ಮನಾಲಿ[ಏ.20]: ಭಾರತದ ದಕ್ಷಿಣದ ತುತ್ತತುದಿಯಲ್ಲಿರುವ ಅಂಡಮಾನ್‌ನಿಂದ ಹಿಡಿದು, ಉತ್ತರದ ಸಿಯಾಚಿನ್‌ ವರೆಗೆ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಸದಾ ಹಿಮದಿಂದ ಆವೃತ್ತವಾಗಿರುವ ಹಿಮಾಚಲ ಪ್ರದೇಶದ ಹಳ್ಳಿಯೊಂದರಲ್ಲಿ ವಿಶ್ವದ ಅತಿ ಎತ್ತರದ ಮತಗಟ್ಟೆಸ್ಥಾ ಪಿಸಲಾಗಿದೆ.

ಸ್ಪಿತಿ ಕಣಿವೆಯ ಹಿಮ ಮರುಭೂಮಿಯಲ್ಲಿರುವ ತಶಿಗಂಜ್‌ ಎಂಬ ಹಳ್ಳಿ ವರ್ಷದ ಎಲ್ಲಾ ಸಮಯದಲ್ಲೂ ಹಿಮದಿಂದಲೇ ಆವೃತ್ತವಾಗಿರುತ್ತದೆ. ಸಮುದ್ರ ಮಟ್ಟದಿಂದ 15,256 ಅಡಿ ಎತ್ತರದಲ್ಲಿರುವ ಈ ಹಳ್ಳಿ 30 ಪುರುಷ ಹಾಗೂ 18 ಮಹಿಳಾ ಮತದಾರರನ್ನು ಹೊಂದಿದ್ದು, ಮೇ 19ರಂದು ಲೋಕಸಭೆ ಚುನಾವಣೆಯ ಮತದಾನ ನಡೆಯಲಿದೆ. ಪ್ರಾರಂಭದಲ್ಲಿ ಗೇಟ್‌ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಮತಗಟ್ಟೆಯನ್ನು ಸ್ಥಾಪಿಸಲು ಉದ್ದೇಶಿಸಲಾಗಿತ್ತು.

ಒಂದು ಮತಕ್ಕಾಗಿ ಸಿಬ್ಬಂದಿಯ 483 ಕಿಮೀ ಪ್ರಯಾಣ: ಮತದಾನ ಮಾಡಿದ್ಲಾ ಮಹಿಳೆ?

ಆದರೆ, ಗೋಡೆಗಳು ಬಿರುಕುಬಿಟ್ಟಕಾರಣದಿಂದ ತಶಿಗಂಜ್‌ನಲ್ಲಿರುವ ಪ್ರವಾಸಿ ಲಾಡ್ಜ್‌ವೊಂದರಲ್ಲಿ ಮತಗಟ್ಟೆಯನ್ನು ತೆರೆಯಲಾಗಿದೆ. ಈ ಕಟ್ಟಡಕ್ಕೆ ಚುನಾವಣಾ ಅಧಿಕಾರಿಗಳು ಮತ್ತು ಮತದಾರರು ತೆರಳಲು ಹಿಮದ ರಾಶಿಯನ್ನು ಬಿಡಿಸಿ ರಸ್ತೆಯನ್ನು ನಿರ್ಮಿಸಬೇಕಿದೆ.

ತಮಿಳುನಾಡಿನಲ್ಲಿ ಕತ್ತೆಗಳ ಮೇಲೆ ಇವಿಎಂ ಸಾಗಣೆ