ನವದೆಹಲಿ[ಮಾ.21]: ಬಿಜೆಪಿ ದೇಶಾದ್ಯಂತ ಹಮ್ಮಿಕೊಂಡಿರುವ ‘ನಾನೂ ಕಾವಲುಗಾರ’ (ಮೈ ಭಿ ಚೌಕೀದಾರ) ಆಂದೋಲನಕ್ಕೆ ತಿರುಗೇಟು ನೀಡಿರುವ ಆಪ್‌ ಮುಖಂಡ ಅರವಿಂದ್‌ ಕೇಜ್ರಿವಾಲ್‌, ಜನರು ತಮ್ಮ ಮಕ್ಕಳು ಸಹ ಕಾವಲುಗಾರ ಆಗಬೇಕೆಂದಿದ್ದರೇ ಮೋದಿಗೆ ಮತ ಹಾಕಲಿ ಎಂದು ಕಾಲೆಳೆದಿದ್ದಾರೆ.

ಅದಾಗದೇ ಉತ್ತಮ ಶಿಕ್ಷಣ ಪಡೆದು, ವೈದ್ಯನೋ, ಇಂಜನೀಯರ್‌, ವಕೀಲ ನೀಡಬೇಕೆಂದಿದ್ದರೇ ಆಪ್‌ಗೆ ಮತ ನೀಡಲಿ ಎಂದು ಬುಧವಾರ ಹಿಂದಿ ಭಾಷೆಯಲ್ಲಿ ಟ್ವೀಟ್‌ ಮಾಡಿದ್ದಾರೆ. ಆದರೆ ಹೀಗೆ ಕಾವಲುಗಾರರರನ್ನು ಕೇವಲವಾಗಿ ಕಾಣುವ ಕೇಜ್ರಿವಾಲ್‌ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

‘ನಿಮ್ಮ ಮಕ್ಕಳು ಚೌಕಿದಾರರಾಗಬೇಕು ಅಂತಾದ್ರೆ ಮೋದಿಗೆ ವೋಟ್ ಹಾಕಿ’!

ಕಾವಲುಗಾರರ ಹುದ್ದೆಯನ್ನು ಕೀಳು ಎಂದು ಪರಿಗಣಿಸಿದ ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿದೆ. ಈ ನಡುವೆ ಕೇಜ್ರಿ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ, ಸುಳ್ಳುಗಾರನಾಗಿರುವುದಕ್ಕಿಂತ ಕಾವಲುಗಾರನಾಗಿರುವುದು ಉತ್ತಮ ಎಂದಿದೆ.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು 90 ಕೋಟಿ ಮಂದಿ ಅರ್ಹರಾಗಿದ್ದಾರೆ