Asianet Suvarna News Asianet Suvarna News

ತಮಿಳುನಾಡಿನಲ್ಲಿ ಕತ್ತೆಗಳ ಮೇಲೆ ಇವಿಎಂ ಸಾಗಣೆ

ತಮಿಳುನಾಡಿನಲ್ಲಿ ಮತಯಂತ್ರ ವಾಹನಕ್ಕೆ ಜಿಪಿಎಸ್‌ ಬಳಕೆ ಇಲ್ಲ!| ಕಾರಣ, ಎತ್ತರದ ಪ್ರದೇಶಗಳಲ್ಲಿ ಇವಿಎಂ ಸಾಗಣೆಗೆ ಕತ್ತೆ ಬಳಕೆ

When donkeys carried EVMs to remote polling booths in Tamil Nadu
Author
Bangalore, First Published Apr 19, 2019, 7:55 AM IST

ಚೆನ್ನೈ[ಏ.19]: ಪಾರದರ್ಶಕ ಚುನಾವಣೆಗಾಗಿ ಚುನಾವಣಾ ಆಯೋಗ ಮತಯಂತ್ರ ಸಾಗಿಸುವ ವಾಹನಗಳಿಗೆ ಜಿಪಿಎಸ್‌ ಅಳವಡಿಕೆ ಸೇರಿದಂತೆ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ. ಆದರೆ ಈ ತಂತ್ರಜ್ಞಾನ ಎಲ್ಲ ಸಂದರ್ಭದಲ್ಲೂ ಉಪಯೋಗಕ್ಕೆ ಬರುವುದಿಲ್ಲ ಎಂಬುದು ತಮಿಳುನಾಡಿನಲ್ಲಿ ಸಾಬೀತಾಗಿದೆ.

ರಸ್ತೆಯೇ ಇಲ್ಲದ ಗುಡ್ಡಗಾಡು ಪ್ರದೇಶಗಳಿಗೆ ಮತಯಂತ್ರ ಹಾಗೂ ಇನ್ನಿತರೆ ವಸ್ತು ಸಾಗಿಸಲು ಹೆಣಗಾಡುತ್ತಿದ್ದ ಚುನಾವಣಾಧಿಕಾರಿಗಳಿಗೆ ಕತ್ತೆ ಹಾಗೂ ಕುದುರೆಗಳು ನೆರವಾಗಿವೆ. ಧರ್ಮಪುರಿ, ದಿಂಡಿಗಲ್‌, ಈರೋಡ್‌, ನಮಕ್ಕಲ್‌ ಹಾಗೂ ಥೇಣಿ ಜಿಲ್ಲೆಯ ಕೆಲವೊಂದು ಗ್ರಾಮಗಳು ಪರ್ವತ ಪ್ರದೇಶ ಹಾಗೂ ದಟ್ಟಾರಣ್ಯದಲ್ಲಿವೆ. ಅಲ್ಲಿಗೆ ಹೋಗಲು ರಸ್ತೆ ಇಲ್ಲ.

ಹೀಗಾಗಿ ಮತಯಂತ್ರ ಹಾಗೂ ಕಂಟ್ರೋಲ್‌ ಯುನಿಟ್‌ಗಳನ್ನು ಚೀಲಕ್ಕೆ ತುಂಬಿದ ಅಧಿಕಾರಿಗಳು, ಅದನ್ನು ಕತ್ತೆ ಹಾಗೂ ಕುದುರೆ ಹೆಗಲಿಗೇರಿಸಿ ಮತಗಟ್ಟೆಗಳಿಗೆ ಸಾಗಿಸಿದ್ದಾರೆ. ಇನ್ನಿತರೆ ವಸ್ತುಗಳನ್ನು ತಲೆ ಮೇಲೆ ಹೊತ್ತು 9ರಿಂದ 11 ಕಿ.ಮೀ. ದೂರವನ್ನು ಗುಡ್ಡಗಾಡು ಪ್ರದೇಶಗಳಲ್ಲಿ ಕ್ರಮಿಸಿ ಗಮನಸೆಳೆದಿದ್ದಾರೆ.

Follow Us:
Download App:
  • android
  • ios