲಕೇಶಿನಗರ-159-ಕಾಂಗ್ರೆಸ್

ಅದರಂತೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಬೆಂಗಳುರು ನಗರದ 4 ವಿಧಾನಸಭಾ ಕ್ಷೇತ್ರಗಳು ಒಳಪಡುತ್ತವೆ.

1. ಹೊಸಕೋಟೆ-178-ಕಾಂಗ್ರೆಸ್

2. ದೇವನಹಳ್ಳಿ-179-ಜೆಡಿಎಸ್

3. ದೊಡ್ಡಬಳ್ಳಾಪೂರ-180-ಕಾಂಗ್ರೆಸ್

4. ನೆಲಮಂಗಲ-181-ಜೆಡಿಎಸ್

ಇನ್ನು ಪ್ರತಿ ವಿಧಾನಸಭಾ ಕ್ಷೇತ್ರಗಳನ್ನೂ ಬಿಬಿಎಂಪಿ ವಾರ್ಡ್ ವ್ಯಾಪ್ತಿಗೆ ಒಳಪಡಿಸಿದ್ದು, ಪ್ರತಿ ವಾರ್ಡ್ ಯಾವ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುತ್ತದೆ ಮತ್ತು ಆ ವಿಧಾನಸಭಾ ಕ್ಷೇತ್ರ ಯಾವ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ ಎಂಬುದನ್ನು ಮತದಾರ ಗಮನಿಸಬೇಕಾದ ಅಗತ್ಯವಿದೆ.

ಒಟ್ಟಿನಲ್ಲಿ ಮತದಾರ ತಾನು ಒಳಪಡುವ ವಿಧಾನಸಭಾ ಕ್ಷೇತ್ರ ಮತ್ತು ಲೋಕಸಭಾ ಕ್ಷೇತ್ರದ ಕುರಿತು ಮಾಹಿತಿ ಪಡೆದು ಸರಿಯಾಗಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವಂತೆ ಸುವರ್ಣನ್ಯೂಸ್.ಕಾಂ ಮನವಿ ಮಾಡುತ್ತದೆ.