Asianet Suvarna News Asianet Suvarna News

ಬೆಂಗಳೂರು ಸೆಂಟ್ರಲ್: ಬೆರಳ ತುದಿಯಲ್ಲಿದೆ ನಿಮ್ಮ ವಾರ್ಡ್ ಮಾಹಿತಿ!

ಲೋಕಸಭೆ ಚುನಾವಣೆಗೆ ಸಿದ್ದವಾಗಿದೆ ಭಾರತ| ಸಾರ್ವತ್ರಿಕ ಚುನಾವಣೆ ಎದುರು ನೋಡುತ್ತಿದೆ ಬೆಂಗಳೂರು| ಬೆಂಗಳೂರು ನಗರದಲ್ಲಿವೆ ಮೂರು ಲೋಕಸಭಾ ಕ್ಷೇತ್ರಗಳು| ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 28 ವಿಧಾನಸಭಾ ಕ್ಷೇತ್ರಗಳು| ಯಾವ ಕ್ಷೇತ್ರ ಯಾವ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ?| ನೀವು ಮತದಾನ ಮಾಡಬೇಕಿರುವ ಮತದಾನ ಕೇಂದ್ರ ಎಲ್ಲಿದೆ?| ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ವಾರ್ಡ್ ವಾರು ಮಾಹಿತಿ| ಸರಿಯಾಗಿ ಮತದಾನದ ಹಕ್ಕು ಚಲಾಯಿಸಲು ಸುವರ್ಣನ್ಯೂಸ್.ಕಾಂ ಮನವಿ|

Wards Information About Bengaluru Central Loksabha Constituency
Author
Bengaluru, First Published Apr 4, 2019, 2:46 PM IST

ಬೆಂಗಳೂರು(ಏ.04): ಲೋಕಸಭೆ ಚುನಾವಣೆಗೆ ಇಡೀ ದೇಶವೇ ಸಜ್ಜಾಗಿದೆ. ಅದರಂತೆ ರಾಜ್ಯ ರಾಜಧಾನಿ ಬೆಂಗಳೂರು ಕೂಡ ಮತದಾನಕ್ಕೆ ಕಾತರದಿಂದ ಕಾದು ಕುಳಿತಿದೆ.

ಬೆಂಗಳೂರಿನಲ್ಲಿ ಒಟ್ಟು ಮೂರು ಲೋಕಸಭಾ ಕ್ಷೇತ್ರಗಳಿದ್ದು, ಬೆಂಗಳೂರು ದಕ್ಷಿಣ, ಬೆಂಗಳೂರು ಸೆಂಟ್ರಲ್, ಬೆಂಗಳೂರು ಉತ್ತರ ಎಂಬ ಮೂರು ಲೋಕಸಭಾ ಕ್ಷೇತ್ರಗಳಿದ್ದು, ನಗರದ ಒಟ್ಟು 24 ವಿಧಾನಸಭಾ ಕ್ಷೇತ್ರಗಳು ಇವುಗಳ ವ್ಯಾಪ್ತಿಗೆ ಒಳಪಡುತ್ತವೆ.

ಅಷ್ಟೇ ಅಲ್ಲದೇ ಬಿಬಿಎಂಪಿಯ ವ್ಯಾಪ್ತಿಯಲ್ಲಿ ಒಟ್ಟು 198 ವಾರ್ಡ್ ಗಳು ಬರುತ್ತವೆ. ಈ ಎಲ್ಲಾ ವಾರ್ಡ್ ಗಳು ವಿಧಾನಸಭಾ ಕ್ಷೇತ್ರ ಮತ್ತು ಲೋಕಸಭಾ ಕ್ಷೇತ್ರಗಳಲ್ಲಿ ಹಂಚಿಕೆಯಾಗಿವೆ.

ಅದರಂತೆ ಬಿಬಿಎಂಪಿ ವ್ಯಾಪ್ತಿಯ ಎಲ್ಲಾ 198 ವಾರ್ಡ್ ಗಳು ಮತ್ತು ಅವು ಒಳಪಡುವ ವಿಧಾನಸಭೆ ಮತ್ತು ಲೋಕಸಭೆ ಕ್ಷೇತ್ರಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ವಾರ್ಡ್ ವಾರು ಮಾಹಿತಿ ಪಡೆದು ಸರಿಯಾದ ಮತಗಟ್ಟೆಯಲ್ಲಿ ಮತ ಚಲಾಯಿಸುವಂತೆ ನಿಮ್ಮ ಸುವರ್ಣನ್ಯೂಸ್.ಕಾಂ ಮನವಿ ಮಾಡುತ್ತದೆ.

Wards Information About Bengaluru Central Loksabha Constituency

 

ಬೆಂಗಳೂರು ಸೆಂಟ್ರಲ್:

ಇನ್ನು ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದತ್ತ ಗಮನಹರಿಸುವುದಾದರೆ ಈ ಕ್ಷೇತ್ರದಲ್ಲೂ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿವೆ.

1. ಸರ್ವಜ್ಞನಗರ-160

2. ಸಿ.ವಿ. ರಾಮನ್‌ ನಗರ-161

3. ಶಿವಾಜಿನಗರ-162

4. ಶಾಂತಿನಗರ-163

5. ಗಾಂಧಿನಗರ-164

6. ರಾಜಾಜಿನಗರ-165

7. ಚಾಮರಾಜಪೇಟೆ-168

8. ಮಹದೇವಪುರ-174

ಅದರಂತೆ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 58 ಬಿಬಿಎಂಪಿ ವಾರ್ಡ್ ಬರುತ್ತವೆ.

ಸಿವಿ ರಾಮನ್ ನಗರ-161:

50-ಬೆನಗನಹಳ್ಳಿ

57-ಸಿವಿ ರಾಮನ್ ನಗರ

58-ಹೊಸ ತಿಪ್ಪಸಂದ್ರ

79-ಸರವಣನಗರ

80-ಹೋಯ್ಸಳನಗರ

88-ಜೀವನ್‌ಭೀಮಾ ನಗರ

113- ಕೋನೆನ ಅಗ್ರಹಾರ

ಚಾಮರಾಜಪೇಟೆ-168:

135-ಪದರಾಯನಪುರ ಚಾಮರಾಜಪೇಟೆ

136-ಜಗಜೀವನ್ ರಾಮ್‌ನಗರ

137-ರಾಯಪುರಂ

138-ಬಳವಾಧಿನಗರ

139-ಕೆ.ಆರ್. ಮಾರ್ಕೆಟ್

140-ಚಾಮರಾಜಪೇಟೆ

141-ಆಜಾದ್‌ನಗರ

ಗಾಂಧಿನಗರ-164:

77-ದತ್ತಾತ್ರೇಯ ದೇವಸ್ಥಾನ

94-ಗಾಂಧಿನಗರ

95-ಸುಭಾಷ್‌ನಗರ

96-ಓಕಳಿಪುರಂ

109-ಚಿಕ್ಕಪೇಟ್

120-ಕಾಟನ್‌ಪೇಟ್

121-ಬಿನ್ನಿಪೇಟ್

ಮಹದೇವಪುರ-174:

54-ಹೂಡಿ

82-ಗರುಡಾಚಾರ್ಯಪಾಳ್ಯ

83-ಕಾಡುಗೋಡಿ

84-ಹಗದೂರು

85-ದೊಡ್ಡ ನೆಕ್ಕುಂಡಿ

86-ಮಾರತ್ ಹಳ್ಳಿ

149-ವರ್ತೂರು

150-ಬೆಳ್ಳಂದೂರು

ರಾಜಾಜಿನಗರ-165:

97-ದಯಾನಂದನಗರ

98-ಪ್ರಕಾಶ್‌ನಗರ

99-ರಾಜಾಜಿನಗರ

100-ಬಸವೇಶ್ವರನಗರ

101-ಕಾಮಾಕ್ಷಿಪಾಳ್ಯ

107-ಶಿವನಗರ

108-ಶ್ರೀರಾಮ್ ಮಂದಿರ

ಸರ್ವಜ್ಞನಗರ-160:

27-ಬಾಣಸವಾಡಿ

28-ಕಮ್ಮನಹಳ್ಳಿ

29-ಕಚರಕನಹಳ್ಳಿ

30-ಕಾಡುಗೊಂಡನಹಳ್ಳಿ

23-ನಾಗವಾರ

24-ಹೆಚ್.ಬಿ.ಆರ್. ಲೇಔಟ್

49-ಲಿಂಗರಾಜಪುರ

50-ಮಾರುತಿಸೇವಾನಗರ

ಶಾಂತಿನಗರ-163:

89-ಜೋಗುಪಾಳ್ಯ

111-ಶಾಂತಲಾನಗರ

112-ದೊಮ್ಲುರು

114-ಅಗರ

115-ವಾನರಪೇಟೆ

116-ನೀಲಸಂದ್ರ

117-ಶಾಂತಿನಗರ

ಶಿವಾಜಿನಗರ-162:

62-ರಾಮಸ್ವಾಮಿಪಾಳ್ಯ

63-ಜಯಮಹಲ್

90-ಹಲಸೂರು

91-ಭಾರತಿನಗಹರ

92-ಶಿವಾಜಿನಗರ

93-ವಸಂತ್ ನಗರ

110-ಸಂಪಂಗಿರಾಮನಗರ

 

ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ವಿಧಾನಸಭೆ ಕ್ಷೇತ್ರ ಮತ್ತು ಜನಪ್ರತಿನಿಧಿಗಳು:

1. ಸರ್ವಜ್ಞನಗರ-160-ಕಾಂಗ್ರೆಸ್-ಕೆಜೆ ಜಾರ್ಜ್

2. ಸಿ.ವಿ. ರಾಮನ್‌ ನಗರ-161-ಬಿಜೆಪಿ-ರಘುಮೂರ್ತಿ

3. ಶಿವಾಜಿನಗರ-162-ಕಾಂಗ್ರೆಸ್-ರೋಷನ್ ಬೇಗ್

4. ಶಾಂತಿನಗರ-163-ಕಾಂಗ್ರೆಸ್-ಎನ್.ಎ. ಹ್ಯಾರಿಸ್

5. ಗಾಂಧಿನಗರ-164-ಕಾಂಗ್ರೆಸ್-ದಿನೇಶ್ ಗುಂಡೂರಾವ್

6. ರಾಜಾಜಿನಗರ-165-ಬಿಜೆಪಿ-ಸುರೇಶ್ ಕುಮಾರ್

7. ಚಾಮರಾಜಪೇಟೆ-168-ಕಾಂಗ್ರೆಸ್-ಜಮೀರ್ ಅಹ್ಮದ್

8. ಮಹದೇವಪುರ-174-ಬಿಜೆಪಿ-ಅರವಿಂದ್ ಲಿಂಬಾವಳಿ

2019ರ ಲೋಕಸಭೆ ಚುನಾವಣೆಗೆ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ರಿಜ್ವಾನ್ ಅರ್ಶದ್ ಮತ್ತು ಬಿಜೆಪಿ ಅಭ್ಯರ್ಥಿಯಾಗಿ ಪಿ.ಸಿ. ಮೋಹನ್ ಕಣಕ್ಕಿಳಿದಿದ್ದಾರೆ. ಅಲ್ಲದೇ ಈ ಬಾರಿ ನಟ ಪ್ರಕಾಶ್ ರಾಜ್ ಪಕ್ಷೇತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಕ್ಷೇತ್ರದಲ್ಲಿ ಚುನಾವಣೆಯ ರಂಗು ಏರುವಂತೆ ಮಾಡಿದೆ.

Follow Us:
Download App:
  • android
  • ios