ರಾಮನಗರ(ಮಾ.16): ದೇಶದಲ್ಲಿ ಲೋಕಸಭಾ ಚುನಾವಣೆ ಕಣ ರಂಗೇರುತ್ತಿದೆ. ಎಲ್ಲಾ ಪಕ್ಷಗಳು ಅಭ್ಯರ್ಥಿಗಳ ಲಿಸ್ಟ್ ಅಂತಿಮಗೊಳಿಸುತ್ತಿದೆ. ಇದರ ಬೆನ್ನಲ್ಲೇ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಈ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಸ್ಪಷ್ಟ ಪಡಿಸಿದ್ದಾರೆ. 

ಇದನ್ನೂ ಓದಿ: ದೇವೇಗೌಡ್ರ ಪರಮಾಪ್ತ ಪಕ್ಷ ಬಿಟ್ಟ ಹಿಂದಿನ ಲೆಕ್ಕಾಚಾರವನ್ನು ಬಿಚ್ಚಿಟ್ಟ HDK

ರಾಮನಗರ ಬಸ್‌ನಿಲ್ದಾಣದ ಬಳಿ ಮಾತನಾಡಿದ ವಾಟಾಳ್, ರಾಜ್ಯದಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷಗಳು ಸರಿಯಿಲ್ಲ. ಎಲ್ಲಾ ರಾಜಕೀಯ ಪಕ್ಷಗಳು ಅವರ ಏಳಿಗೆಯನ್ನು ಮಾತ್ರ ನೋಡುತ್ತಿದೆ. ಚುನಾವಣೆ ಬಂದಾಗ ಮಾತ್ರ ಜನರ ಬಳಿ ತೆರಳೋ ಪಕ್ಷಗಳು ರಾಜ್ಯದ ಯಾವ ಸಮಸ್ಯೆಯನ್ನೂ ಪರಿಹರಿಸಿಲ್ಲ. ಸಂಸತಿನಲ್ಲಿ ರಾಜ್ಯದ ಸಮಸ್ಯೆ ಬಗ್ಗೆ ಮಾತನಾಡುವ ಸಂಸದರು ಬೇಕು ಎಂದಿದ್ದಾರೆ.

ಇದನ್ನೂ ಓದಿ: ಲೋಕಸಮರದ ಝಳ: ಬಿಯರ್ ದರದಲ್ಲಿ ಭಾರೀ ಹೆಚ್ಚಳ!

ಪಕ್ಷಗಳ ಸಂಸದರು ರಾಜ್ಯದ ಸಮಸ್ಯೆ ಬಗ್ಗೆ ಯಾವತ್ತು ಮಾತನಾಡಿಲ್ಲ. ಮೇಕೆದಾಟು, ಮಹದಾಯಿ ಸೇರಿದಂತೆ ಯಾವ ಸಮಸ್ಯೆಯೂ ಪರಿಹಾರವಾಗಿಲ್ಲ. ಹೀಗಾಗಿ ಕರ್ನಾಟಕ ಹಾಗೂ ಕನ್ನಡಕ್ಕಾಗಿ ನನ್ನದೇ ವಾಟಾಳ್ ಪಕ್ಷದಿಂದ ಲೋಕಸಭೆಗೆ ಸ್ಪರ್ಧೆ ಮಾಡುತ್ತೇನೆ. ಯಾವ ಕ್ಷೇತ್ರ ಅನ್ನೋದನ್ನು ಇನ್ನೆರಡು ದಿನಗಳಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ವಾಟಾಳ್ ಹೇಳಿದ್ದಾರೆ.