ನವದೆಹಲಿ(ಮಾ.20): ‘ಒಂದು ವೇಳೆ ನಿಮ್ಮ ಮಕ್ಕಳು ಚೌಕಿದಾರ(ಕಾವಲುಗಾರ)ರಾಗಬೇಕು ಎಂದು ನೀವು ಬಯಸುವುದಾದರೆ ಖಂಡಿತ ನರೇಂದ್ರ ಮೋದಿ ಅವರಿಗೆ ಮತ ಹಾಕಿ..’ ಹೀಗೆ ಹೇಳಿದವರು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್.

ಬಿಜೆಪಿಯ #MainBhiChowkidar ಅಭಿಯಾನದ ಕುರಿತು ವ್ಯಂಗ್ಯವಾಡಿರುವ ಕೇಜ್ರಿವಾಲ್, ಬಿಜೆಪಿ ದೇಶದ ಮಕ್ಕಳನ್ನು ಚೌಕಿದಾರರನ್ನಾಗಿ ಮಾಡಿ ತಾವು ಮಾತ್ರ ಅಧಿಕಾರ ಅನುಭವಿಸುವ ಹುನ್ನಾರ ನಡೆಸಿದೆ ಎಂದು ಕಿಡಿಕಾರಿದ್ದಾರೆ.

ನಿಮ್ಮ ಮಕ್ಕಳು ಚೌಕಿದಾರರಾಗಬೇಕು ಎಂದು ನೀವು ಬಯಸಿದೆ ಮೋದಿ ಅವರಿಗೆ ಮತ ಹಾಕಿ. ನಿಮ್ಮ ಮಕ್ಕಳು ಉತ್ತಮ ನಾಗರಿಕರಾಗಬೇಕಾದರೆ ವಿದ್ಯಾವಂತ ಆಪ್ ಅಭ್ಯರ್ಥಿಗಳಿಗೆ ಮತ ನೀಡಿ ಎಂದು ಕೇಜ್ರಿವಾಲ್ ಮನವಿ ಮಾಡಿದ್ದಾರೆ.