ಎಂಎಲ್‌ಎ ಎಲೆಕ್ಷನ್‌ನಲ್ಲಿ ಸೋತಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ 'ಎಂಪಿ'ಯಾಗಿ ಆಯ್ಕೆಯಾಗಿದ್ದು ಹೇಗೆ?
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸಂಸದ ಸ್ಥಾನಕ್ಕೆ ಕಾಂಗ್ರೆಸ್‌ನ ಅಂಜಲಿ ನಿಂಬಾಳ್ಕರ್ ವಿರುದ್ಧ ಸ್ಪರ್ಧಿಸಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಇದು ನಿಜವಾಗಿಯೂ ಅಗ್ನಿ ಪರೀಕ್ಷೆಯೇ ಆಗಿತ್ತು. ಕಾರಣ, ಕೆನರಾ ಕ್ಷೇತ್ರದಲ್ಲಿ ಈವರೆಗೂ ಸಂಸದರಾಗಿದ್ದ ಅನಂತ್ ಕುಮಾರ್ ಹೆಗಡೆ..
ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ವಿರುದ್ಧ ಗೆದ್ದು ಬೀಗಿರುವ ಮಾಜಿ ಎಂಎಲ್‌ಎ ವಿಶ್ವೇಶ್ವರ ಹೆಗಡೆ ಕಾಗೇರಿ, ಮತದಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಆದರೆ, ಹಲವರು ಈ ಗೆಲುವನ್ನು ಕಾಗೇರಿ ಅವರ ಮರುಜನ್ಮ ಎಂದೇ ಬಣ್ಣಿಸುತ್ತಿದ್ದಾರೆ. ಕಾರಣ, ಆರು ಬಾರಿ ಎಂಎಲ್‌ಎ ಆಗಿ ಸತತ ಜಯಭೇರಿ ಭಾರಿಸಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ, ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು.
ಸತತ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅನಿರೀಕ್ಷಿತ ಸೋಲು ಅನುಭವಿಸಿದ್ದರು. ಕಾಗೇರಿ ವಿರುದ್ಧ 'ಕಾಂಗ್ರೆಸ್'ನ ಭೀಮಣ್ಣ ನಾಯ್ಕ ಅವರು ಕೇವಲ 8000 ಆಸುಪಾಸು ಮತಗಳ ಅಂತರದಿಂದ ಜಯಭೇರಿ ಭಾರಿಸಿದ್ದರು. ಮಾಜಿ ಎಂಎಲ್‌ಎ ಆಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು, ಹಾಲಿ ಸಂಸದರಾಗಿರುವ ಅನಂತ್ ಕುಮಾರ್ ಹೆಗಡೆ ಅವರನ್ನು ಸೈಡ್‌ಗೆ ಸರಿಸಿ ಟಿಕೆಟ್ ಕೊಟ್ಟಾಗಲೇ ಬಹಳಷ್ಟು ಜನರಿಗೆ ಅಚ್ಚರಿಯಾಗಿತ್ತು.
ಹಿಮಾಚಲ ಪ್ರದೇಶದ 'ಮಂಡಿ'ಯಲ್ಲಿ ಗೆದ್ದು ಸಂಸದೆಯಾದ ಬಾಲಿವುಡ್ ನಟಿ ಕಂಗನಾ ರಣಾವತ್!
ಆದರೆ, ಅನಂತ್ ಕುಮಾರ್ ಹೆಗಡೆಯವರನ್ನು ಬದಿಗೊತ್ತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಸಂಸದರನ್ನಾಗಿ ಮಾಡಬೇಕೆಂಬ ಹೈಕಮಾಂಡ್ ನಿರ್ಧಾರದ ಹಿಂದೆ ಯಾವುದೋ ಪ್ಲಾನ್ ಅಡಗಿದೆ ಎಂಬುದು ಎಲ್ಲರಿಗೂ ಮನದಟ್ಟಾಗಿದೆ. ಹೈಕಮಾಂಡ್ ಪ್ಲಾನ್ ಏನಿತ್ತು ಎನ್ನುವುದು ಅವರಿಗೇ ಗೊತ್ತು, ಆದರೆ ಅವರ ನಿರ್ಧಾರ ಸರಿಯಾಗಿದೆ ಎಂಬುದೀಗ ಸಾಕ್ಷಿ ಸಮೇತ ಪ್ರೂವ್ ಆಗಿದೆ. ಆದರೆ, ಎಂಎಲ್‌ಎ ಎಲೆಕ್ಷನ್‌ನಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಆಗಿದ್ದ ಅನಿರೀಕ್ಷಿತ ಆಘಾತಕ್ಕೆ ಕಾರಣವೇನು ಎಂಬುದು ಈಗಲೂ ಚರ್ಚೆಯ ಸಂಗತಿಯಾಗಿಯೇ ಉಳಿದಿದೆ.
ಮತ್ತೊಮ್ಮೆ ಸೋತ ಗೀತಾ ಶಿವರಾಜ್ ಕುಮಾರ್, ದೊಡ್ಮನೆ ಸೊಸೆಗೆ ಒಲಿಯದ ಎಂಪಿ ಪಟ್ಟ!
ಅದಿರಲಿ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸಂಸದ ಸ್ಥಾನಕ್ಕೆ ಕಾಂಗ್ರೆಸ್‌ನ ಅಂಜಲಿ ನಿಂಬಾಳ್ಕರ್ ವಿರುದ್ಧ ಸ್ಪರ್ಧಿಸಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಇದು ನಿಜವಾಗಿಯೂ ಅಗ್ನಿ ಪರೀಕ್ಷೆಯೇ ಆಗಿತ್ತು. ಕಾರಣ, ಕೆನರಾ ಕ್ಷೇತ್ರದಲ್ಲಿ ಈವರೆಗೂ ಸಂಸದರಾಗಿದ್ದ ಅನಂತ್ ಕುಮಾರ್ ಹೆಗಡೆ ಅವರಿಗೆ ಟಿಕೆಟ್ ಕೈತಪ್ಪಿ ಅವರು ಸಹಜವಾಗಿಯೇ ಬೇಸರಗೊಂಡಿದ್ದರು. ಜತೆಗೆ, ಪಕ್ಕದ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ್ ಸಹ ಒಮ್ಮೆ ಬಿಜೆಪಿ, ಇನ್ನೊಮ್ಮೆ ಕಾಂಗ್ರೆಸ್ ಎಂದು ಮರಕೋತಿಯಾಟ ಆಡುತ್ತ ಬಿಜೆಪಿಗೆ ದೊಡ್ಡ ತಲೆನೋವು ತರುತ್ತಲೇ ಇದ್ದರು.
ಮಗು ಅಳ್ತಾ ಇದ್ರೆ ನಂಗೆ ಟೆನ್ಷನ್ ಆಗುತ್ತೆ, ಎಲ್ರೂ ಹಾಲು ಕೊಡು ಅಂತಾರೆ, ಆದ್ರೆ... ; ಶ್ರುತಿ ಹರಿಹರನ್
ಹೀಗಾಗಿ, ಸ್ಪರ್ಧೆಯಲ್ಲಿದ್ದ ಕಾಗೇರಿ ಅವರಿಗೆ ಕೇಂದ್ರ ಬಿಜೆಪಿ ನಾಯಕರು ಹಾಗೂ ಮತದಾರರೇ ಶ್ರೀರಕ್ಷೆ ಎಂಬಂತಾಗಿತ್ತು. ಕೊನೆಗೂ ಚುನಾವಣಾ ಫಲಿತಾಂಶ ಬಂದಿದ್ದು, ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಎರಡು ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ ಸಾಧಿಸಿ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಹಾಗಿದ್ದರೆ, ಈ ಗೆಲುವು ನಿಜವಾಗಿಯೂ ಯಾರದು? ಇದಕ್ಕೆ ಉತ್ತರವೇನು? ಇದು ಮೋದಿಯವರ ಗೆಲುವೇ? ಅಥವಾ ಪಕ್ಷ ಹಾಗೂ ಕೇಂದ್ರ ನಾಯಕರೆಲ್ಲರ ಗೆಲುವೇ? ಅಥವಾ, ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರದೇ ಗೆಲುವೇ? ಉತ್ತರವನ್ನು ಅವರವರೇ ಕಂಡುಕೊಳ್ಳಬೇಕಷ್ಟೇ!